ಶಿರಸಿ: ಆದಾಯ ತೆರಿಗೆ ಪಾವತಿ ಮಾಡುವದರಿಂದ ಆಗುವ ಲಾಭಗಳ ಕುರಿತು ಆದಾಯ ತೆರಿಗೆ ಇಲಾಖೆಯು ತಾಲೂಕಿನ ಯಡಹಳ್ಳಿಯ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಅಪರೂಪದ ತರಬೇತಿ ನಡೆಸಿತು.
ಕಾಲೇಜಿನ ಹಳೆ ವಿದ್ಯಾರ್ಥಿ, ಪ್ರಸಿದ್ಧ ಲೆಕ್ಕ ಪರಿಶೋಧಕ ಸಿಎ ಮಂಜುನಾಥ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಆದಾರಯ ತೆರಿಗೆ ಪಾವತಿಸುವುದರಿಂದ ಸರಕಾರ ಯಾವ ರೀತಿ ಅಭಿವೃದ್ದಿ ಮಾಡಬಹುದು ಹಾಗೂ ಅದರ ಪ್ರಯೋಜನ ಕುರಿತು ತಿಳುವಳಿಕೆ ನೀಡಿದರು. ವಿದ್ಯಾರ್ಥಿ ಹಂತದಲ್ಲೇ ತೆರಿಗೆ ತಿಳಿದು ಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದೂ ಪ್ರತಿಪಾದಿಸಿದರು.
ಈ ವೇಳೆ ಆದಾಯ ತೆರಿಗೆ ಅಧಿಕಾರಿ ವಿಶ್ವನಾಥ ಉಪ್ಪಿನ , ತೆರಿಗೆ ನಿರೀಕ್ಷಕ ರಿಗೇಶ್, ಪ್ರಾಚಾರ್ಯ ಆರ್.ಟಿ.ಭಟ್ಟ, ಉಪನ್ಯಾಸಕರಾದ ಹರೀಶ ನಾಯಕ, ಶಂಭು ಭಟ್ಟ, ಕಿರಣ್ ನಾಯ್ಕ ಇತರರು ಇದ್ದರು. ಸಿಎ ಕುಮಾರ, ಕಾಲೇಜಿನ ಹಳೆ ವಿದ್ಯಾರ್ಥಿ ಸಿಎ ಗುರುಪ್ರಸಾದ ಹೆಗಡೆ, ಸಿಎ ಗಣೇಶ ಹೆಗಡೆ ಇತರರು ಇದ್ದರು.