• Slide
    Slide
    Slide
    previous arrow
    next arrow
  • ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ

    300x250 AD

    ಜೊಯಿಡಾ: ಜಿಲ್ಲಾ ಕಸಾಪದ 22ನೇ ಉಳವಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಶಾಸಕ ಆರ್.ವಿ.ದೇಶಪಾಂಡೆ ತಾ.ಪಂ ಸಭಾಭವನದಲ್ಲಿ ಬಿಡುಗಡೆ ಮಾಡಿದರು.
    ಶ್ರೀ ಕ್ಷೇತ್ರ ಉಳವಿಯಲ್ಲಿ ಡಿ.17, 18ರಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ನಮೆಗೆಲ್ಲಾ ತುಂಬಾ ಹೆಮ್ಮೆಯ ವಿಷಯ. ಎಲ್ಲರೂ ಸೇರಿ ಸಾಹಿತ್ಯ ಜಾತ್ರೆ ಮಾಡೋಣ. ಈ ಸಮ್ಮೇಳನ ಐತಿಹಾಸಿಕ ಸಮ್ಮೇಳನವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಶ್ರೀಕ್ಷೇತ್ರದ ಆರಾಧ್ಯ ದೈವ ಬಸವಣ್ಣನವರು ವಚನ ಸಾಹಿತ್ಯ ಅರಿತವರು. ಅವರ ಆಶೀರ್ವಾದ ಇರುತ್ತದೆ ಎಂದು ಅವರು ಈ ವೇಳೆ ಹೇಳಿದರು.
    ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಲಾಂಛನದಲ್ಲಿ ಇರುವ ವಿಶೇಷತೆಯನ್ನು ವಿವರಿಸಿದರು. ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ದೇಶಪಾಂಡೆ ಅವರು ಸಮ್ಮೇಳನದ ಸಿದ್ಧತೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ತಾಲೂಕಾ ಅಧ್ಯಕ್ಷ ಪಾಂಡುರoಗ ಪಟಗಾರ ಸ್ವಾಗತಿಸಿದರು. ಶಿಕ್ಷಕ ಯಶವಂತ ನಾಯಕ, ಕಾರ್ಯದರ್ಶಿ ಪ್ರೇಮಾನಂದ ವೆಳಿಪ್ ನಿರ್ವಹಿಸಿದರು.
    ವೇದಿಕೆಯಲ್ಲಿ ತಾ.ಪಂ ಅಧಿಕಾರಿ ಆನಂದ ಬಡಕುಂದ್ರಿ, ಉಳವಿ ದೇವಸ್ಥಾನದ ಅಧ್ಯಕ್ಷ ಗಂಗಾಧರ ಕಿತ್ತೂರ, ಶಂಕರಯ್ಯ ಕಲ್ಮಠ ಶಾಸ್ತ್ರಿ, ಜೊಯಿಡಾ ಸಿಪಿಐ ನಿತ್ಯಾನಂದ ಪಂಡಿತ, ಕ್ಷೇತ್ರ ಶಿಕ್ಷಣಾಧಿಕಾರಿ ಬಶೀರ್ ಅಹ್ಮದ್ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top