Slide
Slide
Slide
previous arrow
next arrow

ಡಿ.8, 9ಕ್ಕೆ ಗಾಂಧಿ ಕುಟಿರದಲ್ಲಿ ಇಫಿಜೀನಿಯಾ, ಮುಕ್ತಧಾರ ನಿನಾಸಂ ನಾಟಕ

300x250 AD

ಯಲ್ಲಾಪುರ: ಹೆಗ್ಗೋಡಿನ ನಿನಾಸಂ ತಂಡದ ತಿರುಗಾಟದ ನಾಟಕ ಪ್ರದರ್ಶನ ಡಿ.8 ಮತ್ತು 9ರಂದು ಸಂಜೆ 6.30ಕ್ಕೆ ಗಾಂಧಿ ಕುಟೀರದಲ್ಲಿ ಇಫಿಜೀನಿಯಾ ಮತ್ತು ಮುಕ್ತಧಾರ ನಡೆಯಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಸೋಮವಾರದಂದು ಪಟ್ಟಣದ ಅಡಿಕೆ ಭವನದಲ್ಲಿ ಅಡಿಕೆ ವ್ಯವಹಾಸ್ಥರ ಸಂಘ ಹಮ್ಮಿಕೊಂಡ `ನೀನಾಸಂ ತಿರುಗಾಟದ ನಾಟಕ ಪ್ರದರ್ಶನದ ಕುರಿತು ಮಾಹಿತಿ ನೀಡುತ್ತಿದ್ದರು. ನಮ್ಮ ಪ್ರದೇಶದಲ್ಲಿ ಸಾಹಿತ್ಯ, ಸಂಗೀತ, ಕಲೆ, ಯಕ್ಷಗಾನ, ನಾಟಕ ಇವುಗಳಿಗೆ ವಿಶೇಷ ಸ್ಥಾನ ಇದೆ. ಅವುಗಳಲ್ಲಿ `ಹೊಸ ಅಲೆ ನಾಟಕವು ಕೂಡ ಪ್ರವರ್ಧಮಾನಕ್ಕೆ ಬರುತ್ತಿದೆ. ಹೆಗ್ಗೋಡಿನ ನಿನಾಸಂ, ಮೈಸೂರಿನ ರಂಗಾಯಣ ಸೇರಿದಂತೆ ಹಲವು ನಾಟಕದ ತಂಡಗಳನ್ನು ಕರೆಸಿ ಇಲ್ಲಿನ ಜನರಿಗೆ ತಲುಪಿಸುವುದು ನಮ್ಮ ಉದ್ಧೇಶವಾಗಿದೆ. ಹೊಸ ಅಲೆ ನಾಟಕದ ಕುರಿತು ಯುವ ಜನಾಂಗಕ್ಕೆ ಆಸಕ್ತಿ ಬೆಳೆಸುವ ಮತ್ತು ಚಿಂತನೆಗೊಳಪಡಿಸುವ ಉದ್ಧೇಶದಿಂದ ನಮ್ಮ ಅಡಿಕೆ ವ್ಯವಹಾರಸ್ಥರ ಸಂಘ ಹಲವು ವರ್ಷಗಳಿಂದ ಸಣ್ಣ ಪ್ರಯತ್ನ ನಡೆಸುತ್ತಿದೆ ಎಂದರು.
ಸಂಘಟಕರಾದ ನಾರಾಯಣ ಭಟ್ಟ ಮಾತನಾಡಿ, ಇಫಿಜೀನಿಯಾ ನಾಟಕವನ್ನು ಗ್ರೀಕ್ ಕವಿ ಯುರಿಪಿಡೀಸ್ 2500 ವರ್ಷಗಳಿಂದ ಹಿಂದೆ ಬರೆದಿದ್ದ. ಅತ್ಯಂತ ಮನಮೋಹಕವು, ಅರ್ಥಗರ್ಭಿತವೂ ಹೃದಯ ಕರಗುವಂತಹ, ದುರಂತ ಕಥೆ. ಹೀಗೆ ಸುಂದರವಾಗಿ ಕಥೆಯನ್ನು ನಿರೂಪಿಸಿದ್ದಾರೆ. ಅದನ್ನು ಕನ್ನಡಕ್ಕೆ ಮಾದವ ಚಿಪ್ಪಳಿ ಭಾಷಾಂತರಿಸಿದ್ದು, ವಿ.ಆರ್.ವೆಂಕಟರಮಣ ಐತಾಳ ನಿರ್ದೇಶನದಲ್ಲಿ ನಿನಾಸಂ ತಂಡ ಈ ನಾಟಕ ಪ್ರದರ್ಶಿಸಲಿದ್ದಾರೆ. ಹಾಗೆಯೇ ದೇಶದ ಪ್ರಸಿದ್ದ ಕವಿ ರವೀಂದ್ರನಾಥ ಠಾಗೋರ್‌ರ `ಮುಕ್ತಧಾರ’ ಎಂಬ ನಾಟಕವನ್ನು ರಚಿಸಿದ್ದು, ಕನ್ನಡಕ್ಕೆ ಅಹೋಬಲ ಶಂಕರ ಅನುವಾದಿಸಿದ್ದಾರೆ. ಇದನ್ನು ಪ್ರವೀಣಕೂಮಾರ ಎಡಮಂಗಲ ನಿರ್ದೇಶಿಸಿದ್ದಾರೆ. ಈ ನಾಟಕವು ಕೂಡ ಹರಿಯುವ ತೊರೆ, ನೀರು, ಕೃಷಿ ಜನರ ಬದುಕಿನ ಬವಣೆ, ಆಧುನಿಕ ತಂತ್ರಜ್ಞಾನ, ಆಣೆಕಟ್ಟು, ಪ್ರತಿಭಟನೆ, ಸ್ವಾತಂತ್ರ‍್ಯಕ್ಕಾಗಿ ಹೋರಾಟ ಹೀಗೆ ಹತ್ತಾರು ಆಯಾಮಗಳಲ್ಲಿ ನಾಟಕವನ್ನು ರಚಿಸಲಾಗಿದೆ ಎಂದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನಾಟಕಕ್ಕೆ ಚಾಲನೆ ನೀಡಲಿದ್ದು, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ರಾಜ್ಯ ವೀಕೇಂದ್ರಿಕರಣ ಹಾಗೂ ಯೋಜನಾ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್, ಡಿ.ಸಿ.ಎಫ್ ಎಸ್.ಜಿ.ಹೆಗಡೆ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ, ಪಿ.ಡಬ್ಲು.ಡಿ ಅಭಿಯಂತರ ವಿ.ಎಂ.ಭಟ್ಟ, ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಉಪಸ್ಥಿತರಿರುವರು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರವಿ ಹೆಗಡೆ, ಲೋಕನಾಥ ಗಾಂವ್ಕರ್ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top