Slide
Slide
Slide
previous arrow
next arrow

ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿ: ಜಡ್ಡಿಗದ್ದೆ ಬಾಯ್ಸ್ ತಂಡ ಚಾಂಪಿಯನ್

300x250 AD

ಶಿರಸಿ :  ತಾಲೂಕಿನ ಕುಳವೆಯಲ್ಲಿ ನಡೆದ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿತು.

ಕುಳವೆ ಲಕ್ಷ್ಮಿ ನರಸಿಂಹ ಗೆಳೆಯರ ಬಳಗ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಕಾರ್ತಿಕೊತ್ಸವದ ಪ್ರಯುಕ್ತವಾಗಿ  ಎರಡನೆ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.

ಮುಕ್ತ ಪಂದ್ಯಾವಳಿಯಲ್ಲಿ ಒಟ್ಟು 41 ತಂಡಗಳು ಭಾಗವಹಿಸಿದ್ದು, ಪ್ರತಿ ತಂಡಕ್ಕೆ 800/- ರೂಪಾಯಿ ಪ್ರವೇಶ ಶುಲ್ಕವನ್ನು ನಿಗದಿ ಮಾಡಲಾಗಿತ್ತು. ಪ್ರಥಮ ಬಹುಮಾನವಾಗಿ 15000/-, ದ್ವಿತೀಯ ಬಹುಮಾನ 10000/- ತೃತೀಯ ಬಹುಮಾನ 6000/- ಹಾಗೂ ಚತುರ್ಥ ಬಹುಮಾನ 3000/- ಸೇರಿದಂತೆ ಆಕರ್ಷಕ ಟ್ರೋಫಿ ಇಡಲಾಗಿತ್ತು. ಮೂರು ಸುತ್ತಿನ ಆಟದಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ ಹಾಗೂ ಮಾವಿನಸರ ತಂಡಗಳ ನಡುವೆ ನೇರ ಹಣಾಹಣಿಯಲ್ಲಿ ಜಡ್ಡಿಗದ್ದೆ ಬಾಯ್ಸ್ ತಂಡ ಪ್ರಥಮ ಸ್ಥಾನ ಮುಡಿಗೆರಿಸಿಕೊಂಡರೆ,ಮಾವಿನಸರ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು..ಇನ್ನೂ ತೃತೀಯ ಸ್ಥಾನವನ್ನು ಮಳಲಗಾಂವ್, ಹಾಗೂ ನೆರೆಬೈಲ್ ತಂಡ ಚತುರ್ಥ ಬಹುಮಾನ ಪಡೆಯುವಲ್ಲಿ ಯಶಸ್ವಿಯಾದವು.

300x250 AD

ಕಾರ್ಯಕ್ರಮದ ಸಂಘಟಕರು ಜಯಗಳಿಸಿದ ತಂಡಗಳಿಗೆ ನಗದು ಬಹುಮಾನ ಹಾಗೂ ಆಕರ್ಷಕ ಟ್ರೋಫಿ ನೀಡಿ ಗೌರವಿಸಿದರು.ಇದರ ಜೊತೆಯಲ್ಲಿ ಕುಳವೆ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಕ್ರಿಡಾಕೂಟ ಆಯೋಜಿಸಿ, ಗೆದ್ದವರಿಗೆ ಪ್ರಶಸ್ತಿ ಪ್ರತ್ರ ವಿತರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ ಕುಳವೆ ಸಹಕಾರಿ ಸಂಘದ ಅಧ್ಯಕ್ಷ ಚಾರುಚಂದ್ರ ಶಾಸ್ತ್ರೀ, ಗ್ರಾಮ ಪಂಚಾಯತಿ ಅಧ್ಯಕ್ಷ ವಿನಯ್ ಭಟ್, ಉಪಾಧ್ಯಕ್ಷೆ ಜ್ಯೋತಿ ನಾಯ್ಕ, ಸದಸ್ಯರಾದ ಶ್ರೀನಾಥ್ ಶೆಟ್ಟಿ, ರಂಜಿತಾ ಹೆಗಡೆ,ರವಿತೇಜ ರೆಡ್ಡಿ, ಉದ್ಯಮಿ ಉಪೇಂದ್ರ ಪೈ, ಇಂಡಿಯನ್ ಆರ್ಮಿ ಶ್ರೀನಿವಾಸ ನಾಯ್ಕ, ಹಾಗೂ ಸಂಘಟನೆಯ ಪ್ರಮುಖರಾದ ಉಲ್ಲಾಸ ರಾಯ್ಕರ್,ಜಗದೀಶ್, ಮಹೇಶ್, ಕಿರಣ,ಉದಯ ನಾಯ್ಕ, ಶ್ರೀನಿವಾಸ, ಕಾರ್ತಿಕ್, ರಾಜೇಶ್,ನಾಗೇಶ್ ,ಚೇತನ್ ಸೇರಿದಂತೆ ಇನ್ನಿತರರು ಹಾಜರಿದ್ದರು.

Share This
300x250 AD
300x250 AD
300x250 AD
Back to top