Slide
Slide
Slide
previous arrow
next arrow

ಬದನಗೋಡ ಗ್ರಾ.ಪಂ. ವಾರ್ಡ್ ಸಭೆ: ಪಿ.ಡಿ.ಓ. ಜಯಲಕ್ಷ್ಮಿಗೆ ಸನ್ಮಾನ

300x250 AD

ಶಿರಸಿ: ತಾಲೂಕಿನ ಸಂತೋಳ್ಳಿ ಗ್ರಾಮದಲ್ಲಿ ನಡೆದ ಬದನಗೋಡ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ, ಉತ್ತಮ ಕಾರ್ಯ ಮಾಡಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಲಕ್ಷ್ಮಿ ಬಿ. ಅವರಿಗೆ ಗ್ರಾಮಸ್ಥರು ಸನ್ಮಾನ ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಜಯಲಕ್ಷ್ಮಿ ಪ್ರಾಮಾಣಿಕವಾಗಿ ನನ್ನ ಕೆಲಸ ನಾನು ಮಾಡಿದ್ದೇನೆ, ನಿಮ್ಮೆಲ್ಲ ಸಹಕಾರದಿಂದಲೇ ಕೆಲಸ ಮಾಡಲು ಸಾಧ್ಯ ಎಂದರು. ಸಭೆಯಲ್ಲಿ ವಾರ್ಡ್ ಅಭಿವೃದ್ಧಿ ಕುರಿತಾಗಿ ಚರ್ಚಿಸಿ ಠರಾವು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷರು ಭದ್ರ ಗೌಡ, ಕಾರ್ಯದರ್ಶಿ ಪರಮೇಶ್ವರ, ಗ್ರಾಮಸ್ಥರಾದ ಯುವರಾಜ್ ಜೆ. ಗೌಡ, ಮಂಜುನಾಥ್ ಗೌಡ, ಅಂಬರೀಷ್ ಗೌಡ, ಏಸ್. ಬಿ. ಗೌಡ, ಬಂಗಾರಣ್ಣ, ನಾಗಪ್ಪ, ರಾಜಪ್ಪ, ಬಸಪ್ಪ, ರವಿ, ಮಲ್ಲೇಶ್, ಆಶಾ ಕಾರ್ಯಕರ್ತೆ ಗೀತಾ ಸೇರಿದಂತೆ ಗ್ರಾಮಸ್ಥರು, ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top