Slide
Slide
Slide
previous arrow
next arrow

ಅಧಿವೇಶನದಲ್ಲಿ ಅರಣ್ಯವಾಸಿಗಳ ಪರವಾಗಿ ನಿರ್ಣಯಿಸಲು ರವೀಂದ್ರ ನಾಯ್ಕ ಆಗ್ರಹ

300x250 AD

ಯಲ್ಲಾಪುರ: ಬೆಳಗಾವಿಯಲ್ಲಿ ಜರುಗುವ ಚಳಿಗಾಲದ ಅಧಿವೇಶನದಲ್ಲಿ, ಅರಣ್ಯವಾಸಿಗಳ ಪರ ನಿರ್ಣಯಿಸಿ, ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಕುರಿತು ಅಂತಿಮ ವಿಚಾರಣೆ ಇರುವ ಸುಪ್ರಿಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

  ಅವರು ಯಲ್ಲಾಪುರ ತಾಲೂಕಿನ ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ಜರುಗಿದ, ಶಿರಸಿಯಲ್ಲಿ ಡಿ. 17 ರಂದು ಜರುಗುವ ಅರಣ್ಯವಾಸಿಗಳನ್ನ ಉಳಿಸಿ ಪೂರ್ವಭಾವಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು.

 ಸುಪ್ರಿಂ ಕೋರ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರ ಅರಣ್ಯವಾಸಿಗಳ ಭೂಮಿ ಹಕ್ಕಿನ ಕುರಿತು ಪರ್ಯಾಯ ಪರಿಹಾರ ನೀಡುವಲ್ಲಿ ಇಂದಿಗೂ ಚಿಂತಿಸದೇ ಇರುವ ಕುರಿತು ಅವರು ವಿಷಾದ ವ್ಯಕ್ತಪಡಿಸಿದರು.

300x250 AD

 ತಾಲೂಕ ಅಧ್ಯಕ್ಷ ಭಿಮ್ಸಿ ವಾಲ್ಕೀಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಸಿತಾರಾಮ ನಾಯ್ಕ ಕುಂದರಗಿ ಸ್ವಾಗತವನ್ನ ಮಾಡಿದರು, ದಿವಾಕರ ಮರಾಠಿ ಆನಗೋಡ, ವಿಠ್ಠಲ ಮಹಾಲೆ ದೇಹಳ್ಳಿ, ಜಗದೀಶ್ ಕುಣಬಿ, ಸಂತೋಷ ನಾಯ್ಕ ಮಳಲಗಾಂವ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ರಾಘವೇಂದ್ರ ಕುಣಬಿ ಮಲವಳ್ಳಿ, ಟಿಸಿ ಗಾಂವಕರ ಮಲವಳ್ಳಿ, ಭಾಸ್ಕರ ಗೌಡ ಹಿತ್ಲಳ್ಳಿ, ಮಾಬು ಕೋಕರೆ ಕಣ್ಣಿಗೇರಿ, ಸೀತಾರಾಮ ನಾಯ್ಕ ಕುಂದರಗಿ, ಸುರೇಸ್ ನಾಯ್ಕ ಕುಂದರಗಿ ಮುಂತಾದವರು ಉಪಸ್ಥಿತರಿದ್ದರು.

69773 ಅರ್ಜಿ ತಿರಸ್ಕಾರ:
 ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ನೀಡಿದ ಅರ್ಜಿಗಳಲ್ಲಿ ಜಿಲ್ಲಾದ್ಯಂತ 69773 ಅರ್ಜಿಗಳು ಪ್ರಥಮ ಹಂತದಲ್ಲಿ ತಿರಸ್ಕಾರವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಹಕ್ಕು ಮಂಜೂರಿಗೆ ಸಂಬಂಧಿಸಿ ಪುನರ್ ಪರಿಶೀಲಿಸುವ ಸಂದರ್ಭದಲ್ಲಿ ಸೂಕ್ತ ಸಾಂದರ್ಭಿಕ ದಾಖಲೆ ನೀಡುವ ಕಾರ್ಯ ಜರುಗಬೇಕೆಂದು ರವೀಂದ್ರ ನಾಯ್ಕ ಹೇಳಿದರು.

Share This
300x250 AD
300x250 AD
300x250 AD
Back to top