ಶಿರಸಿ: ರಾಜ್ಯ ಇತಿಹಾಸ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಗೂ ಸಹ್ಯಾದ್ರಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ತಜ್ಞ ಸದಸ್ಯರು ಶಿರಸಿ & ಹೊನ್ನಾವರಗಳಿಗೆ ಡಿಸೆಂಬರ 7 & 8 ರಂದು ಭೇಟಿ ನೀಡಲಿದ್ದಾರೆ.
ಡಿಸೆಂಬರ 7 ರಂದು ಮಧ್ಯಾಹ್ನ 3-30 ಕ್ಕೆ ತಾಲೂಕಿನ ಸಹಸ್ರಲಿಂಗ, ಸೋಂದಾ ಕೋಟೆ ಪ್ರದೇಶಕ್ಕೆ ಸೋಂದಾ ಸ್ವರ್ಣವಲ್ಲೀ ಮಠಕ್ಕೆ ಭೇಟಿ ನೀಡುವ ಪುರಾತತ್ವ ಇಲಾಖೆ & ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಅಧಿಕಾರಿಗಳ ತಜ್ಞರ ತಂಡ ಜಾಗೃತ ವೇದಿಕೆ ಭೈರುಂಭೆ ಗ್ರಾಮ ಪಂಚಾಯತದ ಪಂಚಾಯತ ಜೀವ ವೈವಿಧ್ಯ ಸಮಿತಿ ಅರಣ್ಯ ಇಲಾಖೆ ಕಂದಾಯ ಇಲಾಖೆ ಸ್ಥಳೀಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಿದೆ. ಅರಣ್ಯ ಕಾಲೇಜು ವಿಜ್ಞಾನಿಗಳು ಜೀವ ವೈವಿಧ್ಯ ಮಂಡಳಿ ತಜ್ಞ ಸದಸ್ಯರನ್ನು ಈ ಸಂದರ್ಭದಲ್ಲಿ ಸಮಾಲೋಚನೆಗೆ ಆಹ್ವಾನಿಸಲಾಗಿದೆ.
ಡಿ. 8 ರಂದು ಬೆಳಿಗ್ಗೆ 10-30 ಕ್ಕೆ ಹೊನ್ನಾವರ ರಾಮತೀರ್ಥ ಪ್ರದೇಶಕ್ಕೆ ಪುರಾತತ್ವ ಇಲಾಖೆಯ ಉಪನಿರ್ದೇಶಕರು ಹಾಗೂ ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಅಧಿಕಾರಿಗಳು ಸದಸ್ಯರು ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಹೊನ್ನಾವರ ಕಂದಾಯ ಇಲಾಖೆ, ಪಟ್ಟಣ ಪಂಚಾಯತ, ತಾಲೂಕಾ ಪಂಚಾಯತ ಅಧಿಕಾರಿಗಳು ಈ ಸಂದರ್ಭದಲ್ಲಿ ಅಗತ್ಯ ಮಾಹಿತಿ ನೀಡಲಿದ್ದಾರೆ. ನಂತರ ಪಟ್ಟಣ ಪಂಚಾಯತಗಳಲ್ಲಿ ಮಧ್ಯಾಹ್ನ 12-00 ಕ್ಕೆ ರಾಮತೀರ್ಥ ಸಂರಕ್ಷಣೆ ಕುರಿತು ಸಮಾಲೋಚನಾ ಸಭೆ ನಡೆಯಲಿದೆ. ತಾಲೂಕಾ ಪಂಚಾಯತ ಜೀವ ವೈವಿಧ್ಯ ಸಮಿತಿಯವರನ್ನು ತಂಡ ಭೇಟಿ ಮಾಡಲಿದೆ.
ಪುರಾತತ್ವ ಇಲಾಖೆ, ಸಹ್ಯಾದ್ರಿ ಪರಂಪರಾ ಪ್ರಾಧಿಕಾರ ವ್ಯಾಪ್ತಿಯಲ್ಲಿ ಬರುವ ಸೋಂದಾ ಕೋಟೆ ಹಾಗೂ ರಾಮತೀರ್ಥ ವನ್ನು ಜೀವ ವೈವಿಧ್ಯ ಪಾರಂಪರಿಕ ತಾಣ ಎಂದು ಘೋಷಣೆ ಮಾಡಬೇಕು ಎಂದು ವೃಕ್ಷ ಲಕ್ಷ ಆಂದೋಲನ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದೆ ಎಂಬುದು ಉಲ್ಲೇಖನೀಯವಾಗಿದೆ.
ಪುರಾತತ್ವ ಇಲಾಖೆ ಧಾರವಾಡದ ಉಪ ನಿರ್ದೇಶಕ ಡಾ. ಶೇಜೇಶ್ವರ ಶಿವಮೊಗ್ಗಾದ ಸಹ್ಯಾದ್ರಿ ಪರಂಪರಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿಗಳು ಹಾಗೂ ಸದಸ್ಯರಾದ ಶ್ರೀಪಾದ ಬಿಚ್ಚುಗುತ್ತಿ ಸೊರಬ ಶಿವಾನಂದ ಹೆಗಡೆ ಕೆರೆಮನೆ, ಜೀವ ವೈವಿಧ್ಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಜೀವ ವೈವಿಧ್ಯ ಮಂಡಳಿ ಸದಸ್ಯರಾದ ಡಾ. ಪ್ರಕಾಶ ಮೇಸ್ತ, ಡಾ. ಕೆ. ವೆಂಕಟೇಶ ಸಾಗರ ಮುಂತಾದವರು ತಜ್ಞರ ತಂಡದಲ್ಲಿ ಬರಲಿದ್ದಾರೆ. ಡಾ. ವಾಸುದೇವ, ಡಾ. ಕೇಶವ ಕೊರ್ಸೆ, ಡಾ. ಬಾಲಚಂದ್ರ ಸಾಯಿಮನೆ, ಮೊದಲಾದ ತಜ್ಞರನ್ನು ಆಹ್ವಾನಿಸಲಾಗಿದೆ.