• Slide
    Slide
    Slide
    previous arrow
    next arrow
  • ಸಮುದ್ರದಲ್ಲಿ ಮುಳುಗುತ್ತಿದ್ದ ತಾಯಿ, ಮಗನ ರಕ್ಷಣೆ

    300x250 AD

    ಗೋಕರ್ಣ :  ನೀರಲ್ಲಿ ಈಜಲು ತೆರಳಿದ್ದ ವೇಳೆ ಮುಳುಗಿ ಅಸ್ವಸ್ಥರಾಗಿದ್ದ ತಾಯಿ-ಮಗುವನ್ನು ರಕ್ಷಣೆ ಮಾಡಿರುವ ಘಟನೆ ಗೋಕರ್ಣದ ತದಡಿ ಸಮುದ್ರದಲ್ಲಿ ನಡೆದಿದೆ.
    ಮನ್ಸೂರ್ ಶೇಖ್ (28), ರಜಾಕ್ (6) ಅಸ್ವಸ್ಥಗೊಂಡ ಇವರು ಭಟ್ಕಳ ಮೂಲದವರಾಗಿದ್ದು, ಗೋಕರ್ಣದ ತದಡಿಯ ಮುರಾದ್ ಅಹ್ಮದ್ ಎಂಬುವವರ ಮನೆಗೆ ಕಾರ್ಯಕ್ರಮಕ್ಕಾಗಿ ಆಗಮಿಸಿದ್ದರು. ಈ ವೇಳೆ ತದಡಿ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ.

    ಮುಳುಗುವ ಹಂತ ತಲುಪಿದ್ದ ಇವರನ್ನ ಸಮೀಪದಲ್ಲೇ ಇದ್ದ ಬೋಟ್ ಸಿಬ್ಬಂದಿಯಿಂದ ರಕ್ಷಣೆ ಮಾಡಲಾಗಿದ್ದು, ಅಸ್ವಸ್ಥಗೊಂಡವರಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top