• Slide
    Slide
    Slide
    previous arrow
    next arrow
  • ಕಾರ್ಯಕ್ರಮಗಳ ಸಂಘಟನೆಗೆ ಸಹಕರಿಸಿದವರಿಗೆ ಕಸಾಪ ಕೃತಜ್ಞತೆ

    300x250 AD

    ಭಟ್ಕಳ: ರಾಜ್ಯೊತ್ಸವ ಮಾಸವಾದ ನವೆಂಬರ್‌ನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟಿಸಿತ್ತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಕಾರ್ತಿಕ ಅನುದಿನ ಅನುಸ್ಪಂದನೆ ಪರಿಕಲ್ಪನೆಯ ಅಡಿಯಲ್ಲಿ ಜಿಲ್ಲೆಯ ಎಲ್ಲ ತಾಲೂಕು ಘಟಕಗಳ ಮೂಲಕ ತಿಂಗಳುದ್ದಕ್ಕೂ ಪ್ರತಿದಿನ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದರ ಅಂಗವಾಗಿ ತಾಲೂಕು ಕಸಾಪ ಘಟಕವು ಶಾಲಾ- ಕಾಲೇಜುಗಳಲ್ಲಿ ಸಂದರ್ಭೋಚಿತ ಮತ್ತು ಸಕಾಲಿಕವಾದ ಎಂಟು ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿ ಕನ್ನಡದ ಕಂಪನ್ನು ಪಸರಿಸುವಲ್ಲಿ ಯಶಸ್ವಿಯಾಗಿದೆ.
    ತಾಲೂಕಿನ ಶ್ರೀವಲಿ ಪ್ರೌಢಶಾಲೆಯಲ್ಲಿ ಕನ್ನಡ ನಾಡು ನುಡಿ ಸಂಬಂಧಿತ ಗೀತಗಾಯನ ಸ್ಪರ್ಧೆ, ಮುರ್ಡೇಶ್ವರ ಜನತಾ ವಿದ್ಯಾಲಯದ ಸಹಯೋಗದಲ್ಲಿ ಕನಕದಾಸ ಜಯಂತಿ, ಸರ್ಕಾರಿ ಪ್ರೌಢಶಾಲೆ ಕುಂಟವಾಣಿಯಲ್ಲಿ ಸುಂದರ ಕೈಬರೆಹಸ್ಪರ್ಧೆ ಮತ್ತು ದಾಸವಾಣಿ ಗಾಯನ ಸ್ಪರ್ಧೆ, ಬೆಳಕೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ನಾಡು ನುಡಿ ಪ್ರಬಂಧ ಸ್ಪರ್ಧೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ನ್ಯೂ ಇಂಗ್ಲೀಷ ಪ.ಪೂ.ಕಾಲೇಜಿನಲ್ಲಿ ಭಾಷಾ ಸೌಹಾರ್ದತಾ ದಿನದ ಅಂಗವಾಗಿ ಬಹುಭಾಷಾ ಕವಿಗೋಷ್ಠಿ, ಏಕತಾ ಸಪ್ತಾಹದ ಸಾಂಸ್ಕೃತಿಕ ಏಕತಾ ದಿನದ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ, ಭುವನೇಶ್ವರಿ ಕನ್ನಡ ಸಂಘದ ಸಹಯೋಗದಲ್ಲಿ ಮುರ್ಡೇಶ್ವರ ಮಂಜುನಾಥ ಅವರ ಕೃತಿಗಳ ಬಿಡುಗಡೆ ಕಾರ್ಯಕ್ರಮ, ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಕನ್ನಡ ನಾಡು ನುಡಿ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ.
    ಈ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ, ಜಾರ್ಜ್ ಫರ್ನಾಂಡಿಸ್, ಕೋಶಾಧ್ಯಕ್ಷ ಮರ್ತುಜಾ ಹುಸೇನ್, ತಾಲೂಕಿನ ಹಿರಿಯ ಸಾಹಿತಿಗಳಾದ ಡಾ.ಜಮೀರುಲ್ಲ ಷರೀಫ್, ಡಾ.ಆರ್.ವಿ.ಸರಾಫ್, ನಾರಾಯಣ ಯಾಜಿ, ಮಾನಾಸುತ, ಶ್ರೀಧರ ಶೇಟ್ ಶಿರಾಲಿ ಸೇರಿದಂತೆ ಎಲ್ಲ ಸಾಹಿತಿಗಳು, ಕ್ಷೇತ್ರ ಶಿಕ್ಷನಾಧಿಕಾರಿಗಳಾದ ದೇವಿದಾಸ ಮೊಗೇರ, ಎಂ.ಪಿ.ಭಂಡಾರಿ, ನಾರಾಯಣ ನಾಯ್ಕ, ಪೆಟ್ರಿಕ್ ಟೆಲ್ಲಿಸ್, ಸುರೇಶ ಮುರ್ಡೇಶ್ವರ,ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರು, ಶಾಲಾ ಕಾಲೇಜುಗಳ ಆಡಳಿತ ಮಂಡಳಿ, ಮುಖ್ಯಸ್ಥರು, ಶಿಕ್ಷಕ ವೃಂದ, ಭುವನೇಶ್ವರಿ ಕನ್ನಡ ಸಂಘ, ಅಳ್ವೆಕೊಡಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಎಲ್ಲ ಕನ್ನಡದ ಮನಸುಗಳ ಸಹಕಾರವು ಬಹುಮುಖ್ಯವಾದುದು. ಕನ್ನಡಸ ಕೆಲಸಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಕೃತಜ್ಞತೆ ಸಲ್ಲಿಸಿದ್ದಾರೆ. ಎಲ್ಲರ ಪ್ರೀತಿಯ ಸಹಕಾರವು ನಮ್ಮ ತಾಲೂಕು ಘಟಕಕ್ಕೆ ಕನ್ನಡದ ಕೆಲಸ ಮಾಡಲು ಉತ್ಸಾಹ ತುಂಬಿದೆ. ಈ ಹಿಂದಿನ ಅವಧಿಯಲ್ಲಿ ಭಟ್ಕಳ ತಾಲೂಕು ಘಟಕಕ್ಕೆ ಅತಿಹೆಚ್ಚು ಕಾರ್ಯಕ್ರಮಗಳನ್ನು ಸಂಘಟಿಸಿದುದಕ್ಕಾಗಿ ಸಾಹಿತ್ಯ ಸಾರಥ್ಯ ಜಿಲ್ಲಾ ಮಟ್ಟದ ಪ್ರಶಸ್ತಿ ಬಂದಿರುವುದಕ್ಕು ಎಲ್ಲರ ಸಹಕಾರವೇ ಕಾರಣ. ಆ ಪ್ರಶಸ್ತಿಯು ನಮ್ಮ ತಾಲೂಕಿನ ಎಲ್ಲ ಕನ್ನಡದ ಮನಸುಗಳಿಗೆ ಸಂದ ಪ್ರಶಸ್ತಿಯಾಗಿದೆ. ಇನ್ನು ಮುಂದೆಯೂ ಕೂಡ ಕನ್ನಡ ಪರ ಕೆಲಸಗಳನ್ನು ಮಾಡಲು ಎಲ್ಲರ ಸಲಹೆ ಸೂಚನೆ ಮಾರ್ಗದರ್ಶನ ಸದಾ ಇರಲಿ ಎಂದು ಗಂಗಾಧರ ನಾಯ್ಕ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top