• Slide
    Slide
    Slide
    previous arrow
    next arrow
  • ಏಡ್ಸ್ ಪೀಡಿತರು, ವಿಕಲಚೇತನರನ್ನು ಗೌರವದಿಂದ ಕಾಣಿ: ನ್ಯಾ.ಜಿ. ಬಿ. ಹಳ್ಳಾಕಾಯಿ

    300x250 AD

    ಯಲ್ಲಾಪುರ: ಏಡ್ಸ್ ಪೀಡಿತರು ಹಾಗೂ ವಿಕಲಚೇತರನ್ನು ಗೌರವದಿಂದ ನೋಡಿಕೊಳ್ಳಬೇಕು. ಅವರಿಗೆ ಇರುವ ಸೌಲಭ್ಯವನ್ನು ಒದಗಿಸಿಕೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಜಿ.ಬಿ.ಹಳ್ಳಾಕಾಯಿ ಹೇಳಿದರು.
    ಅವರು ಶನಿವಾರ ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ‘ವಿಶ್ವ ಏಡ್ಸ್ ದಿನಾಚರಣೆ ಮತ್ತು ವಿಶ್ವ ವಿಕಲಚೇತನರ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
    ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ಲಕ್ಷ್ಮೀಬಾಯಿ ಪಾಟೀಲ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
    ವಕೀಲರ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಏಡ್ಸ್ ದಿನಾಚರಣೆಯ ಕುರಿತು ಹಾಗೂ ಶಿಕ್ಷಕ ಎಂ.ಬಿ.ಶೇಟ್ ವಿಶ್ವ ವಿಕಲಚೇತನರ ನಿರ್ವಹಣೆ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
    ಸಹಾಯಕ ಸರ್ಕಾರಿ ಅಭಿಯೋಜಕ ಝೀನತ್ ಬಾನು ಶೇಖ್, ಪ್ಯಾನಲ್ ವಕೀಲ ನಾಗರಾಜ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಗದೀಶ ಕಮ್ಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಪುಷ್ಪ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀರಾಮ ಹೆಗಡೆ, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಅರೆಕಾಲಿಕ ನಾಯಕ ಸ್ವಯಂ ಸೇವಕರಾದ ಸಂಜೀವಕುಮಾರ್ ಹೊಸ್ಕೇರಿ ಹಾಗೂ ಮಹೇಶ ಎಸ್ ಪೂಜಾರ್ ಉಪಸ್ಥಿತರಿದ್ದರು.
    ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದ ವಿಕಲಚೇತನ ವಿದ್ಯಾರ್ಥಿ ಗಣೇಶ ವೆರ್ಣೇಕರ, ಪಿಯುಸಿಯಲ್ಲಿ ಓದುತ್ತಿರುವ ವಿಕಲಚೇತನ ವಿದ್ಯಾರ್ಥಿ ಮಧುಸೂದನ ಏಕನಾಥ ಹಾಗೂ ತಾಲೂಕ ಪಂಚಾಯಿತಿ ವಿಕಲಚೇತನ ಸಿಬ್ಬಂದಿ ಸಲಿಂ ಶೇಖ್ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಬಿಆರ್‌ಸಿ ಬಿ.ಎ.ದೊಡ್ಡಮನಿ ಸ್ವಾಗತಿಸಿದರು. ಶಿಕ್ಷಕ ಸಂತೋಷ ನಾಯ್ಕ ನಿರೂಪಿಸಿ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top