• first
    Slide
    Slide
    previous arrow
    next arrow
  • ಶಾಲಾ ಬಸ್, ಲಗೇಜ್ ವಾಹನ ನಡುವೆ ಡಿಕ್ಕಿ: ಪ್ರಾಣಾಪಾಯದಿಂದ ಪಾರು

    300x250 AD

    ಹೊನ್ನಾವರತಾಲೂಕಿನ ಚಂದ್ರಾಣಿ ಸಮೀಪ ವಿಜಯಪುರದ ಶಾಲಾ ಬಸ್ ಹಾಗೂ ಲಗೇಜ್ ವಾಹನ ನಡುವೆ ಡಿಕ್ಕಿ ಸಂಭವಿಸಿ ಲಗೇಜ್ ವಾಹನ ಪಲ್ಟಿಯಾದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ.

    ಅರೇಅಂಗಡಿ ಮಾರ್ಗದಿಂದ ಹೊನ್ನಾವರ ಕಡೆ ತೆರಳುತ್ತಿದ್ದ  ಲಗೇಜ್ ವಾಹನವು  ಚಂದ್ರಾಣಿ ಬಳಿ ಇರುವ ಗ್ಯಾರೇಜ್ ಕಡೆಯಿಂದ ಹೊನ್ನಾವರ ಕಡೆ ಹೋಗಲು ಆಗಮಿಸಿದ ಶಾಲಾ ವಾಹನಕ್ಕೆ ಡಿಕ್ಕಿಯಾಗಿದೆ. ಶಾಲಾ ಬಸ್  ರಸ್ತೆಗೆ ಒಮ್ಮೆಲೆ ತಂದಿರುವದರಿಂದ ಈ ಅವಘಡ ಸಂಭವಿಸಿದೆ .

    300x250 AD

    ವಿಜಯಪುರದ ಶಾಲಾ ವಿದ್ಯಾರ್ಥಿಗಳಿದ್ದ ಬಸ್ಸಿನ ಒಂದು ಭಾಗಕ್ಕೆ ಡಿಕ್ಕಿಯಾದ ಲಗೇಜ್ ವಾಹನ ರಸ್ತೆಯಲ್ಲೆ ಪಲ್ಟಿಯಾಗಿದ್ದು, ಎರಡು ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆ ಮಧ್ಯೆ ವಾಹನ ಪಲ್ಟಿಯಾದ ಪರಿಣಾಮ ಅರೇಅಂಗಡಿ ಹೊನ್ನಾವರ ಮಾರ್ಗದ ರಸ್ತೆಯಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿತ್ತು. ಸ್ಥಳಕ್ಕೆ  112 ವಾಹನದ ಮೂಲಕ ಆಗಮಿಸಿದ ಹೊನ್ನಾವರ ಪೊಲೀಸ್ ಠಾಣಿಯ ಸಿಬ್ಬಂದಿಗಳು ಸ್ಥಳಿಯರ ಸಹಕಾರದಿಂದ ವಾಹನ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ.

    Share This
    300x250 AD
    300x250 AD
    300x250 AD
    Back to top