Slide
Slide
Slide
previous arrow
next arrow

ಸಂಸ್ಕಾರ, ಸಂಸ್ಕೃತಿಗಳು ಜತೆಯಾಗಿಯೇ ಸಾಗಬೇಕು: ಎನ್.ಎಲ್. ಗೌಡ

300x250 AD

ಸಿದ್ದಾಪುರ: ಸಂಸ್ಕಾರಯುತ ಬದುಕು ನಿಜವಾಗಿಯೂ ಸಾರ್ಥಕವೆನಿಸುತ್ತದೆ. ಸಂಸ್ಕಾರ ಹಾಗು ಸಂಸ್ಕೃತಿಗಳು ಜತೆಯಾಗಿಯೇ ಸಾಗಬೇಕು. ಹಾಗಾದಾಗ ಮಾತ್ರ ಅದಕ್ಕೊಂದು ಅರ್ಥವಿರುತ್ತದೆ. ನಮ್ಮ ನಡುವೆ ಕಂಗೊಳಿಸುವ ಯಕ್ಷಗಾನ ತಾಳಮದ್ದಳೆಗಳು ಶಕ್ತಿಯುತವಾದ ಸಂಸ್ಕೃತಿಯನ್ನು ಸಾರುವ ಕಲಾ ಪ್ರಕಾರ ಅದನ್ನು ಉಳಿಸಿ ಬೆಳೆಸಿಕೊಳ್ಳುವ ಹೊಣೆ ಪ್ರತಿಯೊಬ್ಬನದೂ ಆಗಿದೆ ಎಂದು ಹಿರಿಯ ಸಾಮಾಜಿಕ ಮುಖಂಡ ಎನ್.ಎಲ್.ಗೌಡ ಕಿಲವಳ್ಳಿ ಹೇಳಿದರು.
ಅವರು ಕಿಲವಳ್ಳಿಯಲ್ಲಿ ನಡೆದ ತಾಳಮದ್ದಲೆಯಲ್ಲಿ ಮಾತನಾಡಿ, ಸತತ ಪರಿಶ್ರಮ ಹಾಗೂ ಶ್ರದ್ಧೆ ಒಂದು ವ್ಯಕ್ತಿಯನ್ನು ಉಚ್ರಾಯ ಸ್ಥಿತಿಗೆ ಕೊಂಡೊಯ್ಯಲು ಕಾರಣವಾಗುತ್ತದೆ. ಕರ್ಮಜೀವಿಯಾಗಿದ್ದ ನನ್ನ ಸಹೋದರ ಮಹಾಬಲ ಗೌಡರು ಇಡಿ ಸಮಾಜಕ್ಕೆ ಒಂದು ಆದರ್ಶ ಪ್ರಾಯ ವ್ಯಕ್ತಿಯಾಗಿದ್ದರು. ಕಲೆಯನ್ನು ಜೀವದಂತೆ ಪ್ರೀತಿಸುತ್ತಿದ್ದ ಅವರ ಸ್ಮರಣಾರ್ಥ ದೇವತಾ ಸ್ಮರಣೆಯ ಉದ್ದೇಶದಿಂದ ತಾಳಮದ್ದಳೆ ಏರ್ಪಡಿಸಿರುವುದು ಶ್ಲಾಘನೀಯ ಎಂದರು.
ಹಿರಿಯ ವೈದಿಕರಾದ ಅಗ್ಗೇರೆ ಮಹಾಬಲೇಶ್ವರ ಭಟ್ಟ ಹಾಗೂ ಮಹೇಶ ಭಟ್ಟ ಅವರು ಉಪಸ್ಥಿತರಿದ್ದರು. ನಂತರ ಎನ್.ಜಿ.ಹೆಗಡೆ ಬೊಗರಿಮಕ್ಕಿಯವರ ಸಂಯೋಜನೆಯಲ್ಲಿ ಕಲಾಭಾಸ್ಕರ ಇಟಗಿ ಹಾಗೂ ಅತಿಥಿ ಕಲಾವಿದರುಗಳ ಕೂಡುವಿಕೆಯಲ್ಲಿ ಕವಿ ಪಾರ್ತಿಸುಬ್ಬ ವಿರಚಿತ ವಾಲಿಮೋಕ್ಷ ಎಂಬ ಕಥಾನಕವು ತಾಳಮದ್ದಳೆಯ ರೂಪಲ್ಲಿ ಪ್ರದರ್ಶಿತವಾಯಿತು. ವಾಲಿಯಾಗಿ ಜಿ.ಕೆ.ಭಟ್ಟ ಕಶಿಗೆ, ಸುಗ್ರೀವನಾಗಿ ಇಟಗಿ ಮಹಾಬಲೇಶ್ವರ ಭಟ್ಟ, ಶ್ರೀರಾಮನಾಗಿ ಕವಲಕೊಪ್ಪ ವಿನಾಯಕ ಹೆಗಡೆ ಹಾಗೂ ತಾರೆಯಾಗಿ ಹಾಲಪ್ಪ ಗೌಡ ಪದ್ಮನಗದ್ದೆ ಕಾಣಿಸಿಕೊಂಡರು. ಸುಂದರ ಪೌರಾಣಿಕ ಆವರಣದ ಕಥಾಹಂರವನ್ನು ನಿರ್ಮಿಸುವಲ್ಲಿ ಎಲ್ಲ ಅರ್ಥಧಾರಿಗೂ ಉತ್ತಮವಗಿ ಶ್ರಮಿಸಿದರು. ಭಾಗವತರಾಗಿ ದಂಟಕಲ್ ಸತೀಶ ಹೆಗಡೆ ಸುಶ್ರಾವ್ಯವಗಿ ಹಾಡಿದರು. ಮದ್ದಳೆವಾದನದಲ್ಲಿ ಜಾನಕೈ ಶರತ್ ಹೆಗಡೆ ಪಾಲ್ಗೊಂಡರು.

300x250 AD
Share This
300x250 AD
300x250 AD
300x250 AD
Back to top