Slide
Slide
Slide
previous arrow
next arrow

ಬನವಾಸಿ ಕಾಲೇಜಿನಲ್ಲಿ ಸಂಗೀತ ಸಂಭ್ರಮ

300x250 AD

ಶಿರಸಿ: ತಾಲೂಕಿನ ಬನವಾಸಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖ್ಯಾತ ಕಲಾವಿದರಿಂದ ಸಂಗೀತ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ನಡೆಯಿತು. ಕೊಳಲು ವಾದಕ ಪ್ರಕಾಶ್ ಹೆಗಡೆ ಕಲ್ಲಾರೆಮನೆ, ತಬಲವಾದಕ ಲಕ್ಷ್ಮೀಶ ರಾವ್ ಕಲ್ಗುಂಡಿಕೊಪ್ಪ, ಯಕ್ಷಗಾನ ಭಾಗವತ ಕೇಶವ ಹೆಗಡೆ ಕೊಳಗಿ,ಮದ್ದಳೆವಾದಕ ಶಂಕರ್ ಭಾಗವತ ಸಿರ್ಸಿ ಇವರ ಸಂಗಮದಲ್ಲಿ ಪೌರಾಣಿಕ ಯಕ್ಷಗಾನ ಪ್ರಸಂಗಗಳ ಆಯ್ದ ಪದ್ಯಗಳನ್ನು ಪ್ರಸ್ತುತ ಪಡಿಸಲಾಯಿತು.

ಕೇಶವ ಹೆಗಡೆಯವರ ಮಧುರ ಕಂಠದಲ್ಲಿ ಮೂಡಿಬಂದ ಯಕ್ಷಗೀತಗಳಿಗೆ ಅಷ್ಟೇ ಸುಂದರವಾಗಿ ಪ್ರಕಾಶ ಹೆಗಡೆಯವರ ಕೊಳಲು ವಾದನ ಮೇಳೈಸಿತು. ಲಕ್ಷ್ಮೀಶರ ತಬಲಾ ಸೋಲೊ ಮತ್ತು ಶಂಕರ ಭಾಗವತರ ಮದ್ದಳೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದು ವೀಕ್ಷಕರನ್ನು ಬೆರಗುಗೊಳಿಸಿದವು. ಸಂಗೀತದ ಬಗ್ಗೆ ಪ್ರಕಾಶ ಹೆಗಡೆ ಮತ್ತು ಲಕ್ಷ್ಮೀಶ ರಾವ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದವು ಪ್ರೇರಣಾದಾಯಕವಾಗಿತ್ತು. ಕಾಲೇಜಿನ ಪ್ರಾಚಾರ್ಯರ ಎಂ.ಕೆ.ನಾಯ್ಕ ಹೊಸಳ್ಳಿ ಪದ್ಯಗಳ ವಿವರಣೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸಿದ್ದಲಿಂಗಪ್ಪ ಉಗ್ರಾಣದ ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಜಗತ್ತು ವಿಸ್ತಾರಗೊಂಡಿದೆ ಎಂದು ಅಭಿಪ್ರಾಯಪಟ್ಟರು. ನಿವೃತ್ತ ಪ್ರಾಚಾರ್ಯ ಆರ್. ಜಿ.ಭಟ್ ಯಲುಗಾರ ಮಾತನಾಡಿ ಸಂಗೀತ ಮತ್ತು ಯಕ್ಷಗಾನ ಮಾನಸಿಕ ಸಂತೋಷದ ದಾರಿಯನ್ನು ತೋರಿಸುತ್ತವೆ. ವಿದ್ಯಾರ್ಥಿಗಳಿಗೆ ಇಂತಹ ಕಲೆಗಳನ್ನು ಪರಿಚಯಿಸಲು ಇದೊಂದು ಉತ್ತಮ ಪ್ರಯತ್ನ ಎಂದರು. ಉಪನ್ಯಾಸಕಿ ಪ್ರಭಾವತಿ ಹೆಗಡೆ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top