Slide
Slide
Slide
previous arrow
next arrow

ಎಸ್.ಸಿ.ಎಸ್.ಪಿ, ಟಿ.ಎಸ್.ಪಿ ಯೋಜನೆ ಸಮರ್ಪಕ ಅನುಷ್ಠಾನ: ಸಚಿವ ಕೋಟ ಪೂಜಾರಿ

300x250 AD

ಬೆಂಗಳೂರು: ಎಸ್.ಸಿ.ಎಸ್., ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು 35 ಇಲಾಖೆಗಳ ನೋಡಲ್ ಏಜೆನ್ಸಿ ಸಭೆಯನ್ನು ಇತ್ತೀಚಿಗೆ ನಡೆಸಿದ್ದು, ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿವೆ ಹಾಗೂ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಳೆದ ಗುರುವಾರ ಎಸ್.ಸಿ.ಎಸ್., ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಠಾನದ ಕುರಿತು 35 ಇಲಾಖೆಗಳ ನೋಡಲ್ ಏಜೆನ್ಸಿ ಸಭೆ ನಡೆಸಲಾಯಿತು. ಈ ಹಿಂದಿನ ವರ್ಷಗಳಂತೆ 2022-23ನೇ ಸಾಲಿನಲ್ಲಿ ಸಹ ಪ್ರಗತಿಸಾಧಿಸಲಾಗಿದೆ. ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅನುದಾನವನ್ನು ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಉಪಯೋಗಿಸುತ್ತಿದ್ದು ಪ್ರಗತಿಯಲ್ಲಿ ಹಿನ್ನಡೆ ಆಗಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು.
2022-223ನೇ ಸಾಲಿನಲ್ಲಿ ಎಸ್.ಸಿ.ಎಸ್.ಪಿ ಅಡಿ ವಿವಿಧ ಇಲಾಖೆಗಳಿಗೆ ಒಟ್ಟು ರೂ.20843.03 ಕೋಟಿ ಹಂಚಿಕೆ ಮಾಡಿದ್ದು, ದಿನಾಂಕ: 29.11.2022ರವರೆಗೆ ರೂ.9298.54 ಕೋಟಿ (ಶೇ.45%) ಪ್ರಗತಿಯಾಗಿರುತ್ತದೆ. ಟಿ.ಎಸ್.ಪಿ ಅಡಿಯಲ್ಲಿ ರೂ.8322.78 ಕೋಟಿ ಹಂಚಿಕೆಯಾಗಿದ್ದು, ರೂ.2928.46 ಕೋಟಿ (ಶೇ.35%) ಪ್ರಗತಿಯಾಗಿರುತ್ತದೆ. ಒಟ್ಟಾರೆ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಅಡಿ ಹಂಚಿಕೆಯಾಗಿರುವ ರೂ.29,165.81 ಕೋಟಿಗಳಲ್ಲಿ ರೂ.12,227 ಕೋಟಿ ವೆಚ್ಚವಾಗಿದ್ದು ಶೇ.42% ಪ್ರಗತಿ ಸಾಧಿಸಲಾಗಿದೆ. ಬಿಡುಗಡೆಗೆ ಹೋಲಿಸಿದ್ದಲ್ಲಿ ಶೇ.89% ಪ್ರಗತಿಯಾಗುತ್ತದೆ ಎಂದು ಅವರು ವಿವರಿಸಿದರು. ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ನೋಡಲ್ ಏಜೆನ್ಸಿ ಸಭೆಯನ್ನು ನಡೆಸುತ್ತಿದ್ದು, ಅನುಷ್ಠಾನಾಧಿಕಾರಿಗಳಾದ 35 ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳೊಂದಿಗೆ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲಿಸಲಾಗುತ್ತದೆ. ಅಲ್ಲದೇ, ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಸಾಮಾಜಿಕ ಪರಿಶೋಧನೆ ಮತ್ತು ಮೌಲ್ಯಮಾಪನವನ್ನು ಸಹ ಮಾಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಸರ್ಕಾರರವು ಬದ್ಧವಾಗಿದ್ದು, ಕಾರ್ಯಕ್ರಮಗಳ ಅನುಷ್ಠಾನದಲ್ಲಿ ವಿಳಂಬ ಅಥವಾ ನಿರ್ಲಕ್ಷವನ್ನು ಸಹಿಸುವುದಿಲ್ಲ ಎಂದು ಅವರು ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top