ಶಿರಸಿ :ಶಬರ ಸಂಸ್ಥೆ ಹಾಗೂ ಜಾಗೃತ ವೇದಿಕೆ ಸೋಂದಾ ವತಿಯಿಂದ ತಾಲೂಕಿನ ಮುತ್ತಿನ ಕೆರೆ ವೆಂಕಟರಮಣ ದೇವಾಲಯದ ಆವರಣದಲ್ಲಿ ಗುರವಾರ ರಾತ್ರಿ ನಡೆದ ‘ಶನೇಶ್ವರಾಂಜನೇಯ’ ಯಕ್ಷಗಾನ ಕಲಾಸಕ್ತರ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮವನ್ನು ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂದೇಶ ಭಟ್ ಬೆಳಖಂಡ ಚಂಡೆ ಬಾರಿಸುವ ಮೂಲಕ ಉದ್ಘಾಟಿಸಿ, ಯಕ್ಷಗಾನ ಸಂಸ್ಕಾರ, ಸಂಸ್ಕೃತಿ ಬಿಂಬಿಸುವ ಕಲೆಯಾಗಿದೆ. ಆದರೆ ನಮ್ಮಲ್ಲಿ ಇದಕ್ಕೆ ಸರ್ಕಾರದ ಪ್ರೋತ್ಸಾಹ ಕಡಿಮೆಯಾಗಿದೆ. ರಾಜ್ಯೋತ್ಸವ ಸೇರಿದಂತೆ ರಾಜ್ಯ ಮಟ್ಟದ ಪ್ರಶಸ್ತಿಗಳು ನಮ್ಮ ಕಲಾವಿದವರಿಗೆ ಬರುತ್ತಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ ಎಂದರು.
ಇದಕ್ಕೂ ಮೊದಲು ದೇವಸ್ಥಾನದಲ್ಲಿ ದೀಪೋತ್ಸವ ಕಾರ್ಯಕ್ರಮ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಸೋಂದಾ ಪಂಚಾಯತ ಸದಸ್ಯ ಮಂಜುನಾಥ ಭಂಡಾರಿ, ಜಾಗೃತ ವೇದಿಕೆಯ ರತ್ನಾಕರ ಹೆಗಡೆ, ತಾರಾ ಹೆಗಡೆ ಇದ್ದರು. ನಾಗರಾಜ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನ್ನಾಡಿ, ಸ್ವಾಗತಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ರಮೇಶ್ ಶಾಸ್ರ್ತಿ ನಡೆಸಿಕೊಟ್ಟರು. ಬಾಲಚಂದ್ರ ಭಟ್ಟ ವಂದಿಸಿದರು.
ನಂತರ ನಡೆದ ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ
ಶ್ರೀಪಾದ ಹೆಗಡೆ ಬಾಳೆಗದ್ದೆ. ಶ್ರೀಪತಿ ಹೆಗಡೆ ಕಂಚಿಮನೆ, ವಿಘ್ನೇಶ್ವರ ಕೆಸರಕೊಪ್ಪ, ಶ್ರೀಧರ ಹೆಗಡೆ ಚಪ್ಪರಮನೆ, ನಿರಂಜನ ಜಾಗ್ನಳ್ಳಿ, ಪ್ರವೀಣ ತಟ್ಟೀಸರ ಪಾಲ್ಗೊಂಡರು.