• Slide
    Slide
    Slide
    previous arrow
    next arrow
  • ಸ್ನೇಹಸಾಗರ ಶಾಲೆಯಲ್ಲಿ ಯಶಸ್ವಿಗೊಂಡ ಆಪ್ತ ಸಮಾಲೋಚನಾ ಶಿಬಿರ

    300x250 AD

    ಯಲ್ಲಾಪುರ: ತಾಲೂಕಿನ ಸ್ನೇಹಸಾಗರ ವಸತಿ ಶಾಲೆಯಲ್ಲಿ ಮಾನಸಾ ಟ್ರಸ್ಟ್ ಅಡಿಯಲ್ಲಿ ಶಿವಮೊಗ್ಗದ ಕಟಿಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜು ಇದರ ವತಿಯಿಂದ ಎರಡು ದಿನಗಳ ಆಪ್ತ ಸಮಾಲೋಚನೆ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
    ಕಟಿಲ್ ಅಶೋಕ್ ಪೈ ಕಾಲೇಜಿನ ಶೈಕ್ಷಣಿಕ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಮನೀಶ್ ಹಾಗೂ ಸಹಾಯಕ ಪ್ರಾಧ್ಯಾಪಕಿ ಇಂಚರಾ ಅವರು ಸಂಶೋಧನಾ ವಿದ್ಯಾರ್ಥಿಗಳ ಸಮೂಹದ ಜೊತೆಗೆ ಸ್ನೇಹಸಾಗರ ಶಾಲೆಗೆ ಭೇಟಿ ನೀಡಿದರು. ಶಾಲಾ ಕಾರ್ಯನಿರ್ವಾಹಕ ಕೃಷ್ಣಮೂರ್ತಿ ರಾವ್, ಪ್ರಕಾಶ್ ಗೊಂಬಿ ಅವರು ಆಗಮಿಸಿದ ಅಥಿತಿಗಳನ್ನು ಸ್ವಾಗತಿಸಿ, ಸತ್ಕಾರವನ್ನು ನೀಡಿ ಗೌರವಿಸಿದರು.


    ಸಭೆಯನ್ನುದ್ಧೇಶಿಸಿ ಮಾತನಾಡಿದ ಮನೀಶ್, ಶಾಲಾ ಮಕ್ಕಳಲ್ಲಿ ಉಂಟಾಗುವ ಮನಸ್ಸಿನ ಒತ್ತಡ, ಪಠ್ಯ ವಿಷಯಗಳಲ್ಲಿ ನಿರಾಸಕ್ತಿ, ಏಕಾಗ್ರತೆಯ ಕುರಿತು ಸಮಸ್ಯೆ ಹಾಗೂ ಪರಿಹಾರವನ್ನು ವಿವರಿಸಿದರು. ಪ್ರಾಧ್ಯಾಪಕಿ ಇಂಚರಾ ಅವರು ಮಕ್ಕಳಲ್ಲಿ ಕಂಡುಬರುವ ಹೆದರಿಕೆ, ಮತ್ತು ಭಾಷೆಗಳ ಬರವಣಿಗೆ, ಉಚ್ಛಾರಣೆಯಲ್ಲಿ ಆಗಬಹುದಾದ ತೊಂದರೆಗಳನ್ನು ವಿವರಿಸಿದರು. ಸಂಶೋಧನಾ ವಿದ್ಯಾರ್ಥಿಗಳ ಸಮೂಹವು ತಮ್ಮ ಕಾರ್ಯಚಟುವಟಿಕೆಯೊಂದಿಗೆ ಶಾಲಾ ಮಕ್ಕಳನ್ನು ಪಠ್ಯೇತರ ಕ್ರೀಡೆಗಳಲ್ಲಿ ತೊಡಗಿಸಿಕೊಂಡು, ವಿದ್ಯಾರ್ಥಿಗಳ ಸುಪ್ತ ಮನಸ್ಸನ್ನು ಅರಿಯುವಲ್ಲಿ ಯಶಸ್ವಿಗೊಂಡರು. ವಿಶೇಷವಾಗಿ ಮಕ್ಕಳು ಹಾಗೂ ಶಾಲಾ ಸಿಬ್ಬಂದಿವರ್ಗದವರೊಂದಿಗೆ ಆಪ್ತ ಸಂವಹನ, ಸಮಾಲೋಚನೆಯನ್ನು ಸುದೀರ್ಘವಾಗಿ ನಡೆಸಿಕೊಟ್ಟು ದೈನಂದಿನ ಒತ್ತಡದಿಂದ ವಿಮುಖಗೊಳ್ಳುವ ಸುಲಭ ಉಪಾಯಗಳನ್ನು ತಿಳಿಸಿ ಕೊಟ್ಟರು. ಶಾಲಾ ಆಡಳಿತ ಮಂಡಳಿಯ ಪರವಾಗಿ ಆಡಳಿತಾಧಿಕಾರಿ ಎನ್. ಎ ಭಟ್ ಪ್ರಾಸ್ತಾವಿಕ ಮಾತನ್ನು ಆಡಿದರು. ಎ. ಬಿ ಹೀರೇಮಠ್ ವಂದನೆಯನ್ನು ಸಲ್ಲಿಸಿದರು. ಈ ಶಿಬಿರದಲ್ಲಿ ಶಾಲಾ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿವರ್ಗದವರು ಉಪಸ್ಥಿತಿ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top