ಶಿರಸಿ: ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಶಿರಸಿ ಹಾಗೂ ಉಪನಿರ್ದೇಶಕರ ಕಾಯಾಲಯ ಶಿರಸಿರವರ ಸಹಯೋಗದಲ್ಲಿ ಡಿ.1 ರಂದು ರಾಷ್ಟ್ರೀಯ ಸಂವಿಧಾನ ದಿನಾಚರಣೆಯ ಅಂಗವಾಗಿ ತೇಲಂಗ ಪ್ರೌಢಶಾಲೆ, ಶಿರಸಿಯಲ್ಲಿ ನಡೆಸಲಾದ ವಿವಿಧ ಸ್ಫರ್ಧೆಗಳಲ್ಲಿ ನಗರದ ಲಯನ್ಸ್ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ವಿಜೇತರಾಗಿದ್ದಾರೆ.
ರಸಪ್ರಶ್ನೆ ಸ್ಪರ್ಧೆಯಲ್ಲಿ ಬಾಲಕೃಷ್ಣ ಎಸ್. ಬಡಿಗೇರ್ ಪ್ರಥಮ ಸ್ಥಾನ, ಆದರ್ಶ ಅನಂತ ಭಟ್ ದ್ವಿತೀಯ ಸ್ಥಾನ, ಚಿತ್ರಕಲಾ ಸ್ಪರ್ಧೆಯಲ್ಲಿ ಪೃಥ್ವಿ ಉಮೇಶ ಹೆಗಡೆ ಪ್ರಥಮ, ಚರ್ಚಾಸ್ಪರ್ಧೆಯಲ್ಲಿ ಸಮನ್ವಿತ ವಿ. ಟಿ. ಪ್ರಥಮ ಹಾಗೂ ಸೃಷ್ಠಿ ಗೌಳಿ ತೃತೀಯ, ಸಂವಿಧಾನದ ಕುರಿತು ಘೋಷ ವಾಕ್ಯ ರಚನಾ ಸ್ಪರ್ಧೆಯಲ್ಲಿ ಅಂಕಿತ ರಾಯಭಾಗಿ ಪ್ರಥಮ, ಗಗನಾ ಭಟ್ ದ್ವಿತೀಯ, ಪ್ರಬಂಧ ಸ್ಪರ್ಧೆಯಲ್ಲಿ ಧಾತ್ರಿ ಹೆಗಡೆ ದ್ವಿತೀಯ ಸ್ಥಾನವನ್ನು ಪಡೆಯುವುದರೊಂದಿಗೆ ಶಾಲೆಯ ಕೀರ್ತಿಯನ್ನು ಹಚ್ಚಿಸಿರುತ್ತಾರೆ. ವಿದ್ಯಾರ್ಥಿಗಳಿಗೆ ಶಾಲೆಯ ಸಹಶಿಕ್ಷಕ ಗಣಪತಿ ಗೌಡ ಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಲಯನ್ಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.