• Slide
    Slide
    Slide
    previous arrow
    next arrow
  • ಜ.1ಕ್ಕೆ ಗಾಂವಕರ ಮೆಮೋರಿಯಲ್ ಫೌಂಡೇಶನ್ ಪ್ರತಿಭಾ ಪುರಸ್ಕಾರ

    300x250 AD

    ಅಂಕೋಲಾ: ಸ್ವಾತಂತ್ರ್ಯ ಯೋಧ “ಬಹುಮುಖಿ” ಅಭಿವೃದ್ಧಿ ಹರಿಕಾರ ಬಾಸಗೋಡ ಬೊಮ್ಮಯ್ಯ ರಾಕು ಗಾಂವಕರ ಇವರ ನೆನಪಿನಲ್ಲಿ ಆಯೋಜಿಸುತ್ತಿರುವ 11ನೇ ವರ್ಷದ ಉಪನ್ಯಾಸ ಹಾಗೂ ಉತ್ತರ ಕನ್ನಡ ಜಿಲ್ಲಾ ಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ 2023ನೇ ಜನವರಿ 1 ರವಿವಾರ ಸಂಜೆ 4.00 ಗಂಟೆಗೆ ಪಟ್ಟಣದ ಗಾಂಧಿ ಮೈದಾನದಲ್ಲಿರುವ ಸ್ವಾತಂತ್ರ್ಯ ಸಂಗ್ರಾಮ ಭವನದ ‘ಸಾಧನಾ’ ವೇದಿಕೆಯಲ್ಲಿ ನಡೆಯಲಿದೆ.
    ಕಾರ್ಯಕ್ರಮದ ಉದ್ಘಾಟನೆಯನ್ನು ಪದ್ಮಶ್ರೀ ಪುರಸ್ಕೃತ ಟನಲಮೆನ್‌ಅಮೇಯ ಮಹಾಲಿಂಗ ನಾಯ್ಕ ಬಂಟವಾಳ (ದ.ಕ) ರವರು ನೇರವೇರಿಸಲಿದ್ದಾರೆ. ಕರಾವಳಿ ಮುಂಜಾವು, ದಿನಪತ್ರಿಕೆ ಕಾರವಾರ ಇದರ ವ್ಯವಸ್ಥಾಪಕಸಂಪಾದಕರಾದ ಗಂಗಾಧರ ಹಿರೇಗುತ್ತಿ ಅವರು ಅಧಕ್ಷತೆವಹಿಸಲಿದ್ದಾರೆ. ಬ್ರಿಟಿಷ್ ಸರಕಾರದ ಆಳ್ವಿಕೆಯ ಅವಧಿಯ ಉತ್ತಮ ಆಡಳಿತಗಾರ ಕಲೆಕ್ಟರ ಗೊನೆಹಳ್ಳಿ ವೆಂಕಣ್ಣ ನಾಯಕ ನೆನಪು ಎಂಬ ವಿಷಯದ ಕುರಿತು ಖ್ಯಾತ ಯಕ್ಷಗಾನ ಕಲಾವಿದೆ , ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಕಿತ್ತೂರಿನ ಸಹ ಪ್ರಾಧ್ಯಾಪಕಿ ಡಾ.ಪ್ರಜ್ಞಾ ಮತ್ತಿಹಳ್ಳಿ ಉಪನ್ಯಾಸ ನೀಡಲಿದ್ದಾರೆ.
    ಸ್ವಾತಂತ್ರ್ಯ ಯೋಧರಿಗಾಗಿ ಶ್ರೀಗಂಧದ0ತೆ ತನ್ನ ಬಾಳನ್ನು ತೇಯ್ದ ಸಿದ್ಧಾಪುರದ ಹಸಲರ ದೇವಿ ಅವರ ನೆನಪಿನ ಕಾರ್ಯಕ್ರಮ ಹಾಗೂ ಮೈಕ್ರೋಲ್ಯಾಂಡ್ ಚೀಫ್ ಡೆಲಿವರಿ ಆಫೀಸರ್ ಮಂಜುನಾಥ ನಾಯಕ ಯು.ಎಸ್‌ಎ ಇವರಿಗೆ ಗೌರವಾರ್ಪಣೆ ಮತ್ತು ಉತ್ತರಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ 10 ಯುವ ಪ್ರತಿಭೆಗಳಿಗೆ ಪುರಸ್ಕಾರ ಪ್ರದಾನ, ಹಾಗೂ ವೇದಿಕೆ ಕಾರ್ಯಕ್ರಮದ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದ ಪ್ರತಿಭೆಗಳಿಂದ ಕಾಲಮಿತಿಯೊಂದಿಗೆ, ನೃತ್ಯ, ಗಾಯನ, ನಾಡಗೀತೆ, ಯಕ್ಷನೃತ್ಯ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿದೆ ಎಂದು ಗಾಂವಕರ ಮೆಮೋರಿಯಲ್ ಫೌಂಡೇಶನ್ ಬಾಸಗೋಡ ಅಂಕೋಲಾ ಇದರ ಅಧ್ಯಕ್ಷರಾದ ದೇವಾನಂದ ಬೊಮ್ಮಯ್ಯ ಗಾಂವಕರ ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top