ಶಿರಸಿ; ವಿಶ್ವ ಏಡ್ಸ್ ಜಾಗೃತಿ ದಿನವನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ, ತಾಲೂಕು ಕಾನೂನು ಸೇವಾ ಸಮಿತಿ ಶಿರಸಿ, ವಕೀಲರ ಸಂಘ ಶಿರಸಿ ಹಾಗೂ ವಿವಿಧ ಇಲಾಖೆಗಳು ಮತ್ತು ಅರುಣೋದಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಅರುಣೋದಯ ತರಬೇತಿ ಕೇಂದ್ರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಶಿರಸಿ ಅಧ್ಯಕ್ಷರಾದ ಕಮಾಲಾಕ್ಷ ಡಿ. ಇವರು ಮಾತನಾಡಿ ಭಾರತದಲ್ಲಿ ಇಂದಿನ ದಿನಗಳಲ್ಲಿ ಎಡ್ಸ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಸ್ವಾಗತಾರ್ಹ ಆದರೂ ಈ ದಿಶೆಯಲ್ಲಿ ಪ್ರತಿಯೊಬ್ಬರು ಜವಾಬ್ದಾರಿಯಿಂದ ವರ್ತಿಸಬೇಕು ಎಂದರು.
ಅರುಣೋದಯ ಸಂಸ್ಥೆಯ ಸಂಸ್ಥಾಪಕ, ವಕೀಲ ಸತೀಶ ಪಿ ನಾಯ್ಕ ಇವರು ಮಾತನಾಡಿ ಏಡ್ಸ್ ಬಗ್ಗೆ ಜಾಗೃತಿ ಅತಿ ಅವಶ್ಯಕವಾಗಿದ್ದು ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ಎಲ್ಲರನ್ನು ಸ್ವಾಗತಿಸಿದರು.
ವಕೀಲರ ಸಂಗದ ಅಧ್ಯಕ್ಷ ಸಿ. ಎಫ್. ಈರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಸ್ತಿನ ಜೀವನ ಪಾಲನೆಯಿಂದ ಏಡ್ಸ್ ಹರಡದಂತೆ ತಡೆಗಟ್ಟಬಹುದು ಎಂದರು. ವಕೀಲರಾದ ಗಣೇಶ ಎಸ್ ಪೂಜಾರಿ ಮತ್ತು ಶಶಿಕಿರಣ ಪಿ ನಾಯ್ಕ ಇವರು ಉಪನ್ಯಾಸ ನೀಡಿದರು.
ವೇದಿಕೆ ಮೇಲೆ ಅಂಜನಾ ಹೆಗಡೆ, ಸವಿತಾ ಮಂಡೂರ, ಅರುಣೋದಯ ಟ್ರಸ್ಟಿ ವಿನಾಯಕ ಶೇಟ್ ಉಪಸ್ಥಿತರಿದ್ದರು, ಅರುಣೋದಯ ಟ್ರಸ್ಟನ ಕಾರ್ಯಕ್ರಮ ಸಂಯೋಜಕರಾದ ಚಂದ್ರಕಾ0ತ ಪವಾರ ಕಾರ್ಯಕ್ರಮ ನಿರ್ವಹಿಸಿದರು.