Slide
Slide
Slide
previous arrow
next arrow

ಮನೆ ಗೋಡೆ ಕುಸಿದು ಈರ್ವರು ಸಾವು

300x250 AD

ಅಂಕೋಲಾ: ಮನೆ ಗೋಡೆ ಕುಸಿದು ಇಬ್ಬರು ಮೃತಪಟ್ಟ ಘಟನೆ ತಾಲೂಕಿನ ಭಾವಿಕೇರಿಯಲ್ಲಿ ಸಂಭವಿಸಿದೆ.
ಭಾವಿಕೇರಿ ನಿವಾಸಿ ಮಧುಕರ ನಾಯಕ (58) ಮತ್ತು ಶಾಂತಾರಾಮ ನಾಯಕ (58) ಮೃತ ದುರ್ದೈವಿಗಳು. ಮಧುಕರ ನಾಯಕ ಅವರ ಹಳೆಯ ಮನೆಯ ಗೋಡೆ ತೆರುವುಗೊಳಿಸಿಲು ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗೋಡೆ ಕುಸಿದು ಬಿದ್ದ ಪರಿಣಾಮವಾಗಿ ಮಣ್ಣಿನ ಅಡಿಯಲ್ಲಿ ಸಿಲುಕಿ ಗಂಭೀರ ಸ್ಥಿತಿಯಲ್ಲಿ ಇದ್ದವರನ್ನು ಪ್ರತ್ಯೇಕವಾಗಿ ಮಂಗಳೂರು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಓರ್ವರು ಕುಮಟಾ ಮಿರ್ಜಾನ ಬಳಿ, ಇನ್ನೋರ್ವರು ಕುಂದಾಪುರದ ಬೈಂದೂರು ಬಳಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top