ಸಿದ್ದಾಪುರ: ಇತ್ತೀಚಿನ ದಿನಗಳಲ್ಲಿ ತಾಲೂಕಿನ ಹಳ್ಳಿಯ ದೇವಸ್ಥಾನಗಳ ಹುಂಡಿ ಕಳ್ಳತನ ನಡೆಯುತ್ತಿದ್ದು, ದೇವಸ್ಥಾನ ಸಮಿತಿಯವರು ಮುಂಜಾಗ್ರತೆ ಕ್ರಮ ವಹಿಸಬೇಕೆಂದು ಪಿಎಸೈ ಎಂ.ಜಿ. ಕುಂಬಾರ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ತಾಲೂಕಿನ ದೇವಸ್ಥಾನಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಕಾರ್ಯದರ್ಶಿಗಳ ಸಭೆ ನಡೆಸಿದ ಅವರು, ಹುಂಡಿಗಳಲ್ಲಿರುವ ದುಡ್ಡನ್ನು ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ತೆಗೆಯಿರಿ. ದೇವಸ್ಥಾನಗಳಲ್ಲಿ ಸಿ. ಸಿ ಟಿವಿ ಕ್ಯಾಮರಾ ಅಳವಡಿಸಿ. ದೇವಸ್ಥಾನದ ಬಾಗಿಲಿನ ಕೀಯನ್ನು ದೇವಸ್ಥಾನದಲ್ಲಿ ಇಡುವ ಪದ್ಧತಿ ಇದ್ದು, ಕೀಯನ್ನು ಅರ್ಚಕರ ಅಥವಾ ಅಧ್ಯಕ್ಷರ ಹತ್ತಿರ ಇಟ್ಟುಕೊಳ್ಳಲು ಕ್ರಮ ವಹಿಸಿ ಎಂದು ಸೂಚನೆ ನೀಡಿದರು. ದೇವಾಲಯದ ಆಭರಣಗಳನ್ನು ಪೂಜೆ ಹಾಗೂ ಹಬ್ಬದ ಸಂದರ್ಭದಲ್ಲಿ ಮಾತ್ರ ಹಾಕಿ, ಬಾಕಿ ದಿನಗಳಲ್ಲಿ ಬ್ಯಾಂಕ್ ಅಥವಾ ಸಂಬಂಧಪಟ್ಟ ಸಮಿತಿಯವರ ಹತ್ತಿರ ಇಟ್ಟುಕೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ತನಿಖಾ ವಿಭಾಗದ ಪಿಎಸ್‌ಐ ಮಲ್ಲಿಕಾರ್ಜುನಯ್ಯ ಕೊರಾಣಿ, ತಾಲೂಕಿನ ದೇವಸ್ಥಾನಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.