ಹೊನ್ನಾವರ: ತಾಲೂಕಿನ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣೆಯ ಚಂದಾವರ ಮತ್ತು ಹಳದೀಪುರ ಘಟಕದ ವತಿಯಿಂದ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಜನ್ಮದಿನವನ್ನು ಅನಾಥ ಮಕ್ಕಳಿಗೆ ದಾನ ಧರ್ಮ ನೀಡುವ ಮೂಲಕ ವಿನೂತನವಾಗಿ ಆಚರಿಸಲಾಯಿತು. ಕರ್ಕಿಯ ಶ್ರೀ ದಯಾನಂದ ಗುರುಕುಲದಲ್ಲಿ ವ್ಯಾಸಂಗ ಮಾಡುತ್ತಿರುವ ಮೇಘಾಲಯದ ಹದಿನಾರು ಅನಾಥ ವಿದ್ಯಾರ್ಥಿಗಳಿಗೆ, ಅಕ್ಕಿ, ಸ್ವೀಟ್, ಹಾಲು ಹಾಗೂ ಪಟ್ಟಿ ಪೆನ್ನುಗಳನ್ನು ವಿತರಿಸಿದರು.
ಡಾ.ವೀರೇಂದ್ರ ಹೆಗ್ಗಡೆ ಜನ್ಮದಿನ: ಅನಾಥ ಮಕ್ಕಳಿಗೆ ಅವಶ್ಯಕ ವಸ್ತುಗಳ ವಿತರಣೆ
