ಹಳಿಯಾಳ: ದೆಹಲಿಯ ಚಾರಿತ್ರಿಕ ರೈತ ಹೋರಾಟದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೆ ರೈತರಿಗೆ ದ್ರೋಹ ಬಗೆದಿರುವುದನ್ನು ವಿರೋಧಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ಬಿ.ಕೆ.ಹಳ್ಳಿ ಗ್ರಾಮ ಘಟಕದಿಂದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗಿದೆ.
700ಕ್ಕೂ ಹೆಚ್ಚು ರೈತರು ಪ್ರಾಣ ನೀಡಿ ಮೂರು ಕರಾಳ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಹೋರಾಡಿ ಇಡೀ ದುಡಿಯುವ ಜನತೆಗೆ ಸ್ಫೂರ್ತಿ ನೀಡಿದರು. ಆದರೆ ಇನ್ನೂ ಸಂಪೂರ್ಣ ಬೇಡಿಕೆಗಳು ಈಡೇರಿಲ್ಲ. ವಿದ್ಯುತ್ ಖಾಸಗೀಕರಣ ವಾಪಸ್ಸಾಗಬೇಕು, ರೈತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕು, ರಾಜ್ಯದಲ್ಲೂ ಮೂರು ಕೃಷಿ ಕಾಯ್ದೆಗಳು ರದ್ದಾಗಬೇಕು ಹಾಗೂ ಇನ್ನಿತರೆ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರೆಸುತ್ತೇವೆಂದು ಘಟಕದ ಸದಸ್ಯರು ಪ್ರತಿಜ್ಞೆ ಮಾಡಿದರು.
ಪ್ರತಿಭಟನೆಯಲ್ಲಿ ಸದಸ್ಯರಾದ ಅಂಬವ್ವ ಚ. ಮೇತ್ರಿ, ಶಂಕರ ಪೆಚಗಿ, ಕರೆವ್ವಾ ಮೇತ್ರಿ, ಭೀಮವ್ವ ಮೇತ್ರಿ, ಯಲ್ಲಪ್ಪ ಮೆತ್ರಿ, ಕುಮಾರ್ ತವರಿ, ಚೆನ್ನಪ್ಪ ಅಂಗಡಿ, ಸವಿತಾ ಮೇತ್ರಿ ಇನ್ನಿತರರು ಇದ್ದರು.