ಮುಂಡಗೋಡ: ತಾಲೂಕು ಅರಣ್ಯ ಅತಿಕ್ರಮಣದಾರರ ಸಭೆಯನ್ನ ನ.28ರ ಬೆಳಿಗ್ಗೆ 10 ಗಂಟೆಗೆ ದೈವಜ್ಞ ಕಲ್ಯಾಣ ಮಂಟಪದಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿ.10ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿರುವ ಹಿನ್ನೆಲೆಯಲ್ಲಿ, ಅಸಮರ್ಪಕ ಜಿ.ಪಿ.ಎಸ್ ಮೇಲ್ಮನವಿ ಅಭಿಯಾನ ಹಾಗೂ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ಕುರಿತು ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ. ಆಸಕ್ತ ಅರಣ್ಯ ಅತಿಕ್ರಮಣದಾರರು ತಾಲೂಕು ಅರಣ್ಯ ಅತಿಕ್ರಮಣದಾರರ ಸಭೆಗೆ ಹಾಜರಾಗಲು ರವೀಂದ್ರ ನಾಯ್ಕ ಕೋರಿದ್ದಾರೆ.