Slide
Slide
Slide
previous arrow
next arrow

ಶರಾವತಿ ಹಿನ್ನೀರಿಗೆ ಜಾರಿದ ಬಸ್: ತಪ್ಪಿದ ಭಾರೀ ಅನಾಹುತ

300x250 AD

ಶಿವಮೊಗ್ಗ: ಸಿಗಂದೂರು ಮಾರ್ಗವಾಗಿ ಕಟ್ಟಿನಕಾರಿಗೆ ತಲುಪುವ ಗಜಾನನ ಬಸ್ ಅಪಘಾತ ಸಂಭವಿಸಿದೆ. ಲಾಂಚ್ ಪ್ಲಾಟ್ ಫಾರಂನಲ್ಲಿ ಈ ಅವಘಡ ನಡೆದಿದೆ.
ಲಾಂಚ್ ಬರುವ ಮುಂಚಿತವಾಗಿ ಬಸ್ಸನ್ನು ಫ್ಲಾಟ್ ಫಾರಂನಲ್ಲಿ ತಿರುಗಿಸಿ ನಿಲ್ಲಿಸುವ ಸಂದರ್ಭದಲ್ಲಿ ಇಕ್ಕಟ್ಟು ಮತ್ತು ಇಳಿಜಾರಿನ ಕಾರಣದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ಸು ನದಿಗೆ ಇಳಿದಿದ್ದು, ಸಂಭವಿಸಬಹುದಾದ ಬಾರಿ ಅನಾಹುತ ತಪ್ಪಿದೆ.
ಸಾಗರದಿಂದ ಹಿನ್ನೀರಿನ ವಿವಿಧ ಭಾಗಗಳಿಗೆ ಹೊರಟಿದ್ದ ಸುಮಾರು 50ರಿಂದ 60 ಜನ ಸ್ಥಳೀಯರು ಸೇರಿದಂತೆ, ಸಿಗಂದೂರು ಪ್ರವಾಸಿಗರು ಅದೃಷ್ಟವಶಾತ್ ಪಾರಾಗಿದ್ದಾರೆ. ಅಲ್ಲಿಯೇ ಇದ್ದ ಸೇತುವೆ ಕಾಮಗಾರಿಯ ಹಿಟಾಚಿಯ ಸಹಾಯದಿಂದ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಈಗಾಗಲೆ ಫ್ಲ್ಯಾಟ್ ಫಾರಂನ ಅವ್ಯವಸ್ಥೆಯ ಬಗ್ಗೆ ಸಂಬಂಧಸಿದ ಗುತ್ತಿಗೆದಾರರಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top