Slide
Slide
Slide
previous arrow
next arrow

ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ

300x250 AD

ಕುಮಟಾ: ತಾಲೂಕಿನ ಬಾಡದ ಸುಪ್ರಸಿದ್ಧ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ಲಕ್ಷ ದೀಪೋತ್ಸವ ನಿಮಿತ್ತ ದೇವಸ್ಥಾನದ ಸುತ್ತಲೂ ದೀಪಗಳನ್ನು ಬೆಳಗಲಾಯಿತು. ದೇವಸ್ಥಾನದ ಆವರಣ, ಸುತ್ತಮುತ್ತಲಿನ ವಾತಾವರಣ ದೀಪಗಳಿಂದಲೇ ಪ್ರಜ್ವಲಿಸುತ್ತಿತ್ತು. ಸಾವಿರಾರು ಭಕ್ತರು ಶ್ರೀ ಕಾಂಚಿಕಾ ಪರಮೇಶ್ವರಿ ದೇವಿಯ ದರ್ಶನ ಪಡೆದು ದೀಪಗಳನ್ನು ಬೆಳಗಿಸುವ ಮೂಲಕ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ದೇವಸ್ಥಾನದ ನೂರಕ್ಕೂ ಅಧಿಕ ಮೆಟ್ಟಿಲುಗಳು ದೀಪಗಳಿಂದಲೇ ಕಂಗೊಳಿಸುತ್ತಿದ್ದವು. ಮಕ್ಕಳು, ಮಹಿಳೆಯರು ಭಕ್ತಿಯಿಂದ ದೀಪ ಬೆಳಗಿಸುವ ಮೂಲಕ ಧಾರ್ಮಿಕ ಭಾವ ಮೆರೆದರು. ಲಕ್ಷ ದೀಪಗಳು ಪ್ರಜ್ವಲಿಸುತ್ತಿರುವ ಧರ್ಮ ಜ್ಯೋತಿಗಳಂತೆ ಭಾಸವಾಗುತ್ತಿದ್ದವು.
ಈ ಸಂರ್ಭದಲ್ಲಿ ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಎಂಎಲ್‌ಸಿ ಗಣಪತಿ ಉಳ್ವೇಕರ್ ಅವರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡು ಧನ್ಯತೆ ಮೆರೆದರು.

300x250 AD
Share This
300x250 AD
300x250 AD
300x250 AD
Back to top