• Slide
    Slide
    Slide
    previous arrow
    next arrow
  • ಕರ್ತವ್ಯ ಲೋಪದ ಕುರಿತು ಸಿಬಿಐಗೆ ದಾಖಲೆ ನೀಡಲಿ: ಗೋಪಾಲ ನಾಯಕ ಸವಾಲು

    300x250 AD

    ಅಂಕೋಲಾ: ಪರೇಶ್ ಮೇಸ್ತಾ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ನಕುಲ್ ಅವರು ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಹೇಳಿಕೆ ನೀಡುವ ಬಿಜೆಪಿಯ ಕೃಪಾಪೊಷಿತ ನಾಟಕ ಮಂಡಳಿಯವರು ಬೇಕಾದರೆ ದಾಖಲೆಗಳನ್ನ ಸಿಬಿಐಗೆ ಸಲ್ಲಿಸಲಿ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲ ನಾಯಕ ತಿರುಗೇಟು ನೀಡಿದ್ದಾರೆ.
    ಪರೇಶ್ ಮೇಸ್ತಾ ಸಾವಿನ ಕುರಿತಂತೆ ಬಿಜೆಪಿ ನಾಯಕರ ಹೇಳಿಕೆ ನೋಡಿದರೆ ನಗಬೇಕೋ, ಅಳಬೇಕೋ ಎನ್ನುವುದು ಅರ್ಥ ಆಗುತ್ತಿಲ್ಲ. ಘಟನೆ ನಡೆದ ಕೆಲ ಸಮಯದಲ್ಲೇ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ನಕುಲ್ ಅವರು ಸಹಜ ಸಾವೆಂದು ಹೇಳಿಕೆ ನೀಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಿಜೆಪಿ ನಾಯಕರುಗಳು ಅದೇ ಜಿಲ್ಲಾಧಿಕಾರಿಗಳನ್ನ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿರುವ ಇಂದಿನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ಗೆ ಹೇಳಿ ಅವರನ್ನು ಸ್ಥಾನ ಪಲ್ಲಟ ಮಾಡಿಸಿದ್ದರೆ ಇವರ ಹೇಳಿಕೆಗೆ ಗೌರವ ಸಲ್ಲುತ್ತಿತ್ತು ಎಂದಿದ್ದಾರೆ.
    2017ರ ಡಿಸೆಂಬರ್ 8ರಂದು ಪರೇಶ್ ಮೇಸ್ತಾ ಮೃತದೇಹ ಪತ್ತೆಯಾಗಿದ್ದು, ಕೊಲೆ ಆರೋಪ ಕೇಳಿ ಬಂದ ತಕ್ಷಣ ಡಿಸೆಂಬರ್ 13ಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಿಬಿಐಗೆ ಪ್ರಕರಣ ಹಸ್ತಾಂತರ ಮಾಡಿತ್ತು. ಸಿಬಿಐ ಈ ಪ್ರಕರಣದ ಕುರಿತು ಎಫ್‌ಐಆರ್ ದಾಖಲಿಸಿದ್ದು 2018ರ ಏಪ್ರಿಲ್ 23ರಂದು. ನಾಲ್ಕು ತಿಂಗಳ ನಂತರ ಎಫ್‌ಐಆರ್ ದಾಖಲಿಸದ ಉದ್ದೇಶ ಪ್ರಕರಣವನ್ನ ಚುನಾವಣೆ ಬಳಸಿಕೊಳ್ಳಬೇಕು ಎಂದಲ್ಲವೇ? ಎಂದು ಪ್ರಶ್ನಿಸಿದ್ದಾರೆ.
    ಪರೇಶ್ ಮೇಸ್ತಾ ಸಾವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೊಲೆ ಎಂದು ಬಿಂಬಿಸಿ ಸಾವಿನಲ್ಲೂ ರಾಜಕೀಯ ಮಾಡಿ, ಆ ಮೂಲಕ ಜನರ ಭಾವನೆಯನ್ನ ಮತವನ್ನಾಗಿ ಪರಿವರ್ತಿಸಿದ ಬಿಜೆಪಿಗೆ ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿ ನೋಡಿದ ಮೇಲೆ ತಮ್ಮ ಬಣ್ಣ ಬಯಲಾಯಿತು ಎಂದು ಸತ್ಯ ಒಪ್ಪಿಕೊಳ್ಳುವ ಬದಲು ಮತ್ತೆ ಕಾಂಗ್ರೆಸ್ ನಾಯಕರ ಮೇಲೆ ಇದೇ ಬಿಜೆಪಿಯ ಕೃಪಾಪೊಷಿತ ನಾಟಕ ಮಂಡಳಿಯವರು ಆರೋಪ ಮಾಡುತ್ತಿದ್ದಾರೆ. ಐದು ವರ್ಷಗಳ ಕಾಲ ರಾಜ್ಯದಲ್ಲಿ ಯಶಸ್ವಿ ಸರ್ಕಾರ ನಡೆಸಿ ಇಂದಿಗೂ ಜನರ ಮೆಚ್ಚುಗೆಗೆ ಕಾರಣವಾಗಿರುವ ಸಿದ್ದರಾಮಯ್ಯನವರ ಬಗ್ಗೆ ಎಲ್ಲೋ ಕುಳಿತು ಹೇಳಿಕೆ ನೀಡುವ ಮುಖಂಡರ ಬಗ್ಗೆ ಮರುಕ ಹುಟ್ಟುತ್ತದೆ. ಜಿಲ್ಲಾಧಿಕಾರಿ ಕರ್ತವ್ಯ ಲೋಪ ಮಾಡಿದ್ದಾರೆ ಎನ್ನುವ ಹೇಳಿಕೆಯನ್ನು ಇವರ ಪಕ್ಷದ ಶಾಸಕರು, ಸಂಸದರು ಒಪ್ಪಿಕೊಳ್ಳುತ್ತಾರೆಯೇ…? ಎಂದು ಪ್ರಶ್ನಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top