• Slide
    Slide
    Slide
    previous arrow
    next arrow
  • ನಿಯಮ ಉಲ್ಲಂಘನೆ: 9 ಗ್ರಾಮ ಓನ್ ಕೇಂದ್ರಗಳಿಗೆ ನೋಟಿಸ್ ಜಾರಿ

    300x250 AD

    ಹೊನ್ನಾವರ: ಜಿಲ್ಲೆಯ 237 ಗ್ರಾಮ ಒನ್ ಕೇಂದ್ರಗಳಲ್ಲಿ ಸುಮಾರು 35ಕ್ಕೂ ಹೆಚ್ಚಿನ ಗ್ರಾಮ ಒನ್ ಸೆಂಟರ್‌ಗಳು ಸರ್ಕಾರದ ನಿಯಮಾವಳಿಗಳಂತೆ ಬ್ರಾಂಡಿಂಗ್ ಮಾಡಿಲ್ಲ! ಈ ಪೈಕಿ ಯೋಜನೆಯ ನಿಯಮ ಮೀರಿ ಕಾರ್ಯನಿರ್ವಹಿಸುತ್ತಿದ್ದ ತಾಲೂಕಿನ 9 ಕೇಂದ್ರಗಳಿಗೆ ತಹಶೀಲ್ದಾರರು ನೋಟಿಸ್ ಜಾರಿ ಮಾಡಿದ್ದಾರೆ.
    ಗ್ರಾಮೀಣ ಪ್ರದೇಶದ ಜನತೆಗೆ ತಮ್ಮ ಗ್ರಾಮಗಳಲ್ಲೇ ಸರ್ಕಾರಿ ಸೇವೆಗಳು ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಸರ್ಕಾರವು ಪ್ರತಿ ಗ್ರಾಮದಲ್ಲಿ ಗ್ರಾಮ ಒನ್ ಕೇಂದ್ರ ತೆರೆದಿತ್ತು. ಆ ಮೂಲಕ ವಿವಿಧ ಸೇವೆಗಳನ್ನು ರಿಯಾಯಿತಿ ದರದಲ್ಲಿ ಸುಲಭವಾಗಿ ಜನಸಾಮಾನ್ಯರಿಗೆ ನೀಡುವ ಜೊತೆಗೆ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸುವ ಉದ್ದೇಶವಾಗಿತ್ತು. ಆದರೆ ಸರ್ಕಾರ ಹೊರಡಿಸಿದ ಯೋಜನೆಯ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಒನ್ ಕೇಂದ್ರದಲ್ಲಿ ಜನಸಾಮಾನ್ಯರಿಂದ ಅಧಿಕ ಹಣ ಪಡೆಯುತ್ತಿದ್ದಾರೆ. ಸರಿಯಾದ ಸಮಯದಲ್ಲಿ ಕೇಂದ್ರ ತೆರೆಯುತ್ತಿಲ್ಲ. ಸಿಬ್ಬಂದಿ ಸರಿಯಾದ ಮಾಹಿತಿ ನೀಡುತ್ತಿಲ್ಲ. ಹಲವು ಕೇಂದ್ರದಲ್ಲಿ ಅನುಮತಿ ಪಡೆದವರು ಇರದೇ ಬೇರೆಯವರನ್ನು ನೇಮಿಸಿದ್ದು, ಅವರು ಸಾರ್ವಜನಿಕರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಕೂಡಾ ಸಲ್ಲಿಸಲಾಗಿತ್ತು. ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ, ಸಾರ್ವಜನಿಕರ ಮನವಿ ಮನ್ನಿಸಿ ಜಿಲ್ಲಾಡಳಿತದ ವರದಿಯ ಬಳಿಕ ತಾಲೂಕಿನ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
    ಗ್ರಾಮ ಒನ್ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಯೋಜನೆಯಾಗಿದ್ದು, ರಾಜಕೀಯದ ಪ್ರಭಾವ ಬಳಸಿ ಕೆಲವರು ಅನುಮತಿ ಪಡೆದಿದ್ದರು. ಅದರಲ್ಲಿ ಫ್ರಾಂಚೈಸಿ ಪಡೆದವರು ಆಪರೇಟರ್‌ಗಳನ್ನು ಇಟ್ಟು ಕೆಲಸ ಮಾಡಿಸುತ್ತಿದ್ದರು. ನಿಯಮಗಳ ಪ್ರಕಾರ ಯಾರ ಹೆಸರಲ್ಲಿ ಫ್ರಾಂಚೈಸಿ ಪಡೆಯಲಾಗಿದೆಯೋ ಅವರೇ ಕೇಂದ್ರದಲ್ಲಿದ್ದು ಸೇವೆ ನೀಡಬೇಕಾದರೂ ಈ ನಿಯಮವು ಪಾಲನೆಯಾಗಿಲ್ಲ. ಕೆಲವರು ಹೊರ ಜಿಲ್ಲೆ ಹಾಗೂ ಹೊರ ರಾಜ್ಯದಲ್ಲಿದ್ದಾರೆ. ಒಬ್ಬರ ಬಳಕೆದಾರರ ಹೆಸರು ಇನ್ನೊಬ್ಬರಿಗೆ ನೀಡುವಂತೆ ಇಲ್ಲ ಎಂದು ನಿಯಮವಿದ್ದರೂ ಒಂದು ಪಂಚಾಯತ್ ವ್ಯಾಪ್ತಿಯವರು ಬೇರೆ ಪಂಚಾಯತ್‌ನ ಖಾಸಗಿ ಸೈಬರ್ ಸೆಂಟರ್‌ನವರಿಗೆ ತಮ್ಮ ಐಡಿ ನೀಡಿ ದುರ್ಬಳಕೆ ಮಾಡುತ್ತಿದ್ದಾರೆ ಎನ್ನುವ ಗಂಭೀರ ಆರೋಪವು ಇದೆ.
    ಈ ಎಲ್ಲಾ ನಿಯಮ ಉಲ್ಲಂಘಿಸಿದ ತಾಲೂಕಿನ 9 ಗ್ರಾಮ ಒನ್ ಕೇಂದ್ರಗಳನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದ್ದು, ಮುಂದಿನ ದಿನದಲ್ಲಿ ವರದಿ ಬಳಿಕ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top