• Slide
    Slide
    Slide
    previous arrow
    next arrow
  • ಜಿಲ್ಲೆಗೆ 3 ರಾಜ್ಯಮಟ್ಟದ ಅತ್ಯುತ್ತಮ ಸಿಬ್ಬಂದಿ ಸೇವಾ ಪ್ರಶಸ್ತಿ

    300x250 AD

    ಕುಮಟಾ: ತುಮಕೂರಿನಲ್ಲಿ ಇತ್ತೀಚೆಗೆ ಜರುಗಿದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ 55 ನೇ ವರ್ಷದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಮತ್ತು ಸಿಬ್ಬಂದಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯ ಕಾರವಾರ, ಕುಮಟಾ ಮತ್ತು ಹೊನ್ನಾವರ ಶಾಖಾ ಗ್ರಂಥಾಲಯಗಳಿಗೆ ರಾಜ್ಯಮಟ್ಟದ ಅತ್ಯುತ್ತಮ ಸಿಬ್ಬಂದಿ ಸೇವಾ ಪ್ರಶಸ್ತಿ ನೀಡಲಾಗಿದೆ.
    ಪ್ರಶಸ್ತಿಯನ್ನು ಕುಮಟಾ ಗ್ರಂಥಾಲಯ ಸಹಾಯಕ ಗಣೇಶ ಹೆಗಡೆ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರಿಂದ ಸ್ವೀಕರಿಸಿದರು. ಗ್ರಂಥಾಲಯಕ್ಕೆ ಸಂಪೂರ್ಣ ಗಣಕೀಕರಣ, ಸಂಪೂರ್ಣ ಅಟೋಮೇಷನ್ ಪೂರೈಸಿ ಅಟೋಮೇಟೆಡ್ ಗ್ರಂಥಾಲಯವಾಗಿ ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಿದ್ದು, ಗ್ರಂಥಾಲಯದ ಪುಸ್ತಕಗಳನ್ನು ಓದುಗರು ಮೊಬೈಲ್ ಮೂಲಕವೇ ಹುಡುಕುವ ಸುವ್ಯವಸ್ಥಿತ ಗ್ರಂಥಾಲಯವಾಗಿ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಸಿಬ್ಬಂದಿ ಸೇವಾ ಪ್ರಶಸ್ತಿ ನೀಡಲಾಗಿದೆ.
    ಕುಮಟಾ ಶಾಖಾ ಗ್ರಂಥಾಲಯದಲ್ಲಿ ತಾಂತ್ರಿಕ ಸಿಬ್ಬಂದಿಯಾಗಿ ಜೆ.ಎಸ್.ವಿನುತಾ, ಸಹಾಯಕ ಸಿಬ್ಬಂದಿ ಅನಂತ ಕೊರಗಂವಕರ, ಕಾರವಾರ ಗ್ರಂಥಾಲಯದ ತಾಂತ್ರಿಕ ಸಿಬ್ಬಂದಿ ನರ್ಮದಾ ಭಟ್ಟ, ಹೊನ್ನಾವರ ಗ್ರಂಥಾಲಯದ ತಾಂತ್ರಿಕ ಸಿಬ್ಬಂದಿ ಮಂಗಲಾ ಮೇಸ್ತ ಇವರ ಸಾಮೂಹಿಕ ಪರಿಶ್ರಮದ ಫಲವಾಗಿ ಮತ್ತು ಗ್ರಂಥಾಲಯ ಉಪನಿರ್ದೇಶಕ ರಾಘವೇಂದ್ರ ಕೆ.ವಿ., ನಿರ್ದೇಶಕ ಡಾ.ಸತೀಶಕುಮಾರ ಹೊಸಮನಿ ಅವರು ಗ್ರಂಥಾಲಯದಲ್ಲಿ ಓದುಗ ಸ್ನೇಹಿಯಾಗಿ ಹೊಸ ಯೋಜನೆಗಳನ್ನು ಅಳವಡಿಸಿದ್ದು, ಪ್ರಶಸ್ತಿ ದೊರಕಲು ಕಾರಣವಾಗಿದೆ.
    ಗ್ರಂಥಾಲಯವನ್ನು ಸಂಪೂರ್ಣ ಕೊಲೋನ್ ಕ್ಲಾಸಿಫಿಕೇಷನ್ ಮೂಲಕ ವರ್ಗೀಕರಿಸಿ ಇಡಲಾಗಿದೆ. ಗ್ರಂಥಾಲಯವು ಸ್ವಂತದ ವೆಬ್‌ಸೈಟ್ ಹೊಂದಿದ್ದು, ಅಟೋಮೇಷನ್‌ಗೆ ಸಹಕಾರಿಯಾಗುವ ಇ-ಗ್ರಂಥಾಲಯ 3.0 ತಂತ್ರಾಂಶವನ್ನು ಅಳವಡಿಸಲಾಗಿದೆ. ಇಲಾಖೆಯ ಕೆಡಿಪಿಎಲ್‌ನ್ನು ಸದಸ್ಯತ್ವ ಬೆಳೆಸುವ ಹಾಗೂ ಉಪಯೋಗಗಳನ್ನು ಓದುಗರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಸದಸ್ಯತ್ವ ಕಾರ್ಡುಗಳನ್ನು ನವೀನ ರೀತಿಯಲ್ಲಿ ವಿನ್ಯಾಸಗೊಳಿಸಿ ಡಿಜಿಟಲೀಕರಣಗೊಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top