Slide
Slide
Slide
previous arrow
next arrow

ಗಮನ ಸೆಳೆದ ತಿಂಡಿ- ತಿನಿಸುಗಳ ಪ್ರದರ್ಶನ

300x250 AD

ಕುಮಟಾ: ಪಟ್ಟಣದ ನೆಲ್ಲಿಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಮೆಟ್ರಿಕ್ ಮೇಳದಲ್ಲಿ ಮಕ್ಕಳು ಮಾರಾಟಕ್ಕಿಟ್ಟ ವಿವಿಧ ತಿಂಡಿ-ತಿನಿಸುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಮೇಳವನ್ನು ಎಸ್‌.ಡಿ.ಎಂ.ಸಿ ಉಪಾಧ್ಯಕ್ಷ ನಿತ್ಯಾನಂದ ನಾಯ್ಕ ವನ್ನಳ್ಳಿ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಅರಿವು ಮೂಡಿಸಲು ಈ ಮೆಟ್ರಿಕ್ ಮೇಳವನ್ನು ಆಯೋಜಿಸಲಾಗಿದೆ. ಮಕ್ಕಳು ಸಿದ್ಧಪಡಿಸಿಕೊಂಡು ಬಂದ ವಿವಿಧ ತಿಂಡಿ-ತಿನಿಸುಗಳನ್ನು ಮೆಟ್ರಿಕ್ ಮೇಳದಲ್ಲಿ ಪ್ರದರ್ಶಿಸುವ ಮೂಲಕ ಮಾರಾಟ ಮಾಡಿದರು. ಮಕ್ಕಳ ವ್ಯವಹಾರಿಕ ಶೈಲಿ ಬಲು ಆಕರ್ಷಣೀಯವಾಗಿದೆ ಎಂದು ಖುಷಿಪಟ್ಟರು.
ಶಾಲಾ ಮುಖ್ಯಾಧ್ಯಾಪಕಿ ಸುಮನಾ ನಾಯಕ ಮಾತನಾಡಿ, ಮಕ್ಕಳಲ್ಲಿ ಗಣಿತ ವಿಷಯವನ್ನು ಮನದಟ್ಟು ಮಾಡಲು ಈ ಮೆಟ್ರಿಕ್ ಮೇಳ ಸಹಾಯಕಾರಿಯಾಗಿದೆ. ಅಲ್ಲದೇ ಪ್ರತಿನಿತ್ಯ ಪಠ್ಯದ ವಿಷಯದಲ್ಲೇ ತಲ್ಲೀನರಾಗಿರುವ ವಿದ್ಯಾರ್ಥಿಗಳಲ್ಲಿ ಈ ಮೇಳ ಹೊಸ ಆಲೋಚನಾ ಶಕ್ತಿ ಮೂಡಿಸಲು ಸಹಾಯಕಾರಿಯಾಗಿದೆ ಎಂದರು.
ಸಿ.ಆರ್‌.ಪಿ ಸುಜೀತಾ ಭಟ್ ಮಾತನಾಡಿ, ಮಕ್ಕಳಿಗೆ ಪ್ರಾಯೋಗಿಕವಾಗಿ ವ್ಯವಹಾರದ ಜ್ಞಾನ ಮೂಡಿಸಲು ಈ ಮೆಟ್ರಿಕ್ ಮೇಳ ಸಹಾಯಕಾರಿಯಾಗಿದೆ ಎಂದರು. ಮೆಟ್ರಿಕ್ ಮೇಳದಲ್ಲಿ ಪಾನಿಪುರಿ, ಸ್ವೀಟ್ ಕಾರ್ನ್, ಬೇಲ್ ಪುರಿ, ವಡಾಪಾವ್, ಎಗ್ ಬಿರಿಯಾನಿ, ಸ್ಯಾಂಡ್‌ವಿಚ್, ಫ್ರುಟ್ಸ್ ಸಲಾಡ್, ಕೇಕ್, ಚಕ್ಕಲಿ, ಕೋಡಬಳೆ, ಸಂಕರಪೊಳೆ, ಹೋಳಿಗೆ, ಚಾಕಲೇಟ್, ಜ್ಯೂಸ್ ಸೇರಿದಂತೆ ವಿವಿಧ ತಿಂಡಿ-ತಿನಿಸುಗಳ ಜತೆಗೆ ಶೈಕ್ಷಣಿಕ ಪರಿಕರಗಳು ಗಮನ ಸೆಳೆದವು. ಸುಮಾರು 28 ಮಳಿಗೆಗಳನ್ನು ತೆರೆಯಲಾಗಿತ್ತು. ಮಕ್ಕಳು ಮಾರಾಟಕ್ಕಿಟ್ಟ ತಿಂಡಿ-ತಿನಿಸುಗಳನ್ನು ಪಾಲಕರು ಮತ್ತು ಶಿಕ್ಷಕರು ಖರೀದಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಮೂಡಿಸಿದರು. ಮಕ್ಕಳ ವ್ಯಾವಹಾರಿಕ ಸಂಭಾಷಣೆಯ ದೃಶ್ಯ ಬಲು ಆಕರ್ಷಣೀಯವಾಗಿತ್ತು.

300x250 AD
Share This
300x250 AD
300x250 AD
300x250 AD
Back to top