Slide
Slide
Slide
previous arrow
next arrow

ಶಿಕ್ಷಕಿ ರೀಟಾ ಡಿಸೋಜಾಗೆ ‘ರಾಷ್ಟ್ರೀಯ ಶಿಕ್ಷಣ ರತ್ನ’ ಪ್ರಶಸ್ತಿ

300x250 AD

ಸಿದ್ದಾಪುರ: ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ ಹಾಗೂ ಗೋವಾ ಕನ್ನಡಿಗರ ಸಂಘ ಇವರು ಪ್ರತಿ ವರ್ಷ ಕೊಡಮಾಡುವ ಪ್ರತಿಷ್ಠಿತ ನ್ಯಾಶನಲ್ ಐಕಾನ್ ಅವಾರ್ಡ್ ಗೆ ಇಲ್ಲಿನ ಶಿಕ್ಷಕಿ ರೀಟಾ ಎಂ. ಡಿಸೋಜಾ ಆಯ್ಕೆಯಾಗಿದ್ದಾರೆ.
ತಾಲೂಕಿನ ಮೆಣಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿರುವ ರೀಟಾ ಅವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ನ.27ರಂದು ಗೋವಾದಲ್ಲಿ ಏರ್ಪಡಿಸುವ ‘ಕರ್ನಾಟಕ ರಾಜ್ಯೋತ್ಸವ ಗತವೈಭವ’ ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯ ಶಿಕ್ಷಣ ರತ್ನ’ ಪ್ರಶಸ್ತಿಯನ್ನಿತ್ತು ಗೌರವಿಸಲಾಗುವುದೆಂದು ಸಂಘಟನೆಗಳು ತಿಳಿಸಿವೆ. ರೀಟಾ ಅವರಿಗೆ ಈ ಹಿಂದೆ ಕರ್ನಾಟಕ ರಾಜ್ಯ ಸರಕಾರಿ ಶಿಕ್ಷಕರ ಸಂಘಗಳ ಒಕ್ಕೂಟದಿಂದ ‘ಸಾವಿತ್ರಿಬಾಯಿ ಫುಲೆ’ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಲಭ್ಯವಾಗಿದ್ದು, ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಪ್ರಶಸ್ತಿಯನ್ನಿತ್ತು ಗೌರವಿಸಲಾಗಿತ್ತು.

300x250 AD
Share This
300x250 AD
300x250 AD
300x250 AD
Back to top