• Slide
    Slide
    Slide
    previous arrow
    next arrow
  • ಕೈ ಮಾಡಿದರೂ ನಿಲ್ಲಿಸದ ಬಸ್‌ಗಳನ್ನ ಅಡ್ಡಗಟ್ಟಿ ಪ್ರತಿಭಟಿಸಿದ ವಿದ್ಯಾರ್ಥಿಗಳು

    300x250 AD

    ಮುಂಡಗೋಡ: ಶಿರಸಿ- ಹುಬ್ಬಳ್ಳಿ ರಸ್ತೆಯಲ್ಲಿರುವ ಲೋಲೋಲಾ ಶಾಲೆ ಕರಗಿನಕೊಪ್ಪ ಗ್ರಾಮದ ಬಳಿ ವಿದ್ಯಾರ್ಥಿಗಳು ಗುರುವಾರ ಸಾರಿಗೆ ಬಸ್‌ಗಳನ್ನು ತಡೆದು ಪ್ರತಿಭಟನೆ ನಡೆಸಿದ್ದಾರೆ.
    ವಿದ್ಯಾರ್ಥಿಗಳು ಕೈ ಮಾಡಿದರು ಸಹ ಬಸ್‌ಗಳನ್ನು ನಿಲ್ಲಿಸದೆ ಚಾಲಕರು ಇಲ್ಲಿಂದ ಮುಂದೆ ಸಾಗುತ್ತಿದ್ದರು. ಇದರಿಂದ ವಿದ್ಯಾರ್ಥಿಗಳು ಸಾರ್ವಜನಿಕರ ಬೈಕ್ ಸೇರಿದಂತೆ ಖಾಸಗಿ ವಾಹನಗಳ ಸಹಾಯ ಪಡೆಯುವುದು ಅನಿವಾರ್ಯವಾದಂತಾಗಿತ್ತು. ಇನ್ನು ಕೆಲವು ವಿದ್ಯಾರ್ಥಿಗಳು ಯಾವ ವಾಹನವೂ ಸಿಗದೆ ನಡೆದುಕೊಂಡು ಶಾಲೆಯಿಂದ ಮನೆಗಳತ್ತ ತೆರಳುವಂತಾಗಿತ್ತು.
    ಹೀಗಾಗಿ ಇಂದು ರೊಚ್ಚಿಗೆದ್ದ ವಿದ್ಯಾರ್ಥಿಗಳೆಲ್ಲ ಸೇರಿ ಸಾರಿಗೆ ಬಸ್‌ಗಳನ್ನ ತಡೆದಿದ್ದಾರೆ. ಪ್ರತಿಭಟಿಸಿ, ನಮ್ಮೂರಿಗೆ ಬಸ್ ಬಿಡಲೇ ಬೇಕು, ನಮ್ಮನ್ನ ಹತ್ತಿಸಿಕೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪಿಎಸ್‌ಐ ಎನ್.ಡಿ.ಜಕ್ಕಣ್ಣನವರ್, ನಾಳೆಯಿಂದ ಬಸ್ ನಿಲುಗಡೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top