• Slide
    Slide
    Slide
    previous arrow
    next arrow
  • ಅಡಿಕೆ ತೋಟಗಳ ಮೇಲೆ ಕಾಡು ಹಂದಿಗಳ ದಾಳಿ

    300x250 AD

    ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಅಡಿಕೆ ತೋಟಗಳ ಮೇಲೆ ಕಾಡು ಹಂದಿಗಳು ದಾಳಿ ನಡೆಸಿ ಅಡಿಕೆ ಗಿಡಗಳನ್ನು ಹಾನಿ ಮಾಡಿದ ಘಟನೆ ಸಂಭವಿಸಿದೆ.
    ರಾತ್ರಿ ವೇಳೆ ಬರುತ್ತಿರುವ ಕಾಡು ಹಂದಿಗಳ ಹಿಂಡು ಸುಮಾರು ಮೂರ್ನಾಲ್ಕು ವರ್ಷದಿಂದ ಬೆಳೆದ ಅಡಿಕೆ ತೋಟಗಳ ಮೇಲೆ ದಾಳಿ ನಡೆಸಿ ಅಡಿಕೆ ಗಿಡಗಳನ್ನು ತಿಂದು ಕೆಡವಿ ನಾಶ ಮಾಡುತ್ತಿದೆ. ದಿವಾಕರ ಬಸವಂತರಾವ್ ಎಂಬುವರ 5 ಎಕರೆ ತೋಟದಲ್ಲಿ ಸುಮಾರು 100 ಅಡಿಕೆ ಸಸಿಗಳನ್ನು, ದಿನೇಶ ರಾವ್ ಎಂಬುವರ ತೋಟದಲ್ಲಿ 50 ಅಡಿಕೆ ಸಸಿಗಳನ್ನು ಕಾಡು ಹಂದಿಗಳು ಕಿತ್ತೊಗೆದು ನಾಶ ಮಾಡಿವೆ.
    ತಾಲೂಕಿನ ಸನವಳ್ಳಿ ಗ್ರಾಮದ ಅಡಿಕೆ, ಬಾಳೆ ತೋಟಗಳ ಮೇಲೆ ಕಾಡು ಹಂದಿಗಳು ಸತತವಾಗಿ ದಾಳಿಯಿಂದ ಅಡಿಕೆ ಬೆಳೆ ಹಾನಿಗೆಬೆಳೆಗಾರರು ಬೇಸತ್ತು ಹೋಗಿದ್ದು ಕಾಡು ಪ್ರಾಣಿಗಳ ದಾಳಿಯನ್ನು ಶಾಶ್ವತವಾಗಿ ತಪ್ಪಿಸಲು ತಪ್ಪಿಸಲು ಅರಣ್ಯ ಇಲಾಖೆಯವರು ಪರಿಹಾರ ಕಂಡುಕೊಳ್ಳಬೇಕೆಂದು ಬೆಳೆಗಾರರು ಆಗ್ರಹಿಸಿದ್ದಾರೆ.

    ಕೋಟ್…
    ಗ್ರಾಮದ ಹತ್ತಿರವೇ ಜಮೀನುಗಳಿವೆ. ಪ್ರತಿ ವರ್ಷ ಕಾಡು ಹಂದಿಗಳು ದಾಳಿ ಮಾಡುತ್ತಿವೆ. ಸರಕಾರದಿಂದ ಯಾವುದೇ ಪರಿಹಾರ ಸಿಗುತ್ತಿಲ್ಲ. ದಾಳಿ ಮಾಡಿದ ವಿಷಯ ಇಲ್ಲಿನ ಅರಣ್ಯ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ಸ್ಥಳಕ್ಕೆ ಬಂದಿಲ್ಲ. ಆದಷ್ಟು ಬೇಗ ಅರಣ್ಯ ಇಲಾಖೆಯವರು ಕಾಡು ಪ್ರಾಣಿಗಳ ದಾಳಿ ತಡೆಗಟ್ಟಲು ಕ್ರಮ ವಹಿಸಬೇಕು.
    • ರಾಜು ಗುಬ್ಬಕ್ಕನವರ, ಸನವಳ್ಳಿ ಗ್ರಾಮಸ್ಥ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top