Slide
Slide
Slide
previous arrow
next arrow

ವ್ಯಾಪಾರಾಭಿವೃದ್ದಿ- ಮಾರುಕಟ್ಟೆ ಸಂಪರ್ಕ ಕಾರ್ಯಾಗಾರ ಸಂಪನ್ನ

300x250 AD


ಭಟ್ಕಳ: ಜಲಾನಯನ ಅಭಿವೃದ್ಧಿ ಇಲಾಖೆ, ಮೀನುಗಾರಿಕಾ ಇಲಾಖೆ ಹಾಗೂ ಸ್ಕೋಡ್‌ವೆಸ್‌ ಸಂಸ್ಥೆಯ ಸಹಯೋಗದಲ್ಲಿ ಇಲ್ಲಿನ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ವ್ಯಾಪಾರಾಭಿವೃದ್ಧಿ ಮತ್ತು ಮಾರುಕಟ್ಟೆ ಸಂಪರ್ಕದ ಕುರಿತು ಒಂದು ದಿನದ ಕಾರ್ಯಾಗಾರವು ಜರುಗಿತು.
ಕಾರ್ಯಕ್ರಮವನ್ನು ಉಡುಪಿಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಕೆ. ಗಣೇಶ ಉದ್ಘಾಟಿಸಿ, ಮೀನುಗಾರಿಕಾ ರೈತ ಉತ್ಪಾದಕ ಸಂಸ್ಥೆಗಳು ಈ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ವ್ಯವಸ್ಥಿತವಾಗಿ ಸಂಘಟನಾತ್ಮಕವಾಗಿ ವ್ಯಾಪಾರ ಅಭಿವೃದ್ಧಿಯನ್ನು ಮಾಡಿಕೊಳ್ಳಬೇಕೆಂದು ನುಡಿದರು.


ಸ್ಕೋಡ್‌ವೆಸ್‌ನ ಸಂಪನ್ಮೂಲ ವ್ಯಕ್ತಿ ಡಾ.ವಿ.ಎನ್.ನಾಯ್ಕ, ಮೌಲ್ಯವರ್ಧನೆ ಮೂಲಕ ಆರ್ಥಿಕ ಪ್ರಗತಿಯ ಕುರಿತು, ಡಾ.ಪ್ರಕಾಶ ಮೇಸ್ತ ಒಣಮೀನು ಹಾಗೂ ಇತರ ಮತ್ಸ್ಯ ಉತ್ಪನ್ನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಕುರಿತು, ಡಾ.ವಿಷ್ಣುದಾಸ ಗುನಗಾ ಆಮದು- ರಫ್ತು ವ್ಯಾಪಾರ ಮತ್ತು ಮಾರುಕಟ್ಟೆ ಸಂಪರ್ಕದ ಕುರಿತು ಮಾಹಿತಿ ನೀಡದರು.
ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಮೀನುಗಾರಿಕ ಇಲಾಖೆಯ ಉಪನಿರ್ದೇಶಕಿ ಕವಿತಾ ಆರ್.ಕೆ., ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಜಿ.ಎಂ.ಶಿವಕುಮಾರ, ಕುಮಟಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ, ಸ್ಕೋಡ್‌ವೆಸ್ ಸಂಸ್ಥೆಯ ರೈತ ಉತ್ಪಾದಕಾ ಸಂಸ್ಥೆಗಳ ವಿಭಾಗದ ಯೋಜನಾ ಮುಖ್ಯಸ್ಥ ಪ್ರಶಾಂತ ನಾಯಕ, ಸಂಪನ್ಮೂಲ ವ್ಯಕ್ತಿ ನೀಲಕಂಠ ಶೇಷಗಿರಿ, ತಾಂತ್ರಿಕ ಅಧಿಕಾರಿ ಪರೇಶ ಹೆಗಡೆ, ಉ.ಕ. ಮತ್ತು ಉಡುಪಿ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ, ಫೀಲ್ಡ್ ಆಫೀಸರ್ ಮಣಿಕಂಠ ನಾಯ್ಕ, ಹಾವೇರಿ ಜಿಲ್ಲಾ ಸಂಯೋಜಕ ಜಗದೀಶ ಉಪಸ್ಥಿತರಿದ್ದರು.

300x250 AD


ಕಾರ್ಯಕ್ರಮದಲ್ಲಿ ಉತ್ತರ ಕನ್ನಡ, ಉಡುಪಿ ಹಾಗೂ ಹಾವೇರಿ ಜಿಲ್ಲೆಯ ಒಂಭತ್ತು ವಿವಿಧ ಮೀನುಗಾರಿಕಾ ಉತ್ಪಾದಕ ಕಂಪನಿಯ ಅಧ್ಯಕ್ಷರು, ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಮೀನುಗಾರಿಕಾ ಉತ್ಪಾದಕ ಕಂಪನಿಗಳ ಅಧ್ಯಕ್ಷರು, ನಿರ್ದೇಶಕರು, ಸಂಪನ್ಮೂಲ ವ್ಯಕ್ತಿಗಳು ಹಾಗೂ ಅಧಕಾರಿಗಳೊಂದಿಗೆ ಸಂವಾದ ನಡೆಸಿ ಕಂಪನಿಯ ಪ್ರಗತಿಗೆ ಪೂರಕವಾದ ಮಾಹಿತಿಯನ್ನು ಪಡೆದುಕೊಂಡರು.

Share This
300x250 AD
300x250 AD
300x250 AD
Back to top