ಕಾರವಾರ: ರೋಟರಿ ಕ್ಲಬ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ನಂದನಗದ್ದಾ ಗ್ರಾಮದ ಆಶಾ ನಾಯ್ಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಸ್ಪರ್ಧೆಯಲ್ಲಿ 200 ವಿದ್ಯಾರ್ಥಿಗಳು ಭಾಗವಹಿಸಿದ್ದು, ಬಹುಮಾನಗಳನ್ನು ಪಡೆದು ಸಂತಸ ವ್ಯಕ್ತಪಡಿಸಿದರು. ಬಹುಮಾನಗಳನ್ನು ರೋಟರಿ ಸದಸ್ಯ ಕೃಷ್ಣಾನಂದ ಬಾಂದೇಕರ ಪ್ರಾಯೋಜಿಸಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳೊಂದಿಗೆ ಬೆರೆತು ಕೇಕ್ ಕತ್ತರಿಸಿ ಮಕ್ಕಳಿಗೆ ಸಿಹಿ ವಿತರಿಸಲಾಯಿತು.
ಮುಂದೆ ರೋಟರಿ ಸದಸ್ಯರು ಕಿಂಡರ್ಲಾ ಹ್ಯಾಪಿ ಕಿಡ್ಸ್ ಶಾಲೆಗೆ ಭೇಡಿ ನೀಡಿದರು. ಇಲ್ಲಿ ಸಣ್ಣ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆಯನ್ನು ಆಯೋಜಿಸಿದ್ದು, ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಝಾನ್ಸಿರಾಣಿ ಲಕ್ಮೀಬಾಯಿ, ಒನಕೆ ಓಬವ್ವ, ಜವಾಹರಲಾಲ ನೆಹರು, ಸುಭಾಷ್‌ಚಂದ್ರ ಭೋಸ್, ರೋಬೋಟ್ ಹೀಗೆ ಅನೇಕ ವೇಷಭೂಷಣಗಳೊಂದಿಗೆ ಬಂದು ಎಲ್ಲರನ್ನು ರಂಜಿಸಿದರು. ಪುಟ್ಟ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಬಹುಮಾನಗಳನ್ನು ರೋಟರಿ ಸದಸ್ಯ ಸಾತಪ್ಪಾ ತಾಂಡೇಲ್ ಪ್ರಾಯೋಜಿಸಿದ್ದರು.
ರೋಟರಿ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಎಲ್ಲರನ್ನೂ ಶುಭ ಹಾರೈಸಿದರು. ನಿರ್ಣಾಯಕರಾಗಿ ಶೈಲೇಶ ಹಳದೀಪುರ ಹಾಗೂ ಕಾರ್ಯದರ್ಶಿ ಗುರುದತ್ತ ಬಂಟ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದದವರು ಮತ್ತು ರೋಟರಿ ಸಂಸ್ಥೆಯಿಂದ ಕೃಷ್ಣಾನಂದ ಬಾಂದೇಕರ, ಪ್ರಸನ್ನ ತೆಂಡೂಲ್ಕರ, ಅಮರನಾಥ ಶೆಟ್ಟಿ, ನಾಗರಾಜ ಜೋಶಿ, ಡಾ.ಸಮೀರಕುಮಾರ ನಾಯಕ, ಕೃಷ್ಣಾ ಕೇಳಸ್ಕರ, ಗುರು ಹೆಗಡೆ, ಮುರಳಿ ಗೋವೇಕರ, ಪಾಂಡುರಂಗ ಎಸ್.ನಾಯ್ಕ ಇದ್ದರು.
ರೋಟರಿ ಸಂಸ್ಥೆಯಿಂದ ವಿವಿಧೆಡೆ ಮಕ್ಕಳ ದಿನಾಚರಣೆ
