Slide
Slide
Slide
previous arrow
next arrow

ಪ್ರಾಥಮಿಕ ಶಾಲೆ ತೆರೆಯಲು, ಉದ್ಯಾನವನಕ್ಕೆ ಸ್ಥಳ ನಿಗದಿಪಡಿಸಲು ಒತ್ತಾಯ

300x250 AD

ಮುಂಡಗೋಡ: ಪಟ್ಟಣದ ಬಂಕಾಪುರ ರಸ್ತೆ ಮಳಗನಕೊಪ್ಪ ಸರ್ವೇ ನಂ.7ರಲ್ಲಿ ಪ್ರಾಥಮಿಕ ಶಾಲೆ ತೆರೆಯಲು ಹಾಗೂ ವೀರವನಿತೆ ಒನಕೆ ಓಬವ್ವ ಉದ್ಯಾನವನಕ್ಕೆ ಸ್ಥಳ ಮೀಸಲಿಡುವಂತೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಚಿದಾನಂದ ಹರಿಜನ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದ್ದಾರೆ.
ಪಟ್ಟಣದ ಬಂಕಾಪುರ ರಸ್ತೆಯ ಮಳಗಕೊಪ್ಪ ಪಕ್ಕ ಕೊಳಚೆ ಪ್ರದೇಶದ ಕಂಬಾರಗಟ್ಟಿ ಪ್ಲಾಟ್ ಇದ್ದು, ಇಲ್ಲಿ ಬಹುಸಂಖ್ಯೆಯಲ್ಲಿ ಬಡವರು ಇದ್ದಾರೆ. ಇಲ್ಲಿ ಪ್ರಾಥಮಿಕ ಶಾಲೆ ತೆರೆದರೆ ಮಕ್ಕಳಿಗೆ ಅನುಕೂಲವಾಗಲಿದೆ. ಇದೇ ಸರ್ವೇ ನಂ.7ರಲ್ಲಿ ಹಿರಿಯ ಜೀವಗಳಿಗಾಗಿ ಇಲ್ಲಿ ಉದ್ಯಾನವನ ನಿರ್ಮಿಸಲು ಸ್ಥಳವನ್ನು ಕಾಯ್ದಿರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top