• first
  second
  third
  Slide
  Slide
  previous arrow
  next arrow
 • ‘ನೀತಿಯಿಲ್ಲದ ಶಿಕ್ಷಣ, ಭೀತಿಯಿಲ್ಲದ ಶಾಸನ ದೇಶಕ್ಕೆ ಪ್ರಳಯಕಾರಕ’

  300x250 AD

  ಶಿರಸಿ : ನಗರದ ವೀರಭದ್ರಗಲ್ಲಿಯ ವೀರಭದ್ರ ದೇವಸ್ಥಾನದ ಸಭಾಭವನ, ಕರ್ಜಗಿ ಕಲ್ಯಾಣ ಮಂಟಪದಲ್ಲಿ ನ. 19 ರಂದು ಬೆಳಿಗ್ಗೆ 10 ಗಂಟೆಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಜಿಲ್ಲಾ ಸ್ತರೀಯ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿತ್ತು. ಶಂಖನಾದದೊಂದಿಗೆ ಆರಂಭಿಸಲಾದ ಕಾರ್ಯಕ್ರಮದಲ್ಲಿ ನಗರದ ಬಣ್ಣದಮಠದ ಶ್ರೀ ನಿರಂಜನ ಪ್ರಣವಸ್ವರೂಪಿ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ, ಧೈಯನಿಷ್ಠ ಪತ್ರಕರ್ತರ ಸಂಪಾದಕ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ ಹಾಗೂ ಶಿರಸಿಯ ಶ್ರೀವೆಂಕಟರಮಣ ದೇವಸ್ಥಾನ ಹಾಗೂ ಶ್ರೀವಿಷ್ಣು ಮಠದ ಅಧ್ಯಕ್ಷ ವಿಷ್ಣುದಾಸ ಕಾಸರಕೋಡ ಉಪಸ್ಥಿತರಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನವಾಗಿರುವ ಸಚ್ಚಿದಾನಂದ ಪರಬ್ರಹ್ಮ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಸಂದೇಶವನ್ನು ಸನಾತನ ಸಂಸ್ಥೆಯ ಸೌ, ಆರತಿ ಮೊಗೇರರವರು ಉಪಸ್ಥಿತರಿಗೆ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಕುಮಟಾ, ಭಟ್ಕಳ, ಮುಂಡಗೋಡ, ಗೋಕರ್ಣ, ಬನವಾಸಿ, ಶಿರಸಿಯ ವಿವಿಧ ಸಂಘಟನೆಗಳಿಂದ ಗಣ್ಯರು ಉಪಸ್ಥಿತರಿದ್ದರು.

  ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕ ಗುರುಪ್ರಸಾದ ಗೌಡ ಮಾತನಾಡುತ್ತ, ಈ ಅಧಿವೇಶನವನ್ನು ಧರ್ಮ ಹಾಗೂ ಸಮಾಜ ರಕ್ಷಣೆಯ ಕಾರ್ಯಕ್ಕಾಗಿ ನಿರತವಾಗಿರುವ ಸಮೂಹಕ್ಕೆ ನೇತೃತ್ವವನ್ನು ನೀಡುವ ಉದ್ದೇಶದಿಂದ ಆಯೋಜಿಸಲಾಗಿದೆ. 20 ವರ್ಷಗಳ ಹಿಂದೆ ಹಿಂದೂ ರಾಷ್ಟ್ರದ ಉಲ್ಲೇಖವೇ ಇರಲಿಲ್ಲ. ಆದರೆ ಒಂದು ಕಾಲಮಹಾತ್ಮೆಯ ಅನುಸಾರ ಹಾಗೂ ಸಂತರ ಕೃಪೆಯಿಂದ ಭಾರತವು ಹಿಂದೂರಾಷ್ಟ್ರವಾಗುವ ಹೊಸ್ತಿಲಿನಲ್ಲಿದೆ. ಈ ಹಿಂದೂ ರಾಷ್ಟ್ರ ಏಕೆ ಬೇಕು ? 1949ರಲ್ಲಿ ಭಾರತವು ಧರ್ಮದ ಅಧಾರದಲ್ಲಿ ವಿಭಜನೆಗೊಂಡಾಗ ಭಾರತದಲ್ಲಿ ಉಳಿದ ಮುಸಲ್ಮಾನರು ‘ಹಸ್ ಕೆ ಲಿಯಾ ಪಾಕಿಸ್ತಾನ, ಲಡ್ ಕೆ ಲೇಂಗೆ ಹಿಂದೂಸ್ತಾನ’ ಎಂದು ಹೇಳಿದ್ದರು. ಅವರು ಕೇವಲ ಹೇಳಿ ಸುಮ್ಮನೆ ಕುಳಿತಿಲ್ಲ, ವಿವಿಧ ಜಿಹಾದಿಗಳಿಂದ ಬಹುಸಂಖ್ಯಾತ ಹಿಂದೂಗಳ ಮೇಲೆ ಆಕ್ರಮಣ ನಡೆಯುತ್ತಿದೆ. ಒಂದು ಅಂಕಿಅಂಶದ ಅನುಸಾರ ಕೇವಲ ಮಹಾರಾಷ್ಟ್ರದಲ್ಲಿ ಇಲ್ಲಿಯವರೆಗೆ 14000 ಹಿಂದೂ ಹೆಣ್ಣುಮಕ್ಕಳು ಲವ್ ಜಿಹಾದಿಗೆ ಬಲಿಯಾಗಿರುವಾಗ ಇಡಿ ಭಾರತದಲ್ಲಿ ಈ ಜಿಹಾದಿಗೆ ಎಷ್ಟು ಜನರು ಬಲಿಯಾಗಿರಬಹುದು ? ಲ್ಯಾಂಡ್ ಜಿಹಾದಿನ ಒಂದು ಸ್ವರೂಪ 1990ರ ಕಾಶ್ಮೀರಿ ಹಿಂದೂಗಳ ಪಲಾಯನವಾಗಿದೆ. ಇಂದು ಹಿಂದೂ ಬಹುಸಂಖ್ಯಾತ ಪ್ರದೇಶಗಳಿಗೆ ಮುಸಲ್ಮಾನರು ನುಗ್ಗಿ 2-4 ಪಟ್ಟು ಹೆಚ್ಚು ಹಣ ನೀಡಿ ಜಾಗಗಳನ್ನು ಖರೀದಿಸುತ್ತಿದ್ದಾರೆ. ಇನ್ನೂ ಕೆಲವು ವರ್ಷಗಳಲ್ಲಿ ಹಿಂದೂಗಳು ಕೇರಳವನ್ನು ತೊರೆಯುವ ಪರಿಸ್ಥಿತಿ ಬರದಿರದು. ಕೇವಲ 2010ರಲ್ಲಿ ಕ್ರೈಸ್ತ ದೇಶಗಳಿಂದ ಮತಾಂತರಕ್ಕಾಗಿ ಭಾರತಕ್ಕೆ 9 ಲಕ್ಷದ 60 ಸಾವಿರ ಕೋಟಿ ರೂಪಾಯಿಗಳು ಬಂದಿವೆ, ಪ್ರತಿದಿನ 8 ಲಕ್ಷ ಜನರು ಕ್ರೈಸ್ತರಾಗಿ ಮತಾಂತರವಾಗುತ್ತಿದ್ದಾರೆ, ಈ ಮತಾಂತರದಿಂದ ಇಂದು 5-6 ರಾಜ್ಯಗಳು ಸಂಪೂರ್ಣ ಕ್ರೈಸ್ತಮಮಯವಾಗಿವೆ. ಇನ್ನೂ ಹಿಂದೂಗಳು ತಮ್ಮ ಅಸ್ತಿತ್ವದ ಉಳಿವಿಗಾಗಿ ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಪ್ರಯತ್ನಿಸಬೇಕಿದೆ ಎಂದು ಹೇಳಿದರು.

  ಶ್ರೀ ನಿರಂಜನ ಪ್ರಣವನ್ನರೂಪಿ ಶಿವಲಿಂಗ ಮಹಾಸ್ವಾಮಿಗಳು ಮಾತನಾಡುತ್ತ, ಶಿಕ್ಷಣದಿಂದ ಧರ್ಮರಕ್ಷಣೆ ಮಾಡಬೇಕಿದೆ. ಇಂದು ಮಠದ ಜಾಗದಲ್ಲಿರುವ ಶಾಲೆಗಳಲ್ಲಿ ಸರಕಾರಿ ಶಿಕ್ಷಣವನ್ನು ನೀಡಲಾಗುತ್ತಿದೆ, ಹೀಗಿರುವಾಗ ಅಲ್ಲಿ ಮಠದ ಶಿಕ್ಷಣವನ್ನು ನೀಡುವುದು ಹೇಗೆ ? ಇಲ್ಲಿ ನಮ್ಮ ಧರ್ಮದ ಬಗೆಗಿನ ಶಿಕ್ಷಣ ನೀಡುವ ಅವಕಾಶವೇ ಇಲ್ಲ. ಇಂತಹ ಪ್ರದೇಶಗಳಲ್ಲಿ ಮಠದ ಸ್ವಾಮಿಗಳು ಕೇವಲ ವಾಚ್‌ಮ್ಯಾನ್‌ನಂತೆ ಆಗಿರುತ್ತಾರೆ. ನೀತಿಯಿಲ್ಲದ ಶಿಕ್ಷಣ, ಭೀತಿಯಿಲ್ಲದ ಶಾಸನ ದೇಶಕ್ಕೆ ಪ್ರಳಯಕಾರಕವಾಗಿದೆ. ಇಂದು ಪಾಶ್ಚಾತ್ಯ ಶಿಕ್ಷಣದಿಂದ ಹಿಂದೂ ಸಮಾಜದಲ್ಲಿನ ಧರ್ಮಾಭಿಮಾನ ಕ್ಷೀಣವಾಗಿದೆ. ನಮ್ಮ ಮಕ್ಕಳ ಮೈ ಮೇಲೆ ಹಿಂದೂ ಧರ್ಮದ ಯಾವುದೇ ಚಿಹ್ನೆಗಳಿರುವುದಿಲ್ಲ. ಆದುದರಿಂದ ನಾವು ನಮ್ಮದೇ ಶಾಲೆಗಳನ್ನು ನಿರ್ಮಿಸಿ ಧಾರ್ಮಿಕ ಶಿಕ್ಷಣವನ್ನು ನೀಡಲು ಪ್ರಯತ್ನಿಸಬೇಕು ಎಂದರು.

  ಸಚ್ಚಿದಾನಂದ ಹೆಗಡೆ ಮಾತನಾಡುತ್ತ, ಸರಕಾರದ ಗೋ ಹತ್ಯಾ ನಿಷೇಧ ಕಾನೂನು ಕಾರ್ಯರೂಪಕ್ಕೆ ಬರದಿರುವುದರಿಂದ ಅಪಾರ ಗೋವಂಶದ ನಾಶವಾಗುತ್ತಿದೆ, ಹಿಂದೂ ರಾಜಕಾರಣಿಗಳು ಆತ್ಮಾವಲೋಕನ ಮಾಡಿಕೊಳ್ಳುವುದು ಅಗತ್ಯವಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ವೈಚಾರಿಕ ಬುನಾದಿಯು ಆಧ್ಯಾತ್ಮಿಕವಾಗಿದೆ, ಆಧ್ಯಾತ್ಮಿಕ ಬುನಾದಿಯ ಮೇಲೆ ರಾಷ್ಟ್ರ ಕಟ್ಟುವ ಕಾರ್ಯ ಮಾಡುವ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯ ಸ್ಥಾಪನೀಯವಾಗಿದೆ. ಕೇವಲ 30 ವರ್ಷಗಳ ಅಂತರದಲ್ಲಿ ಕೇರಳದಲ್ಲಿನ ಅನೇಕ ಹಳ್ಳಿಗಳಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದಾರೆ, ಇಲ್ಲಿನ ಹೆಚ್ಚಿನ ಊರುಗಳಲ್ಲಿ ಕೊಟ್ಟಿಗೆಯಲ್ಲಿ ಹಸು ಸಾಕುವಂತಿಲ್ಲ, ಇಲ್ಲಿ ರಸ್ತೆಯ ಮೇಲೆ ಒಂದು ಹಸುವೂ ಕಾಣಿಸುವುದಿಲ್ಲ. ಇಂದು ನಮ್ಮ ಶಿರಸಿಗೂ ಇದೇ ಸ್ಥಿತಿ ಬಂದಿದೆ.ಶಿರಸಿಯಲ್ಲಿರುವ ಬಿಡಾಡಿ ಹಸುಗಳ ಸಂಖ್ಯೆ ಕಳೆದ 3 ವರ್ಷಗಳಿಂದ ಗಣನೀಯವಾಗಿ ಕಡಿಮೆಯಾಗಿದೆ. ಹಿಂದೂ ಸಮಾಜವು ಎಚ್ಚೆತ್ತುಕೊಳ್ಳಬೇಕಿದೆ, ಎಂದು ಹೇಳಿದರು.

  ಅನಂತರ ವಿಷ್ಣುದಾಸ ಕಾಸರಕೋಡ ಮಾತನಾಡುತ್ತ, ಹಿಂದೂ ಸಮಾಜವನ್ನು ಒಗ್ಗೂಡಿಸಲು ದೇವಸ್ಥಾನಗಳಲ್ಲಿ ವಿವಿಧ ಉತ್ಸವಗಳನ್ನು ನಡೆಸಲಾಗುತ್ತಿದೆ, ಆದರೆ ಇಂದು ಯಾವುದೇ ಉತ್ಸವಗಳನ್ನು ಮಾಡುವಾಗ ಸ್ವಯಂಸೇವಕರಿಗಾಗಿ ಕಾಯಬೇಕಾಗುತ್ತಿದೆ, ಟಿ.ವಿ, ಮೊಬೈಲಿಗಳಿಂದಾಗಿ ಹಿಂದೂ ಸಮಾಜದಲ್ಲಿ ಧರ್ಮದ ಬಗೆಗಿನ ತಾತ್ಸಾರ ಹೆಚ್ಚಾಗಿದೆ. ಇಂದು ಸಮಾಜದಲ್ಲಿ ಪ್ರತಿ ಮನೆಗಳಲ್ಲಿ ಸಂಧ್ಯಾವಂದನೆಗಳು, ಭಜನೆಗಳು ನಿರಂತರವಾಗಿ ನಡೆಯುವಂತೆ ಮನೆಯ ಹಿರಿಯರು ಕಿರಿಯರಿಗೆ ಶಿಕ್ಷಣ ನೀಡಬೇಕು. ನಮ್ಮ ರಾಷ್ಟ್ರವನ್ನು ಹಿಂದೂ ರಾಷ್ಟ್ರವಾಗಿಸಿ ನಮ್ಮ ಮುಂದಿನ ಪೀಳಿಗೆಯ ನೆಮ್ಮದಿಯ ಜೀವನಕ್ಕಾಗಿ ಪ್ರಯತ್ನಿಸೋಣ, ಎಂದು ಹೇಳಿದರು.

  300x250 AD

  ಹಿಂದೂಗಳು ದೃಢವಾಗಿ ವಿರೋಧಿಸಿದ್ದರಿಂದ ಭಟ್ಕಳದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಪರವಾನಿಗೆ ಪಡೆದ `ಗೋಹತ್ಯೆಯ ದೊಡ್ಡ ಯೋಜನೆಯನ್ನು ರದ್ದುಪಡಿಸಬೇಕಾಯಿತು. ಮೂರು ದಿನಗಳ ಆಮರಣ ಉಪವಾಸದಿಂದಾಗಿ ಈ ಜಯ ಸಂದಿದೆ. ಹಿಂದುತ್ವಕ್ಕಾಗಿ ಹೋರಾಡುವುದು ಸುಲಭದ ಮಾತಲ್ಲ, ಆದರೆ ನಮ್ಮ ಹೋರಾಟಕ್ಕೆ ಛತ್ರಪತಿ ಶಿವಾಜಿ ಮಹಾರಾಜರು ಆದರ್ಶವಾದರೆ ಯಾವುದೂ ಕಷ್ಟಕರವಲ್ಲ. ಹಿಂದೆ ಹಿಂದುತ್ವಕ್ಕೆ ಹೋರಾಡಿದವರು ಅಧಿಕಾರ ಸಿಕ್ಕಾಗ ಹಿಂದುತ್ವವನ್ನು ಬಿಟ್ಟಿದ್ದಾರೆ, ನಾವು ಹಿಂದುತ್ವವನ್ನು ಪೋಷಿಸುವ ಪಕ್ಷವನ್ನೇ ಆರಿಸಬೇಕು. ಹಿಂದೂ ವಿರೋಧಿ ಘಟನೆಗಳನ್ನು ಖಂಡಿಸಬೇಕು, ಆಗಲೇ ಚರ್ಚೆಯಾಗುತ್ತದೆ. ಈ ಚರ್ಚೆಯಿಂದ ಹಿಂದೂ ವಿರೋಧಿ ನೀತಿಗಳನ್ನು ಬಯಲಿಗೆಳೆಯಬಹುದು ಎಂದು ಧಾರವಾಡ ಜಿಲ್ಲಾ ನ್ಯಾಯಾಲಯದ ನ್ಯಾಯವಾದಿ ದತ್ತಾತ್ರೇಯ ನಾಯ್ಕ ಅಭಿಪ್ರಾಯಪಟ್ಟರು.

  ಇಸ್ರೇಲಿನ ಹೋರಾಟ ಜಗತ್ತಿಗೆ ಪ್ರೇರಣಾದಾಯಕವಾಗದೆ, ಆದರೆ ಇದೇ ಇಸ್ರೇಲಿಗೆ ಸ್ವಾತಂತ್ರ ದೊರೆಯಲು ಭಾರತದ ೨೪೧ ಸೈನಿಕರು ಪ್ರಾಣ ಪಣಕ್ಕಿಟ್ಟು ಹೋರಾಡಿದ್ದರು. ಭಾರತದ ಕಣಕಣದಲ್ಲಿಯೂ ಸಂಘರ್ಷವಿದೆ, ಹೋರಾಟವಿದೆ. ಧರ್ಮರಕ್ಷಣೆಗಾಗಿ ಬಲಿದಾನ ನೀಡಿರುವ ಜೀವಗಳಿಂದಲೇ ಭಾರತವು ಪುಣ್ಯಭೂಮಿಯಾಗಿದೆ. ಜಿಹಾದನ್ನು ಮಾಡುವ ಮುಸಲ್ಮಾನನಲ್ಲಿರುವ ಶೇ.5ರಷ್ಟು ಬದ್ಧತೆಯನ್ನು ಹಿಂದೂಗಳು ಅದನ್ನು ವಿರೋಧಿಸುವಲ್ಲಿ ತೋರಿಸಿದರೆ ಭಾರತದ ಸ್ಥಿತಿಯು ಬೇರೆಯೇ ಇರುತ್ತಿತ್ತು. ಕೇವಲ ಶಾಸ್ತ್ರದಿಂದ ಮಾತ್ರ ಅಲ್ಲ, ಶಸ್ತ್ರದಿಂದ ರಾಷ್ಟ್ರವನ್ನು ಕಟ್ಟಬೇಕಿದೆ ಎಂದು ಭಜರಂಗದಳದ ಉತ್ತರಕನ್ನಡ ಜಿಲ್ಲಾ ಸಂಚಾಲಕ ವಿಠಲ ಪೈ ಅನಿಸಿಕೆಯನ್ನು ವ್ಯಕ್ತಪಡಿಸಿದರು.

  ನಮ್ಮಲ್ಲಿ ಬಹಳಷ್ಟು ಜನ ಧರ್ಮಕ್ಕಾಗಿ ಕಾರ್ಯ ಮಾಡುತ್ತಿದ್ದರೂ ಆಧ್ಯಾತ್ಮಿಕ ಸಾಧನೆಯನ್ನು ಮಾಡುತ್ತಿಲ್ಲ. ಸಾಧನೆಯನ್ನು ಮಾಡುವುದರಿಂದ ಧರ್ಮದ ಶ್ರೇಷ್ಠತೆಯ ಅರಿವಾಗುತ್ತದೆ ಇದರಿಂದ ಧರ್ಮದ ಮೇಲಿನ ಶ್ರದ್ಧೆಯು ಹೆಚ್ಚಾಗಿ ಧರ್ಮನಿಷ್ಠೆಯು ವೃದ್ಧಿಯಾಗುತ್ತದೆ, ಧರ್ಮನಿಷ್ಠೆಯುಳ್ಳ ವ್ಯಕ್ತಿಯೇ ಧರ್ಮದ ನಿಜವಾದ ಅರ್ಥದಲ್ಲಿ ಸೇವೆ ಮಾಡಬಹುದು, ಸಮರ್ಥರಾಮದಾಸರು ಹೇಳಿರುವಂತೆ ಸಾಮರ್ಥ್ಯವಿದೆ ಚಳುವಳಿಯಲ್ಲಿ ಎಲ್ಲರದ್ದು ಆದರೆ ಅದರಲ್ಲಿ ಧರ್ಮದ ಅಧಿಷ್ಠಾನವಿರಬೇಕು ಎಂದು ಸನಾತನ ಸಂಸ್ಥೆಯ ಸೌ. ಆರತಿ ಮೊಗೇರ ತಮ್ಮ ಮಾತುಗಳನ್ನಾಡಿದರು.

  Share This
  300x250 AD
  300x250 AD
  300x250 AD
  Back to top