ಶಿರಸಿ: ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ತುತಿ ನಾಗೇಶ್ ತುಂಬಾಡಿ ವೈಯಕ್ತಿಕ ವಿಭಾಗದ ಸ್ಪರ್ಧೆಯಲ್ಲಿ ‘ಸ್ಮಾರ್ಟ್ ಬಾತ್ರೂಮ್ ವಿಥ್ ಗೀಸರ್ ಸೇಫ್ಟಿ ‘ ಎಂಬ ವಿಚಾರದ ಮೇಲೆ ಮಾಡೆಲ್ ತಯಾರಿಸಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿಗೆ ಶಾಲೆಯ ವಿಜ್ಞಾನ ಶಿಕ್ಷಕಿಯರಾದ ಶ್ರೀಮತಿ ಶೃತಿ ಪವಾರ್ ಹಾಗೂ ಶ್ರೀಮತಿ ಕವಿತಾ ಭಟ್ ಮಾರ್ಗದರ್ಶನ ನೀಡಿದ್ದರು.
ಮತದಾರರ ಸಾಕ್ಷರತಾ ಕ್ಲಬ್ ನಡೆಸಿದ ತಾಲೂಕಾ ಹಂತದ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಧಾತ್ರಿ ಹೆಗಡೆ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ. ಈ ವಿದ್ಯಾರ್ಥಿನಿಗೆ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಗಣಪತಿ ಗೌಡ ಮಾರ್ಗದರ್ಶನ ನೀಡಿದ್ದರು.
ಅಂಚೆ ಇಲಾಖೆ ನಡೆಸುವ ದೀನದಯಾಳ ಸ್ಪರ್ಶ ಯೋಜನೆಯ ವಿದ್ಯಾರ್ಥಿ ವೇತನಕ್ಕಾಗಿ ನಡೆಸಿದ ಪ್ರಥಮ ಹಂತದ ಪರೀಕ್ಷೆಯಲ್ಲಿ 7ನೇ ವರ್ಗದ ಪ್ರಮಥ ಎಂ ಹೆಚ್ ಹಾಗೂ ಎಂಟನೇ ವರ್ಗದ ಶ್ರಾವಣಿ ಮಹಾಲೆ ತೇರ್ಗಡೆ ಹೊಂದಿ ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಅಂಚೆ ಇಲಾಖೆಯ ಸೀನಿಯರ್ ಫಿಲಾಟಲಿಸ್ಟ್ ಸುಬೇದಾರ್ ರಾಮು, ವಿ.ಎಸ್. ಭಟ್ ಹಾಗೂ ಪ್ರೊಫೆಸರ್ ನರಸಿಂಹಮೂರ್ತಿ ಇವರು ತರಬೇತಿ ನೀಡಿದ್ದರು ಹಾಗೂ ಶಾಲೆಯ ಫಿಲಾಟಲಿ ಕ್ಲಬ್ ನ ಸಂಯೋಜಕ ಶ್ರೀಮತಿ ಮುಕ್ತಾ ನಾಯ್ಕ ಮಾರ್ಗದರ್ಶನ ನೀಡಿದ್ದರು.
ಸಾಧನೆ ಮೆರೆದ ಎಲ್ಲ ವಿದ್ಯಾರ್ಥಿಗಳಿಗೆ, ಮಾರ್ಗದರ್ಶಿ ಶಿಕ್ಷಕರಿಗೆ, ಸಹಕರಿಸಿದ ಪಾಲಕ ವೃಂದಕ್ಕೆ ಶಾಲೆಯ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ ,ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ