ಶಿರಸಿ:ತಾಲೂಕಾ ರೈತ ಸಂಘದ ತಾಲೂಕಾ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಇದಕ್ಕೂ ಪೂರ್ವದಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಶ್ರೀ
ಸದ್ಗುರು ಅವಧೂತ ಕಲ್ಲೇಶ್ವರ ಮಹಾಸ್ವಾಮಿಗಳಿಗೆ ಪೂಜೆಯನ್ನು ನೆರವೇರಿಸಿ ಉತ್ತರಕನ್ನಡ ಜಿಲ್ಲಾ ರೈತ ಸಂಘವು ಶಿರಸಿ ತಾಲೂಕಾ ರೈತ ಸಂಘವನ್ನು ಈ ದಿನ ಅಧೀಕೃತವಾಗಿ ಶ್ರೀಗುರುಮಠ ಕ್ಯಾದಗಿಕೊಪ್ಪ (ಅಂಡಗಿ)ಯಲ್ಲಿ ರಚಿಸಿಕೊಳ್ಳಲಾಯಿತು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆರಿಯಪ್ಪ ನಾಯ್ಕ ಹೇಳಿದರು. ಇವರು ಮಾತನಾಡುತ್ತಾ ಇಂದಿನ ಸರ್ಕಾರಗಳ ರೈತ ವಿರೋಧಿ ದೋರಣೆಗಳನ್ನು ಖಂಡಿಸಿ ರೈತ ಸಂಘಟನೆ ರೈತರ ಪರವಾಗಿ ಸದಾ ಹೋರಾಟವನ್ನು ಮಾಡೋಣ ಎಂದರು. ಸರ್ಕಾರಗಳು ರೈತರ ವಾಸ್ತವ ಸಮಸ್ಯೆಗಳನ್ನು ಅರಿಯದೇ ಬೇಕಾಬಿಟ್ಟಿಯಾಗಿ ಪರಿಹಾರಗಳನ್ನು ನೀಡುವುದನ್ನು ಖಂಡಿಸಿದರು. ರೈತರ ಬೆಳೆಗಳಿಗೆ ವಿಮೆಯನ್ನು ಸರಿಯಾಗಿ ನೀಡದೇ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದರು. ಸರ್ಕಾರ ಮತ್ತು ವಿಮಾ ಕಂಪನಿಗಳು ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಮೋಸ ಮಾಡುತ್ತಿವೆ. ಹಾಗೇ ರೈತರಿಗೆ ಉಚಿತ ವಿದ್ಯುತ್ ನೀಡುತ್ತೇವೆ ಎನ್ನುತ್ತಾ ಮೀಟರ್ ಅಳವಡಿಕೆ ಮಾಡಿ ಹೆಚ್ಚುವರಿ ಹಣವನ್ನು ರೈತರಿಂದ ವಸೂಲಿ ಮಾಡುವ ಹುನ್ನಾರ ನಡೆದಿದೆ. ಇದನ್ನು ರೈತ ಸಂಘ ತೀವ್ರವಾಗಿ ಖಂಡಿಸುತ್ತದೆ ಹಾಗೂ ಮುಂದಿನ ದಿನಗಳಲ್ಲಿ ಹೋರಾಟವನ್ನು ಸಹ ಪ್ರಾರಂಭೀಸುತ್ತೇವೆ ಎಂದರು.
ಇಂದಿನ ಈ ಸಭೆಯನ್ನು ಹನುಮಂತ ಪಿ ನಾಯ್ಕ ಈಡೂರ ಇವರು ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಿ ರೈತ ಸಂಘ ಇಂದಿನ ರೈತರ ಸಮಸ್ಯೆಗಳಿಗೆ ಹೋರಾಟವನ್ನು ಮಾಡಿ ನ್ಯಾಯವನ್ನು ಒದಗಿಸಿ ಕೊಡುವಂತೆ ಹೇಳಿದರು. ಸಭೆಯಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ನಾಯ್ಕ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೀತಾ ಎನ್ ಹೆಗಡೆ , ಜಿಲ್ಲಾ ಸಮಿತಿಯ ಸದಸ್ಯ ಧೀರೇಂದ್ರ ಗೌಡ ಮತ್ತು ಸುಮಂಗಲಾ ನಾಯ್ಕ ಮರಗುಂಡಿ ಹಾಗೂ ಇನ್ನುಳಿದ ಸದಸ್ಯರು ಉಪಸ್ಥಿತರಿದ್ದರು. ಸಭೆಯಲ್ಲಿ ಪಂಚಾಯತ ಸದಸ್ಯರಾದ ಮಂಜುನಾಥ ನಾಯ್ಕ ಅಂಡಗಿ, ಮಧುಕೇಶ್ವರ ನಾಯ್ಕ ಕಾಯಿಗುಡ್ಡಿ, VSS ಸಂಘದ ಉಪಾಧ್ಯಕ್ಷರು, ಹಾಗೂ ಮಹೇಂದ್ರ ಗೌಡ, ಬಸಪ್ಪ ನಾಯ್ಕ ಅಂಡಗಿ VSS ಸಂಘದ ಸದಸ್ಯರು ಹಾಗೂ ಎಸ್.ಎಪ್.ನಾಯ್ಕ ಕಾಯಿಗುಡ್ಡೆ, ಸುಭಾಶ ನಾಯ್ಕ ಮಾಳಂಜಿ, ಸೋಮಣ್ಣ ನಾಯ್ಕ ಅಂಡಗಿ ಉಪಸ್ಥಿತರಿದ್ದರು.
ಸಭೆಯ ನಂತರ ಶಿರಸಿ ತಾಲೂಕಾ ಅಧ್ಯಕ್ಷರಾಗಿ ರಾಜೇಂದ್ರ ರಾಮ ನಾಯ್ಕ ಕಾಯಿಗುಡ್ಡೆ,ಉಪಾಧ್ಯಕ್ಷರಾಗಿ ಮಂಜುನಾಥ ವಾಮನ ಮರಾಠೆ, ಪ್ರಧಾನ ಕಾರ್ಯದರ್ಶಿಯಾಗಿ ಮಹೇಶ ಕೆ.ಎಮ್,ಖಂಡ್ರಾಜಿ, ಸಂಘಟನಾ ಅಧ್ಯಕ್ಷರಾಗಿ ಮಂಜುನಾಥ ರಾಮಚಂದ್ರ ನಾಯ್ಕ ಕಾಯಗುಡ್ಡೆ ಸಂಘಟನಾ ಕಾರ್ಯದರ್ಶಿಯಾಗಿ ರವಿ ಈರಪ್ಪ ನಾಯ್ಕ ಗುಡ್ನಾಪುರ ಇವರನ್ನು ಆಯ್ಕೆ ಮಾಡಿ ಅಧಿಕಾರವನ್ನು ನೀಡಲಾಯಿತು. ಪ್ರಾಸ್ತಾವಿಕವಾಗಿ ಮಹಾಬಲೇಶ್ವರ ನಾಯ್ಕ ಸಿದ್ಧಾಪುರ ತಾಲೂಕಾ ರೈತ ಸಂಘದ ಅಧ್ಯಕ್ಷರು ಸಂಘದ ಉದ್ದೇಶಗಳನ್ನು ಕುರಿತು ಮಾತನಾಡಿದರು. ಮಹೇಶ ಕೆ ಎಮ್,ಖಂಡ್ರಾಜಿ ವಂದನಾರ್ಪಣೆಯನ್ನು ನೆರವೇರಿಸಿದರು. ಸಭೆಯಲ್ಲಿ ರೈತ ಪ್ರತಿಜ್ಞೆಯನ್ನು S F ನಾಯ್ಕ ಕಾಯಿಗುಡ್ಡಿ ಭೋದಿಸಿದರು.