• Slide
    Slide
    Slide
    previous arrow
    next arrow
  • ಹಿಂದೂ ದೇವತೆಗಳ ಅಪಹಾಸ್ಯ ಮಾಡುವ ವೀರದಾಸನ ಕಾರ್ಯಕ್ರಮ ರದ್ದುಗೊಳಿಸುವಂತೆ ಮನವಿ

    300x250 AD

    ಬೆಂಗಳೂರು: ಯಾರೋ ಬರುತ್ತಾರೆ ಮತ್ತು ‘ಕಾಮಿಡಿ’ ಹೆಸರಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಾರೆ ಮತ್ತು ದೇವರನ್ನು ಅಪಹಾಸ್ಯ ಮಾಡುತ್ತಾರೆ. ಈ ಹಿಂದೆ ‘ಸ್ಟ್ಯಾಂಡ್ ಅಪ್ ಕಾಮಿಡಿಯನ್’ ಮುನವ್ವರ್ ಫಾರೂಕಿ ಇದ್ದ, ಈಗ ವೀರದಾಸ ಬಂದಿದ್ದಾನೆ. ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಪಡಿಸಿಕೊಳ್ಳಬೇಕೆಂದರೆ ಮುಸಲ್ಮಾನರ ಪ್ರವಾದಿ ಅಥವಾ ಕ್ರೈಸ್ತರ ದೇವದೂತರ ಕುರಿತು ‘ಕಾಮಿಡಿ’ ಮಾಡಿ ತೋರಿಸಲಿ. ‘ಸರ್ ತಾನ್ ಸೆ ಜುದಾ’ ಭಯದಿಂದ ಇಂದು ಯಾರೂ ಹಾಗೆ ಮಾಡಲು ಧೈರ್ಯ ಮಾಡಲಾರರು; ಆದರೆ ಹಿಂದೂಗಳು ಸಹಿಷ್ಣುಗಳಾಗಿರುವುದರಿಂದ ಅವರು ಕೇವಲ ವಿರೋಧಿಸುತ್ತಾರೆ ಎಂದು ಈ ದೇಶದ್ರೋಹಿಗಳಿಗೆ ತಿಳಿದಿದೆ. ಹಿಂದೂಗಳು ವಿರೋಧಿಸಿದರೆ, ಹಿಂದೂಗಳನ್ನೇ ಅಸಹಿಷ್ಣು ಎಂದು ಪರಿಗಣಿಸಲಾಗುತ್ತದೆ. ಈಗ ಅದು ಸಾಕು. ನಮ್ಮ ದೇವರನ್ನು ಅವಮಾನಿಸುವುದನ್ನು ನಾವು ಸಹಿಸುವುದಿಲ್ಲ. ಪೊಲೀಸರು ಮತ್ತು ಆಯೋಜಕರು ಈ ಕಾರ್ಯಕ್ರಮವನ್ನು ರದ್ದುಗೊಳಿಸದಿದ್ದರೆ ನಾವು ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ ಮತ್ತು ಈ ಕಾರ್ಯಕ್ರಮಕ್ಕೆ ಅವಕಾಶ ನೀಡುವುದಿಲ್ಲ. ಹಿಂದೂಸ್ಥಾನದಲ್ಲಿ ವಾಸಿಸಬೇಕಾದರೆ ಹಿಂದೂಗಳ ದೇವರುಗಳನ್ನು ಗೌರವಿಸಬೇಕು ಎಂಬ ನಿಲುವನ್ನು ಹಿಂದೂ ಜನಜಾಗೃತಿ ಸಮಿತಿ ತೆಗೆದುಕೊಂಡಿದೆ.

    ಹಿಂದೂ ಜನಜಾಗೃತಿ ಸಮಿತಿಯ ವಿರೋಧದಿಂದಾಗಿ ಕಳೆದ ವಾರ ಬೆಂಗಳೂರಿನಲ್ಲಿ ಇದೇ ವೀರ ದಾಸ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಈಗ ಅದೇ ಕಾರ್ಯಕ್ರಮ ಮುಂಬಯಿನಲ್ಲಿ ನಡೆಯುತ್ತಿದೆ. ಈ ‘ಕಾಮಿಡಿ ಶೋ’ಗೆ ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ರಾಷ್ಟ್ರಪ್ರೇಮಿ ನಾಗರಿಕರಿಂದ ತೀವ್ರ ವಿರೋಧವಾಗಿದೆ. ನವೆಂಬರ 24 ರಂದು ಮಹಾರಾಷ್ಟ್ರದ ಶಿವ (ಸಾಯನ) ಇಲ್ಲಿ ಷಣ್ಮುಖಾನಂದ ಸಭಾಂಗಣದಲ್ಲಿ ಆಯೋಜಿಸಲಾಗಿರುವ ‘ಕಾಮೆಡಿ ಶೋ’ ರದ್ದು ಪಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಹಾಗೂ ಗೃಹಸಚಿವ ದೇವೇಂದ್ರ ಫಡ್ನವಿಸ್ ಇವರಲ್ಲಿ ಆಗ್ರಹಿಸಲಾಗಿದೆ. ಅದೇ ರೀತಿ ಮುಂಬಯಿ ಪೊಲೀಸ್ ಆಯುಕ್ತರು ಮತ್ತು ಶಿವ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ನಿರೀಕ್ಷಕರಿಗೂ ದೂರು ನೀಡಲಾಗಿದೆ. ಅಲ್ಲದೆ, ಹಿಂದೂ ಜನಜಾಗೃತಿ ಸಮಿತಿಯ ಸತೀಶ್ ಸೋನಾರ್ ಅವರು ಅಜಯ್ ಬಾಲೆ ಅವರೊಂದಿಗೆ ಸಿಯಾನ್ (ಶಿವ) ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಹಿರ್ಲೇಕರ್, ಹಾಗೂ ಷಣ್ಮುಖಾನಂದ ಸಭಾಂಗಣದ ವ್ಯವಸ್ಥಾಪಕರಿಗೂ ಮನವಿ ನೀಡಿ ಕಾರ್ಯಕ್ರಮ ರದ್ದುಗೊಳಿಸುವಂತೆ ಮನವಿ ಮಾಡಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top