• Slide
  Slide
  Slide
  previous arrow
  next arrow
 • ಪದವಿ‌ ಜೊತೆ ಕೌಶಲ್ಯಾಭಿವೃದ್ಧಿಗೆ ಮಹತ್ವ ನೀಡಿ: ಡಾ.ಟಿ.ಎಸ್. ಹಳೆಮನೆ ಕಿವಿಮಾತು

  300x250 AD

  ಶಿರಸಿ: ಬದಲಾದ ಕಾಲಘಟ್ಟದಲ್ಲಿ ಪದವಿಯ ಜೊತೆಗೆ ಕೌಶಲ್ಯ ಅಭಿವೃದ್ಧಿ ಹೊಂದುವದು ಮುಖ್ಯ. ಪದವಿ ನಂತರ ಕಂಪನಿಯಲ್ಲಿ ಉದ್ಯೋಗ ಬಯಸಿದರೆ, ಆ ಕಂಪನಿ ನಿಮಗೆ ಕೌಶಲ್ಯ ಎಷ್ಟಿದೆ ಎಂಬುದನ್ನೇ ನೊಡುತ್ತದೆ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಹೇಳಿದರು.

  ಅವರು ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ಲೇಸ್ ಮೆಂಟ್ ಸೆಲ್ ಹಾಗೂ ದೇಶಪಾಂಡೆ ಸ್ಕಿಲ್ಸ್ ಹುಬ್ಬಳ್ಳಿ ಇವರುಗಳ ಸಹಯೋಗದಲ್ಲಿ ಕಾಲೇಜಿನ ಮೋಟಿನ್ಸರ್ ಸ್ಮಾರಕ ಸಭಾಭವನದಲ್ಲಿ ಆಯೋಜಿಸಿದ್ದ ಕೌಶಲ್ಯ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ ದೇಶಪಾಂಡೆ ಫೌಂಡೇಶನ್ ಕೌಶಲ್ಯ ಕಲಿಸಿ ಉದ್ಯೋಗ ಪಡೆಯಲು ಮಾರ್ಗದರ್ಶನ   ನೀಡುತ್ತದೆ.  ಇಂತಹ ಸಂಘಟನೆ ನಿಮ್ಮನ್ನ ಕೌಶಲ್ಯ ಬರಿತರನ್ನಾಗಿ ಮಾಡುತ್ತದೆ ಎಂದರು.

    ಐಕ್ಯುಎಸಿ ಸಂಚಾಲಕ ಡಾ.ಎಸ್. ಎಸ್. ಭಟ್ ಮಾತನಾಡಿ ಇಂದು ಜ್ಞಾನಕ್ಕಾಗಿ ಕಲಿಯುವವರು ಕಡಿಮೆ ಆಗಿದ್ದಾರೆ. ಅತೀ ಬೇಗನೆ ದುಡಿಯಲು ಪ್ರಾರಂಭಿಸಬೇಕು ಎಂಬ ತುಡಿತವೆ ಹೆಚ್ಚಾಗಿದೆ. ಇದಕ್ಕೆ ಈ ಕಾರ್ಯಾಗಾರ ಸಹಕಾರಿ. ಈಗಾಗಲೇ ನಮ್ಮ ಮಹಾವಿದ್ಯಾಲಯದ ಅನೇಕ ವಿದ್ಯಾರ್ಥಿಗಳು ಇದರಲ್ಲಿ ತರಬೇತಿ ಪಡೆದು  ಉದ್ಯೋಗ ಗಳಿಸಿದ್ದಾರೆ.ಸಾಂಪ್ರದಾಯಿಕ ಶಿಕ್ಷಣದೊಂದಿಗೆ ಉದ್ಯೋಗ ಆಧಾರಿತ ಶಿಕ್ಷಣವನ್ನು ನಮ್ಮ ಮಹಾವಿದ್ಯಾಲಯ ಕೊಡುತ್ತಿದೆ ಎಂದರು.

  300x250 AD

  ದೇಶಪಾಂಡೆ ಸ್ಕಿಲ್ಸ್ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕ ಶ್ರೀನಿವಾಸ್ ನಾಯ್ಕ, ಲಕ್ಷ್ಮಣ್ ಪಾಟೀಲ್,ಸುನಿಲ್ ಮತ್ತಿತರರು ಉಪಸ್ಥಿತರಿದ್ದು ಕಾಲೇಜಿನ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಪ್ರೊ ಕೆ. ಎನ್. ರೆಡ್ಡಿ ಸ್ವಾಗತಿಸಿ, ನಿರೂಪಿಸಿದರು.

  Share This
  300x250 AD
  300x250 AD
  300x250 AD
  Leaderboard Ad
  Back to top