• Slide
    Slide
    Slide
    previous arrow
    next arrow
  • ನ.17ಕ್ಕೆ ಟಿಎಂಎಸ್’ನಲ್ಲಿ ಸಹಕಾರ ಸಪ್ತಾಹ: ಸನ್ಮಾನ, ಯಕ್ಷಗಾನ ಪ್ರದರ್ಶನ

    300x250 AD

    ಶಿರಸಿ: ಶಿರಸಿ ತಾಲೂಕಾ ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘದ 69ನೇ ಸಹಕಾರ ಸಪ್ತಾಹದ ಅಂಗವಾಗಿ ಸಂಘದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮವನ್ನು  ನ. 17, ಗುರುವಾರ ಮಧ್ಯಾಹ್ನ 3.30ರಿಂದ ಟಿ.ಎಂ.ಎಸ್. ಸೇಲ್‌ ಯಾರ್ಡ್’ನಲ್ಲಿ ಆಯೋಜಿಸಲಾಗಿದೆ.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಎಂ.ಎಸ್ ಅಧ್ಯಕ್ಷ ಜಿ. ಎಂ. ಹೆಗಡೆ, ಹುಳಗೋಳ ವಹಿಸಲಿದ್ದು, ಉದ್ಘಾಟಕರಾಗಿ ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರಕುಮಾರ ಕೊಡ್ಗಿ ಆಗಮಿಸಲಿದ್ದಾರೆ.

    ಮುಖ್ಯ ಅತಿಥಿಗಳಾಗಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ  ಡಾ. ನಿರಂಜನ ವಾನಳ್ಳಿ, ಯಲ್ಲಾಪುರ ಡಿ.ಎಫ್.ಒ. ಎಸ್‌. ಜಿ. ಹೆಗಡೆ,ವಎಪಿಎಂಸಿ ಅಧ್ಯಕ್ಷ ಪ್ರಶಾಂತ ಗೌಡ‌ರ್, ಉಪನಿಬಂಧಕ  ಆರ್. ಮಂಜುನಾಥ ಉಪಸ್ಥಿತರಿರಲಿದ್ದಾರೆ.

    ಈ‌ ಸಂದರ್ಭದಲ್ಲಿ ಸಂಘದ  ಸದಸ್ಯರಾದ ಶ್ರೀಪತಿ ಗಜಾನನ ಭಟ್, ಕುಳವೆ, ಕೇಶವ ರಾಮಕೃಷ್ಣ ಹೆಗಡೆ, ಅಮ್ಮಚ್ಚಿ, ಮಂಜುನಾಥ ವೆಂಕಟ್ರಮಣ ಭಟ್, ಆಲ್ಮನೆ, ಮಂಜುನಾಥ ಗಣಪತಿ ಭಟ್, ಮೊಸರಗುಳಿ, ಗಣಪತಿ ಸುಬ್ರಾಯ ಹೆಗಡೆ, ಕಂಚೀಕೈ-ಕೋಡ್ಸರ, ಕೃಷ್ಣ ಸುಬ್ರಾಯ ಹೆಗಡೆ, ಕಲ್ಮನೆ, ಕೃಷ್ಣ ಗಣಪತಿ ಹೆಗಡೆ, ಮುಳಕಿನಕೊಪ್ಪ, ಗುರುಪಾದ ವಿಶ್ವೇಶ್ವರ ಹೆಗಡೆ, ಅಮಚಿಮನೆ, ಕೃಷ್ಣ ಸುಬ್ರಾಯ ಜೋಶಿ, ಕರಿಗುಂಡಿ, ಪ್ರಭಾಕರ ಸುಬ್ರಾಯ ಹೆಗಡೆ, ಅಜ್ಜಿಬಳ, ಸದಾಶಿವ ಸುಬ್ರಾಯ ಹೆಗಡೆ, ಶಿಂಗ್ನಳ್ಳಿ, ಸುಬ್ರಹ್ಮಣ್ಯ ಗಣಪತಿ ಹೆಗಡೆ, ಶಿರನಾಲಾ, ಕೃಷ್ಣಮೂರ್ತಿ ನಾಗಪ್ಪ ಹೆಗಡೆ, ಹರೀಶಿ,ಅನಂತ ಮಹಾಬಲೇಶ್ವರ ಹೆಗಡೆ, ಮೂಲೆದೇವಿತೋಟ,ನಾಗೇಶ ರಾಮಚಂದ್ರ ಹೆಗಡೆ, ಎಮ್ಮೆನಹೊಂಡ, ಅನಂತ ನಾಗಪ್ಪ ಹೆಗಡೆ, ಉಚಗೇರಿ ಇವರುಗಳಿಗೆ ಸನ್ಮಾನ ನಡೆಯಲಿದ್ದು, ಖರೀದಿದಾರರಾದ ಮಧುಕರ ನರಸಿಂಹ ಹೆಗಡೆ, ಸಾಗರ (M.N.H.S.),ಝುಬೇರ್ ಶಬ್ಬರ್ ಸಾಬ್, ಹೇರೂರ (ZUBER) ಇವರು ಸನ್ಮಾನಿಸಲ್ಪಡಲಿದ್ದಾರೆ.

    300x250 AD

    ಸನ್ಮಾನ ಕಾರ್ಯಕ್ರಮದ ನಂತರ ಯಕ್ಷರಂಗದ ಪ್ರಸಿದ್ಧ ಕಲಾವಿದರುಗಳಿಂದ ‘ಚಕ್ರ ಚಂಡಿಕೆ’ ಯಕ್ಷಗಾನ‌ ಪ್ರದರ್ಶನ‌ ನಡೆಯಲಿದ್ದು, ಹಿಮ್ಮೇಳದಲ್ಲಿ ರಾಘವೆಂದ್ರ ಆಚಾರ್ಯ, ಜನ್ಸಾಲೆ,ರಾಮಕೃಷ್ಣ ಹೆಗಡೆ, ಹಿಲ್ಲೂರು, ಸುನಿಲ ಭಂಡಾರಿ, ಕಡತೋಕ,ಪ್ರಸನ್ನ ಭಟ್ಟ, ಹೆಗ್ಗಾರ ರಂಜಿಸಲಿದ್ದು ಮುಮ್ಮೇಳದಲ್ಲಿ ಸುಬ್ರಹ್ಮಣ್ಯ ಹೆಗಡೆ, ಚಿಟ್ಟಾಣಿ,ಗಣಪತಿ ಹೆಗಡೆ ತೋಟಿಮನೆ, ಶಂಕರ ಹೆಗಡೆ, ನಿಲ್ಕೋಡ, ಅಶೋಕ ಭಟ್ಟ, ಸಿದ್ದಾಪುರ, ಉದಯ ಹೆಗಡೆ, ಕಡಬಾಳ, ಶ್ರೀಧರ ಭಟ್ಟ, ಕಾಸರಕೋಡ, ನಾಗರಾಜ ಭಟ್‌, ಕುಂಕಿಪಾಲ,‌ ಸಂತೋಷ ಹೆಗಡೆ, ಹುಣಸೇಮಕ್ಕಿ ಕಾಣಿಸಿಕೊಳ್ಳಲಿದ್ದಾರೆ.

    ಕಾರ್ಯಕ್ರಮಕ್ಕೆ ‌ಸರ್ವ ಸದಸ್ಯರು,ಸದಸ್ಯೇತರರು,ಕಲಾಸಕ್ತರು ಆಗಮಿಸಲು‌‌ ಪ್ರಕಟಣೆಯಲ್ಲಿ  ಕೋರಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top