• Slide
    Slide
    Slide
    previous arrow
    next arrow
  • ಎಂ.ಬಿ. ಪಠಾಣಿ ಸೇವಾ ನಿವೃತ್ತಿ: ಹೃದಯಸ್ಪರ್ಶಿ ಬೀಳ್ಕೊಡುಗೆ

    300x250 AD

    ಶಿರಸಿ: ತಾಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಸೇವೆ ಆರಂಭಿಸಿ 2019ರಲ್ಲಿಯೇ ನಿವೃತ್ತಿ ಹೊಂದಿದ್ದರೂ ಸಹ ಸಂಸ್ಥೆಯ ಕೋರಿಕೆಯ ಮೇರೆಗೆ ನವಂಬರ್ 14, 2022ರವರೆಗೆ ಸೇವೆಯನ್ನು ಮುಂದುವರಿಸಿದ್ದ ಉತ್ತಮ ಸೇವಾ ವೃತ್ತಿ ಕೌಶಲ್ಯ ಹೊಂದಿದ ಎಂ.ಬಿ. ಪಠಾಣಿ ಅವರಿಗೆ ಸಂಸ್ಥೆ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವು ನವೆಂಬರ್ 14ರಂದು ನಡೆಯಿತು.

     ಸಂಸ್ಥೆಯ ಗೌರವಾಧ್ಯಕ್ಷ, ಮಹಾ ಪೋಷಕರೂ ಆದ ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಶುಭಾಶೀರ್ವಾದದೊಂದಿಗೆ ಸೇವಾ ನಿವೃತ್ತಿ ಹೊಂದಿದ ಪಠಾಣಿಯವರನ್ನು ಸಂಸ್ಥೆಯ ಆಡಳಿತ ವರ್ಗ, ಪ್ರಾಚಾರ್ಯರು, ಹಿರಿಯ ಶಿಕ್ಷಕರು, ಸಿಬ್ಬಂದಿ ವರ್ಗದವರು ಸನ್ಮಾನ ಪತ್ರ ಹಾಗೂ ಕಿರು ಕಾಣಿಕೆಯನ್ನು ನೀಡುವುದರೊಂದಿಗೆ ಹೃದಯ ಪೂರ್ವಕವಾಗಿ ಸನ್ಮಾನಿಸಿ ಬೀಳ್ಕೊಟ್ಟರು. ಸಂಸ್ಥೆಯ ಕಾರ್ಯಾಧ್ಯಕ್ಷ ಎಂ.ಎನ್. ಹೆಗಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಾಂತರಾಮ್ ಹೆಗಡೆ ಅನಿಸಿಕೆ ವ್ಯಕ್ತಪಡಿಸಿದರೆ, ಸಂಸ್ಥೆಯ ಸದಸ್ಯರಾದ ಎನ್.ವಿ.ಹೆಗಡೆ, ಜಿ.ಟಿ.ಭಟ್ ಪ್ರಾಚಾರ್ಯ ಡಿ.ಆರ್. ಹೆಗಡೆ ಹಿರಿಯ ಶಿಕ್ಷಕ ಜಿ.ಎ. ಬಂಟ ಮತ್ತು ಶಿಕ್ಷಕ ವರ್ಗದವರು ಪಠಾಣಿಯವರ ಸೇವೆಯನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರುಗಳಾದ ವಿ.ವಿ. ಹೆಗಡೆ ಜಿ.ಎನ್. ಭಟ್ಟ ಸತೀಶ್ ಭಟ್ ಉಪಸ್ಥಿತರಿದ್ದು ಶುಭ ಕೋರಿದರೆ, ಶಿಕ್ಷಕೇತರ ಸಿಬ್ಬಂದಿಗಳು, ಹಿತೈಷಿಗಳು ಕಿರು ಕಾಣಿಕೆ ನೀಡಿ ಗೌರವಿಸಿದರು. ಆರಂಭದಲ್ಲಿ ಪ್ರಾಚಾರ್ಯರಾದ ಡಿ.ಆರ್. ಹೆಗಡೆ ಸ್ವಾಗತಿಸಿದರೆ ಕೊನೆಯಲ್ಲಿ ಜಿ.ಯು. ಹೆಗಡೆ ಸರ್ವರನ್ನು ವಂದಿಸಿದರು.ಕಾರ್ಯಕ್ರಮದ ನಿರ್ವಹಣೆಯನ್ನು ಪ್ರಕಾಶ್ ಎಂ. ಹಿರೇಬಾಸೂರು ನಡೆಸಿಕೊಟ್ಟರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top