Slide
Slide
Slide
previous arrow
next arrow

ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಾಚಿದ ಲಯನ್ಸ್ ಶಾಲಾ ಜನಪದ ನೃತ್ಯ

300x250 AD

ಶಿರಸಿ: ರೂಟ್ಸ್ ಟು ರೂಟ್ಸ್ ವರ‍್ಸಾ ಸಂಸ್ಥೆಯ ಮೂಲಕ ರಾಷ್ಟ್ರಮಟ್ಟದ ಆನ್ ಲೈನ್ ಸಾಂಸ್ಕೃತಿಕ ಕಲಾ ಪ್ರಕಾರಗಳ ಅಂತರಶಾಲಾ ಪ್ರತಿಭಾ ಸ್ಪರ್ಧೆಯಲ್ಲಿ ನಗರದ ಲಯನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಶ್ರೇಯಾ ಬಡಿಗೇರ, ವಾಸವಿ ಜೋಶಿ, ತೈಬಾ ತಬಸ್ಸುಮ್, ಅನನ್ಯಾ ಹೆಗಡೆ, ಪ್ರಾರ್ಥನಾ ಪ್ರಸನ್ನ ಹೆಗಡೆ, ಸ್ಪೂರ್ತಿ ಗುನಗ ಭಾಗವಹಿಸಿದ್ದು, ಜನಪದ ನೃತ್ಯ ವಿಭಾಗದಲ್ಲಿ ರಾಷ್ಟ್ರ ಮಟ್ಟದಲ್ಲಿ Exemplory Award ಎನ್ನುವ ಪ್ರಶಂಸೆಯೊಂದಿಗೆ ವಿಜೇತರಾಗಿರುತ್ತಾರೆ. ಈ ನೃತ್ಯಕ್ಕೆ ಸಿದ್ಧಿ ಜನಾಂಗದ ದೀಪಾ ಸಿದ್ದಿರವರ ತರಬೇತಿ, ಸಹಶಿಕ್ಷಕಿಯರಾದ ಶಿಕ್ಷಕಿ ಶ್ರೀಮತಿ ಸುಜಾತ ವಝೆ, ಶ್ರೀಮತಿ ಸೀತಾ ವಿ. ಭಟ್, ಶ್ರೀಮತಿ ದೀಪಾ ಶಶಾಂಕ ಹೆಗಡೆ ಇವರ ಮಾರ್ಗದರ್ಶನ , ಅಯನಾ ವಾಯ್, ದಿಶಾ ಹೆಗಡೆ, ಸ್ಪೂರ್ತಿ ಹೆಗಡೆ, ಸಹನಾ ಶಟ್ಟಿ, ಸುವಿಧಾ ಹೆಗಡೆ, ಆದಿತ್ಯ ಜೋಷಿ ವಿದ್ಯಾರ್ಥಿಗಳ ಹಿನ್ನೆಲೆ ಗಾಯನ, ವಾದನ ಪುಷ್ಟಿ ನೀಡಿತ್ತು. ಸಾಧಕ ತಂಡ ಹಾಗೂ ರೂಟ್ಸ್ ಟು ರೂಟ್ಸ್ ವರ‍್ಸಾ, ಶಿರಸಿ ಲಯನ್ಸ್ ಶಾಲೆಯ ಸಂಯೋಜಕ ಶಿಕ್ಷಕಿ ಶ್ರೀಮತಿ ಮುಕ್ತಾ ನಾಯ್ಕ ಹಾಗೂ ಸಹಕರಿಸಿದ ಪಾಲಕರನ್ನು ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿರಸಿ ಲಯನ್ಸ ಕ್ಲಬ್ ಬಳಗ, ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಶಶಾಂಕ ಹೆಗಡೆ ಹಾಗೂ ಶಿಕ್ಷಕ ಶಿಕ್ಷಕೇತರ ಬಳಗ, ಆಡಳಿತ ಮಂಡಳಿಯವರು ಅಭಿನಂದಿಸಿದರು.

300x250 AD
Share This
300x250 AD
300x250 AD
300x250 AD
Back to top