• Slide
    Slide
    Slide
    previous arrow
    next arrow
  • ಹೆಗ್ಗರಣಿ ಸೇವಾ ಸಹಕಾರಿ ಸಂಘದಲ್ಲಿ ವೈಶಿಷ್ಟಪೂರ್ಣ ಸಹಕಾರಿ ಸಪ್ತಾಹ ಕಾರ್ಯಕ್ರಮ

    300x250 AD

    ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ.ನ.14ರಂದು 69ನೇ ಸಹಕಾರಿ ಸಪ್ತಾಹವನ್ನು ವೈಶಿಷ್ಟಪೂರ್ಣವಾಗಿ ಆಚರಿಸಲಾಯಿತು. ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ಕುಮಾರಿ ನಿತ್ಯಾ ಹೆಗಡೆ ಹಳೇಹಳ್ಳ ಹಾಗೂ ಕುಮಾರಿ ದಿಶಾ ಹೆಗಡೆ ಬಿದ್ಮನೆ ಇವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಕಾರ್ಯಕ್ರಮದಲ್ಲಿ ಸಂಘದಲ್ಲಿ ಬಹಳ ವರ್ಷಗಳಿಂದ ಉತ್ತಮವಾಗಿ ವ್ಯವಹರಿಸುತ್ತಿರುವ ಹಿರಿಯ ಸದಸ್ಯ ಮಂಜುನಾಥ ಗ ಹೆಗಡೆ ಕೃಷ್ಣಾಪುರ(ಮುಂಗ್ರಾಣಿ ),ಅಣ್ಣು ಕಟ್ಯಾ ಗೌಡ ಕುಳಿಕಟ್ಟು, ರಾಮ ಗ ಗೌಡ ಹುಕ್ಕಳಿ, ಶಂಕರನಾರಾಯಣ ಗ ಹೆಗಡೆ ಗುಂಟಗಾರ, ರಾಮಚಂದ್ರ ಮಾ ಹೆಗಡೆ ಹಳೇಹಳ್ಳ, ಕೆರಿಯ ಕುಪ್ಪ ಗೌಡ ಹೊಸ್ತೋಟ, ಹುಲಿಯಾ ತಿಮ್ಮ ಗೌಡ ಕುಳ್ಳಿ, ತೂಕ ಲಿಂಗ ಗೌಡ ತಲಗಾರ,ಶ್ರೀಮತಿ ಲಲಿತಾ ಶಂಕರ ಶೇಟ್ ಓಣಿಗಡ್ಡೆ ಇವರಿಗೆ ಸನ್ಮಾನಿಸಲಾಯಿತು,
    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಎಂ.ಎಲ್‌. ಭಟ್ಟ, ಉಂಚಳ್ಳಿ ಮಾತನಾಡಿ ಸರ್ವರೂ ಪಾಲ್ಗೊಳ್ಳಲು ಅವಕಾಶವಾಗುವಂತೆ ವಿನೂತನ ರೀತಿಯಲ್ಲಿ ಈ ಸಪ್ತಾಹವನ್ನು ಸಂಯೋಜಿಸಿದ್ದೇವೆ, ತಮ್ಮೆಲ್ಲರ ಪ್ರತಿಕ್ರಿಯೆ ಬಹಳ ಉತ್ತಮವಾಗಿದ್ದು, ಸರ್ವರಿಗೂ ಈ ಕಾರ್ಯಕ್ರಮ ಮೆಚ್ಚಿಗೆ ಆಗಿರುವುದು ಕಂಡುಬರುತ್ತದೆ ಎಂದರು. ಸಹಕಾರ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದರ ಜೊತೆಗೆ ಸದಸ್ಯರನ್ನು ಸ್ವಾವಲಂಬಿಗಳನ್ನಾಗಿಸುತ್ತ ಕಾರ್ಯನಿರ್ವಹಿಸಬೇಕು ಇದಕ್ಕೆ ಪ್ರಾಮಾಣಿಕತನವು ಬಹಳ ಮುಖ್ಯ ಪಾತ್ರವಹಿಸುತ್ತದೆ, ಎಂದರು.

    ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ಕಳೆದ ಸಾಲಿನಲ್ಲಿ ಸಹಕಾರಿ ರತ್ನ ಪ್ರಶಸ್ತಿಯನ್ನು ಪಡೆದ ಟಿ.ಎಮ್.ಎಸ್ ಸಿದ್ದಾಪುರ ಅಧ್ಯಕ್ಷ ಆರ್.ಎಮ್. ಹೆಗಡೆ ಬಾಳೇಸರ ಹಾಗೂ ಕದಂಬ ಮಾರ್ಕೆಟಿಂಗ್ ಶಿರಸಿ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಇವರನ್ನು ಗೌರವಪೂರ್ವವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹಾಗೂ ಮತ್ತೋರ್ವ ಅತಿಥಿಗಳಾಗಿ ಮಹಾಬಲೇಶ್ವರ ವೆಂ ಹೆಗಡೆ ಕಂಚಿಕೈ ಇವರು ಉಪಸ್ಥಿತರಿದ್ದರು.

    ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಎಮ್.ಎಸ್.ಸಿ.ಬಯೋಕೆಮಿಸ್ಟ್ರಿ ವಿಭಾಗದಲ್ಲಿ 8 ಬಂಗಾರದ ಪದಕ ಪಡೆದು ಸಾಧನೆ ಮಾಡಿದ ಕುಮಾರಿ ಡಿ.ವಿ.ಅನುಜ್ಞಾ ಉಂಚಳ್ಳಿ (ಧರೆಮನೆ) ಇವರನ್ನು ಪುರಸ್ಕರಿಸಿ ಅಭಿನಂದಿಸಲಾಯಿತು.ಕಳೆದ 2021-22 ನೇ ಸಾಲಿನಲ್ಲಿ ಜರುಗಿದ ಎಸ್‌.ಎಸ್.ಎಸಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆ ಹೆಗ್ಗರಣಿಯಲ್ಲಿ . ಉತ್ತಮ ಅಂಕಗಳಿಸುವುದರೊಂದಿಗೆ ಶ್ರೀರಾಮ ಸ. ಹೆಗಡೆ ಮಠದಗದ್ದೆ ಪ್ರಥಮ, ಅಶ್ವಿನಿ ಗ ಹೆಗಡೆ ಹಿರೇಹದ್ದ ದ್ವಿತೀಯ, ತೇಜಸ್ವಿ ಗ ಹೆಗಡೆ ನೀರಗಾನ ತೃತೀಯ ಸ್ಥಾನ ಪಡೆದಿದ್ದು,ಹಾಗೆಯೇ ಸ್ಥಳೀಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವಿದ್ಯಾ ಎಮ್ ಗೌಡ ಹುಕ್ಕಳಿ ಪ್ರಥಮ, ದಿವ್ಯಾ ಎಸ್.ಗೌಡ ಹುಕ್ಕಳಿ-ದ್ವಿತೀಯ, ವಾಣಿಜ್ಯ ವಿಭಾಗದಲ್ಲಿ ಸೀಮಾ ಶ್ರೀಪತಿ, ಗೌಡ, ವಾಜಗಾರ-ಪ್ರಥಮ, ಸೌಖ್ಯ ಆ‌ರ್ ಕುರ್ಡೇಕರ್ ಹೆಗ್ಗರಣಿ ದ್ವಿತೀಯ ಸ್ಥಾನ ಪಡೆದಿದ್ದು, ಇವರೆಲ್ಲರಿಗೂ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು, ಸಭಿಕರಿಗಾಗಿ ನಡೆದ ಥಟ್ ಅಂತ ಹೇಳಿ-ಸಹಕಾರಿ ರಸ ಪ್ರಶ್ನೆ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸದಸ್ಯರಿಗೆ ಗುರಿಕಾಯಿ ಸ್ಪರ್ಧೆ ಹಾಗೂ ಆರತಿ ತಾಟಿನ ಸ್ಪರ್ಧೆ ಏರ್ಪಡಿಸಲಾಗಿತ್ತು. ಗುರಿಕಾಯಿ ಸ್ಪರ್ಧೆಯಲ್ಲಿ ಗಣಪತಿ ಮ ಗೌಡ ನಡಕರಮನೆ-ಪ್ರಥಮ, ಗಣಪ ಈ ಗೌಡ ಕುಳಿಕಟ್ಟು- ದ್ವಿತೀಯ, ಲಕ್ಷ್ಮಣ ಈ ಗೌಡ ಕುಳಿಕಟ್ಟು- ತೃತೀಯ ಹಾಗೂ ಆರತಿ ತಾಟಿನ ಸ್ಪರ್ಧೆಯಲ್ಲಿ ಕುಮಾರಿ ದೇವಯಾನಿ ರ ಹಗಡೆ ಹಿರೇಹದ್ದ ಪ್ರಥಮ,ರಂಜನಾ ನಾ ಭಟ್ಟ ಉಂಚಳ್ಳಿ ದ್ವಿತೀಯ, ಅನುಜ್ಞಾ ಭಟ್ಟ ಉಂಚಳ್ಳಿ (ಧರೆಮನೆ) ತೃತೀಯ ಸ್ಥಾನ ಪಡೆದಿದ್ದು, ಇವರೆಲ್ಲರಿಗೂ ಬಹುಮಾನ ನೀಡಿ ಅಭಿನಂದಿಸಲಾಯಿತು.

    300x250 AD

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಚೌಡು ರಾ ಗೌಡ ಬಿಳೇಕಲ್ಮನೆ ಹಾಗೂ ಸದಸ್ಯರಾದ ಸುಬ್ರಾಯ ಹೆಗಡೆ ಸಾಯಿಮನೆ, ಮಾಬ್ಲೇಶ್ವರ ಪಿ ಹೆಗಡೆ ವಟರಜಡ್ಡಿ , ಶ್ರೀಪತಿ ಶಂ ಹೆಗಡೆ ಗೋಳಿಕೈ, ನರಸಿಂಹ ಬೆಂ ಹೆಗಡೆ ಹಿರೇಕೈ ,ಗಣಪತಿ ರಾ ಹೆಗಡೆ ಹಿರೇಹದ್ದ, ಲಕ್ಷ್ಮಣ ಈ ಗೌಡ ಕುಳಿಕಟ್ಟು, ಚಂದ್ರಶೇಖರ ಗೌಡ ದಿಗೋಡಿ, ಮಂಜ ಹಣಪ ಹರಿಜನ ಹುಲ್ಲುಂಡೆ ಉಪಸ್ಥಿತರಿದ್ದರು. ಸಂಘದ ನಿರ್ದೇಶಕ ಎಮ್. ಎಸ್.ಹೆಗಡೆ ವಟರಜಡ್ಡಿ ಸ್ವಾಗತಿಸಿದರು ಹಾಗೂ ಶ್ರೀಪತಿ ಕಂ ಹೆಗಡೆ ಗೋಳಿಕ್ಕೆ ವಂದಿಸಿದರು. ಮುಖ್ಯಕಾರ್ಯನಿರ್ವಾಹಕ ಚಿದಂಬರ, ಎಂ. ನಾಯ್ಕ ಹಾಗೂ ಎಲ್ಲಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಸಹಕರಿಸಿದರು

    Share This
    300x250 AD
    300x250 AD
    300x250 AD
    Leaderboard Ad
    Back to top