ಯಲ್ಲಾಪುರ: ಇಲ್ಲಿಯ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಾಗೂ ವಿಶ್ವದರ್ಶನ ಕನ್ನಡ ಸಂಘಗಳ ಸಹಯೋಗದಲ್ಲಿ ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನ.19ರಂದು ಚಿಂತನಗೋಷ್ಟಿ ಮತ್ತು ಕವಿಗೋಷ್ಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10.30ಕ್ಕೆ ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಮತ್ತು ಅ.ಭಾ.ಸಾ.ಪ ಜಿಲ್ಲಾ ಸಂಯೋಜಕ ಗಣಪತಿ ಬೋಳ್ಗುಡ್ಡೆ ಉಪಸ್ಥಿತರಿರುವರು. ವ್ಯಕ್ತಿತ್ವ ವಿಕಸನ ಮತ್ತು ಕೈ ಬರಹ ವಿಷಯದ ಕುರಿತಂತೆ ನಡೆಯುವ ಚಿಂತನಗೋಷ್ಟಿಯಲ್ಲಿ ಕಾರವಾರದ ಶಿಕ್ಷಣ ತಜ್ಞ್ಷ ಜಿ.ಕೆ.ವೆಂಕಟೇಶಮೂರ್ತಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಮಧ್ಯಾಹ್ನ ನಡೆಯುವ ಕವಿಗೋಷ್ಟಿಯಲ್ಲಿ ಆಯ್ದ ವಿದ್ಯಾರ್ಥಿಗಳು ಹಾಗೂ ತಾಲೂಕಿನ ಕವಿಗಳು ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ವನರಾಗ ಶರ್ಮಾ ವಹಿಸುವರು. ಅ.ಭಾ.ಸಾ.ಪ ಜಿಲ್ಲಾ ಉಪಾಧ್ಯಕ್ಷ ಶಂಕರ ಭಟ್ಟ ತಾರೀಮಕ್ಕಿ ಉಪಸ್ಥಿತರಿರುವರೆಂದು ಪ್ರಕಟಣೆ ತಿಳಿಸಿದೆ.
ನ.19ಕ್ಕೆ ವಿಶ್ವದರ್ಶನದಲ್ಲಿ ಚಿಂತನಗೋಷ್ಟಿ
