ಶಿರಸಿ: 2022-23 ರ ಸಾಲಿನ ಶಿರಸಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾ ಕಾರಂಜಿಯು ನ ರಂದು ತಾಲೂಕಿನ ಇಸಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಗರದ ಲಯನ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು 9 ಸ್ಪರ್ಧೆಗಳಲ್ಲಿ ಭಾಗವಹಿಸಿ 7 ಸ್ಪರ್ಧೆಗಳಲ್ಲಿ ವಿಜೇತರಾಗಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕುಮಾರಿ ಸ್ಪೂರ್ತಿ ಹೆಗಡೆ ಸಂಸ್ಕೃತ ಧಾರ್ಮಿಕ ಪಠಣದಲ್ಲಿ ಪ್ರಥಮ ಸ್ಥಾನ, ಕುಮಾರಿ ಶ್ರೇಯಾ ಬಡಿಗೇರ್ ಮತ್ತು ಸಂಗಡಿಗರು ಜಾನಪದ ನೃತ್ಯದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕುಮಾರಿ ಭುವನಾ ಹೆಗಡೆ ಭರತನಾಟ್ಯ ದ್ವಿತೀಯ ಸ್ಥಾನ, ಕು.ಶೃದ್ಧಾ ವಿಠ್ಠಲ್ಕರ್ ಹಾಸ್ಯದಲ್ಲಿ ದ್ವಿತೀಯ ಸ್ಥಾನ, ಕು. ಅಯನಾ ವಾಯ್ ಗಜಲ್’ನಲ್ಲಿ ದ್ವಿತೀಯ ಸ್ಥಾನ, ಕು.ವಿನೀತ್ ಭಟ್, ಕು.ಸ್ತುತಿ ತುಂಬಾಡಿ ಕ್ವಿಜ್’ನಲ್ಲಿ ದ್ವಿತೀಯ ಸ್ಥಾನ, ಕು.ದಿಶಾ ಹೆಗಡೆ ಸಂಸ್ಕೃತ ಭಾಷಣದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಎಲ್ಲಾ ವಿಜೇತ ವಿದ್ಯಾರ್ಥಿಗಳಿಗೆ,ಮಾರ್ಗದರ್ಶಿ ಶಿಕ್ಷಕರಿಗೆ, ತರಬೇತಿ ನೀಡಿದ ತರಬೆತುದಾರರಿಗೆ ಹಾಗೂ ಸಹಕರಿಸಿದ ಪಾಲಕರಿಗೆ ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ, ಶಿರಸಿ ಲಯನ್ಸ ಕ್ಲಬ್ ಬಳಗ, ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.