• first
  second
  third
  Slide
  Slide
  previous arrow
  next arrow
 • ಪಡಿತರ ವಿತರಣೆ ಅಂಗಡಿ ಪ್ರಾರಂಭಿಸಲು ತಹಶೀಲ್ದಾರರಿಗೆ ಶಾಸಕಿ ಸೂಚನೆ

  300x250 AD

  ರವಾರ: ನಗರದ ನಂದನಗದ್ದಾ ಸಣ್ಣಮಸೀದಿ ಹತ್ತಿರ ಚಿಪ್ಕರವಾಡ, ಜೋಶಿವಾಡ ಹಾಗೂ ಗಾಬಿತವಾಡದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪಡಿತರ ವಿತರಣೆ ಅಂಗಡಿಯನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳುವ ಕುರಿತು ತಹಶೀಲ್ದಾರರಿಗೆ ಶಾಸಕಿ ರೂಪಾಲಿ ಎಸ್. ನಾಯ್ಕ ಸೂಚಿಸಿದರು.
  ಸೋಮವಾರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ನಡೆಸಿ ಅವರು ಮಾತನಾಡಿದರು. ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲ್ಲೂಕಿನ ಅಮದಳ್ಳಿಯ ಅಚ್ಚಕನ್ಯೆಯ ಬಳಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಚರಂಡಿ ನಿರ್ಮಾಣದ ಸಮಸ್ಯೆ ಇರುವುದರಿಂದ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯರ್ಥಪಡಿಸಲಾಗುವುದು ಎಂದು ಭರವಸೆ ನೀಡಿದರು.
  ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಯಿಂದ ಅರ್ಗಾದ ಪುರಾತನ ಕೆರೆಯು ಮುಚ್ಚಿರುತ್ತಾರೆ. ಈ ಕೆರೆ ಅವಶ್ಯಕವಾಗಿದೆ ಎಂದು ಸಾರ್ವಜನಿಕರು ನೀಡಿದ ಕಾರಣ ಸಮಸ್ಯೆಯನ್ನು ಪರಿಶೀಲಿಸಿ ಇತ್ಯರ್ಥ ಪಡಿಸುವುದಾಗಿ ಹೇಳಿದರು. ಅಲ್ಲದೇ, ಹಣಕೋಣ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ವಾರ್ಡ್ ಸಭೆ, ಗ್ರಾಮ ಸಭೆಗಳ ಮಾಹಿತಿಯನ್ನು ಪಡೆದುಕೊಳ್ಳುವಂತೆ ತಹಶೀಲ್ದಾರರಿಗೆ ಸೂಚಿಸಿದರು.
  ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಎಂಜೀನಿಯರ್, ಕಂದಾಯ ಇಲಾಖೆ ಸಿಬ್ಬಂದಿ, ಸಾರ್ವಜನಿಕರು ಉಪಸ್ಥಿತರಿದ್ದರು.

  300x250 AD
  Share This
  300x250 AD
  300x250 AD
  300x250 AD
  Back to top