• Slide
    Slide
    Slide
    previous arrow
    next arrow
  • ಇಂಡಿಯನ್ ಬುಕ್ ಆಫ್ ರೆಕಾರ್ಡ್, ಏಷ್ಯಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತ ಮಾಸ್ಟರ್ ಅದ್ವೈತ

    300x250 AD

    ಶಿರಸಿ: ಇಲ್ಲಿನ ಬಹುಮುಖ‌ ಬಾಲ ಪ್ರತಿಭೆ ಮಾಸ್ಟರ್ ಅದ್ವೈತ ಕಿರಣಕುಮಾರ ಕುಡಾಳಕರ ಅಗಷ್ಟ 14ರಂದು ಹಿಂದೂ ಜಾಗರಣಾ ವೇದಿಕೆ ಆಯೋಜಿಸಿದ ಎಪ್ಪತೈದನೇ ಸ್ವಾತ್ರಂತ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ಮೂಲಕ ರಾಷ್ಟ್ರಗೀತೆ ಜನಗಣಮನವನ್ನು 75 ಬಾರಿ ತಡೆರಹಿತ ಒಂದು ತಾಸು ಎಂಟು ನಿಮಿಷದಲ್ಲಿ ನುಡಿಸಿರುತ್ತಾನೆ. ಈತನ ಸಾಧನೆಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಅಲ್ಲದೇ ಏಷ್ಯಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ.

    ನಗರದಲ್ಲಿ ಆಯೋಜಿಸಿದ ಕನ್ನಡ ನುಡಿ ನಮನ ಕಾರ್ಯಕ್ರಮದಲ್ಲಿ ಮಾಸ್ಟರ್ ಅದ್ವೈತನಿಗೆ ಈ‌ ಎರಡೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಸ್ಪಂದನಾ ಸಂಸ್ಥೆಯಿಂದ ಕಿರಿಯ ಅಪ್ರತಿಮ ಸಾಧನಾ ಪುರಸ್ಕಾರಕ್ಕೂ ಮಾಸ್ಟರ್ ಅದ್ವೈತ ಭಾಜನನಾಗಿದ್ದಾನೆ.

    300x250 AD

    ನಗರದ ಸೆಂಟ್ ಅಂಥೋನಿ ಶಾಲೆಯಲ್ಲಿ ಮೂರನೆ ತರಗತಿಯ ವಿದ್ಯಾರ್ಥಿಯಾಗಿದ್ದು,‌ ಕಳೆದ ಎರಡು ವರ್ಷಗಳಿಂದ ಶಿರಸಿಯ ವಿದ್ವಾನ ಶ್ರೀರಂಗ ಹೆಗಡೆಯವರಲ್ಲಿ‌ ಸಂಗೀತಾಭ್ಯಾಸವನ್ನು ಮಾಡುತ್ತಿದ್ದು, ಮಕ್ಕಳ ದಿನಾಚರಣೆಯ ಈ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಪಡೆದ ಬಾಲಕನ ಈ ಸಾಧನೆಗೆ ಶಿಕ್ಷಣ ಸಂಸ್ಥೆಗಳು ಸಂತೋಷವನ್ನು ವ್ಯಕ್ತಪಡಿಸಿದ್ದು‌ ಬಾಲಕನ ಮುಂದಿನ ಭವಿಷ್ಯಕ್ಕೆ ಶುಭಾಶೀರ್ವದಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top