ದಾಂಡೇಲಿ: ವಕ್ಫ್ ಬೋರ್ಡಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಂಡೇಲಿಯ ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಯು ಇದೇ ನ:15 ರಿಂದ ನ:29 ರವರೆಗೆ ಲಿಂಕ್ ರಸ್ತೆಯಲ್ಲಿರುವ ಅಂಜುಮನ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದ್ದು, ದಾಂಡೇಲಿ ನಗರ ಹಾಗೂ ತಾಲ್ಲೂಕು ವ್ಯಾಪ್ತಿಯ 18 ವರ್ಷ ತುಂಬಿದ ಮುಸ್ಲಿಂ ಪುರುಷ ಅಭ್ಯರ್ಥಿಗಳು ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಯ ಸಾಮಾನ್ಯ ಸದಸ್ಯರಾಗಿ ತಮ್ಮ ಹೆಸರನ್ನು ನೋಂದಾಯಿಸುವಂತೆ ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷರಾದ ತಸ್ವರ ಸೌದಾಗರ್ ಅವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ 13 ವರ್ಷಗಳ ಹಿಂದೆ 2850/- ರೂ ನಿಂದ ಆರಂಭಗೊಂಡ ಸಂಸ್ಥೆ ಇಂದು ಮೂರುವರೆ ಕೋಟಿ ಅಂದಾಜು ಬೆಲೆಯ ಆಸ್ತಿಯನ್ನು ಹೊಂದಿದೆ. ಧರ್ಮ ಜಾಗೃತಿಯ ಜೊತೆಗೆ ಅನೇಕ ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ಹಮ್ಮಿಕೊಂಡು ಬಂದಿದೆ. ಕಳೆದ ಒಂದು ವರ್ಷದಿಂದ ಸಂಸ್ಥೆಗೆ ಚುನಾವಣೆ ನಡೆಸಬೇಕೆಂದು ಮನವಿ ಮಾಡುತ್ತಲೆ ಬಂದಿದ್ದೇವೆ. ಇದೀಗ ಅದಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಗೆ ದಿನ ನಿಗದಿಪಡಿಸಲಾಗಿದೆ. 18 ವರ್ಷ ಮೇಲ್ಪಟ್ಟ ಮುಸ್ಲಿಂ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಸಂಸ್ಥೆಯ ಸದಸ್ಯತ್ವವನ್ನು ಪಡೆದುಕೊಳ್ಳಬೇಕಾಗಿ ತಸ್ವರ್ ಸೌದಾಗರ್ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರುಗಳಾದ ಫಿರೋಜ್ ಖಾನ್ ಬಾಲೆಖಾನ್, ಬಸೀರ್ ಗಿರಿಯಾಲ, ಮಹಮ್ಮದ್ ಶರೀಪ್ ಜಾತಿಗಾರ್, ಮಹಮ್ಮದ್ ಗೌಸ್ ಖತೀಬ್, ದಿಲವರ್ ನಾಯ್ಕರ್, ಇಬ್ರಾಹಿಂ ಮಕಾಂದಾರ್, ಮಹಮ್ಮದ್ ಗೌಸ್ ಬೆಟಗೇರಿ, ನಜೀರ್ ಅಹಮ್ಮದ್ ಕೊಳೂರು, ಬಸೀರ್ ಧಪೇದಾರ್ ಮತ್ತು ಮಹಮ್ಮದ್ ಗೌಸ್ ಪಟೇಲ್ ಉಪಸ್ಥಿತರಿದ್ದರು.